
ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ, ಇಲ್ಲೊಬ್ಬ 29 ವರ್ಷದ ಯುವಕ ಮದುವೆ ಮಾಡಿಕೊಂಡು ಕರಾವಳಿ ತೀರದ ಪ್ರದೇಶಕ್ಕೆ ಹನಿಮೂನ್‌ಗೆ ಹೆಂಡತಿ ಕರೆದುಕೊಂಡು ಹೋಗಿದ್ದಾನೆ. ಹೆಂಡತಿಯೊಂದಿಗೆ ಬೀಚ್‌ನ ಬಳಿ ಹೋಗುವಾಗ ಯುವಕನಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ದುರಂತವಾಗಿ ಸಾವಿಗೀಡಾಗಿದ್ದಾನೆ.
ಈ ಘಟನೆ ಅಮೆರಿಕದ ಫ್ಲೋರಿಡಾದ ಪ್ರಸಿದ್ಧ ಬೀಚ್‌ನಲ್ಲಿ ನಡೆದಿದೆ. ಕೊಲೊರಾಡೋ ಮೂಲದ ನವದಂಪತಿಗಳು ಹನಿಮೂನ್‌ಗಾಗಿ ಫ್ಲೋರಿಡಾಗೆ ಬಂದಿದ್ದರು. ಸಿಡಿಲು ಬಡಿದ ತಕ್ಷಣ ಸಿಪಿಆರ್ ಸೇರಿದಂತೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಫ್ಲೋರಿಡಾದ ನ್ಯೂ ಸ್ಮಿರ್ನಾ ಬೀಚ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಯುವಕನಿಗೆ ಮಾತ್ರವಲ್ಲದೆ, ಹತ್ತಿರದ ಗಾಲ್ಫ್ ಮೈದಾನದಲ್ಲಿದ್ದ ಇಬ್ಬರಿಗೂ ಸಿಡಿಲು ಬಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗಾಲ್ಫ್ ಕ್ರೀಡಾಂಗಣದಲ್ಲಿದ್ದವರಿಗೆ ಗಾಯಗಳಾಗಿದ್ದರೂ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹನಿಮೂನ್‌ಗೆ ಬಂದಿದ್ದ ಯುವಕ ಜೇಕ್ ರೋಸೆನ್‌ಕ್ರಾನ್ಸ್ ಮೃತ ವ್ಯಕ್ತಿ ಎಂಬುದು ತಿಳಿದುಬಂದಿದೆ. ಪ್ರಕೃತಿ ವಿಕೋಪ ಇದ್ದರೂ, ಆಕಾಶ ಸ್ಪಷ್ಟವಾಗಿದ್ದರಿಂದ ಬೀಚ್‌ನಲ್ಲಿ ಅನೇಕ ಜನರಿದ್ದರು. ಆದರೆ, ಏಕಾಏಕಿ ಈ ಘಟನೆ ನಡೆದಿದೆ.
ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಲಹೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ