ನವದೆಹಲಿ(ಮೇ.28): ವಿಮಾನ ನಿಲ್ದಾಣದಲ್ಲಿ ತಮ್ಮ ತಮ್ಮ ವಿಮಾನಕ್ಕೆ ಜನ ಕಾಯುತ್ತಿದ್ದರು, ಇತ್ತ ಚೆಕ್ ಇನ್ ಪ್ರಕ್ರಿಯೆಯಲ್ಲಿ ಹಲವರು ಸಕ್ರಿಯರಾಗಿದ್ದರು. ಈ ವೇಳೆ ಏಕಾಏಕಿ ವಿಮಾನ ನಿಲ್ದಾಣದ LED ಸ್ಕ್ರೀನ್, ಪರದೆ ಮೇಲೆ ಅಶ್ಲೀಲ ಚಿತ್ರ ಪ್ರದರ್ಶನವಾಗಿದೆ. ಪೂರ್ನ್ ಮೂವಿಯಿಂದ ಹಲವರಿಗೆ ಮುಜುಗರವಾಗಿದೆ. ಮತ್ತೆ ಕೆಲವರು ಮೈಮರೆತು ಅಶ್ಲೀಲ ಚಿತ್ರ ನೋಡುತ್ತಲೇ ಕುಳಿತಿದ್ದಾರೆ. ಪರಿಣಾಮ ಹಲವರ ವಿಮಾನ ಮಿಸ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಈ ಘಟನೆ ನಡೆದಿರುವುದು ಬ್ರೆಜಿಲ್‌ನ ರಿಯೋದಲ್ಲಿರುವ ಸ್ಯಾಂಟೋಸ್ ಡುಮಾಂಟ್ ಏರ್‌ಪೋರ್ಟ್‌ನಲ್ಲಿ. ಪ್ರಯಾಣಕ್ಕಾಗಿ ನಿಲ್ದಾಣ ಒಳಗೆ ಬಂದ ಪ್ರಯಾಣಿಕರಿಗೆ ಅಚ್ಚರಿ ಕಾದಿದೆ. ವಿಮಾನ ನಿಲ್ದಾಣದಲ್ಲಿರುವ ಸ್ಕ್ರೀನ್‌ಗಳಲ್ಲಿ ಪೋರ್ನ್ ಚಿತ್ರ ಪ್ರದರ್ಶನವಾಗುತ್ತಿದೆ. ಮಕ್ಕಳ ಜೊತೆ ಆಗಮಿಸಿದ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದರು.
ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಪಾರ್ನ್ ಸಿನೆಮಾ ಪ್ರದರ್ಶನ: ತನಿಖೆಗೆ ಆದೇಶ
ಇತ್ತ ಹದಿ ಹರೆಯದ ಮಂದಿ ಎಲ್ಲವನ್ನೂ ಮರೆತು ಪೋರ್ನ್ ಚಿತ್ರ ವೀಕ್ಷಿಸುತ್ತಾ ಕುಳಿತಿದ್ದಾರೆ. ಅತ್ತ ವಿಮಾನದ ಸಮಯ ಬಂದರೂ ಪೋರ್ನ್ ಚಿತ್ರ ಮಿಸ್ ಮಾಡದೆ ನೋಡಿದ್ದಾರೆ. ಪರಿಣಾಮ ಕೆಲವರ ವಿಮಾನವೇ ಮಿಸ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಏರ್‌ಪೋರ್ಟ್‌ನಲ್ಲಿನ ಅಶ್ಲೀಲ ಚಿತ್ರ ಪ್ರದರ್ಶನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಏರ್‌ಪೋರ್ಟ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಪೋರ್ನ್ ಚಿತ್ರ ಪ್ರಸಾರವಾಗಿರುವುದು ಜಾಹೀರಾತು ಸ್ಕ್ರೀನ್‌ಗಳಲ್ಲಿ. ಜಾಹೀರಾತು ಸ್ಕ್ರೀನ್‌ಗಳನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಈ ಖಾಸಗಿ ಜಾಹೀರಾತು ಪ್ರಸಾರವಾಗುವ ಸ್ಕ್ರೀನ್‌ಗಳಲ್ಲಿ ವಿಮಾನ ನಿಲ್ದಾಣದ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇತ್ತ ಜಾಹೀರಾತು ಸ್ಕ್ರೀನ್ ನಿರ್ವಹಣೆ ಮಾಡುವ ಖಾಸಗಿ ಸಂಸ್ಥೆ ಕೂಡ ಈ ಕುರಿತು ಪ್ರತಿಕ್ರಿಯಿಸಿದೆ. ನಮ್ಮ ಸ್ಕ್ರೀನ್ ಹ್ಯಾಕ್ ಮಾಡಿ ಪೋರ್ನ್ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದಿದೆ.
ಸುಮ್ನೆ ಪೋರ್ನ್ ವೀಡಿಯೋ ನೋಡ್ತಾ ಕೂತ್ರೆ ಸಾಕು, ಗಂಟೆಗೆ 1500 ರೂ. ಕೊಡ್ತಾರೆ..!
ಪೋರ್ನ್ ಚಿತ್ರ ಪ್ರಸಾರವಾಗುತ್ತಿದ್ದರೂ ನಿಲ್ಲಿಸುವ, ಸ್ಕ್ರೀನ್ ಆಫ್ ಮಾಡುವ ಕಾರ್ಯಕ್ಕೆ ಏರ್‌ಪೋರ್ಟ್ ಸಿಬ್ಬಂದಿಗಳು ಮುಂದಾಗಿಲ್ಲ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದೇ ಕಾರಣ ನಾನು ರಿಯೋ ನಗರವನ್ನು ಪ್ರೀತಿಸುತ್ತೇನೆ. ಇಲ್ಲಿನ ಕಾರ್ನಿವಲ್ ಫೆಸ್ಟಿವಲ್‌ಗಾಗಿ ರಿಯೋಗೆ ಭೇಟಿ ಕೊಡುತ್ತೇನೆ. ಇದೀಗ ಪದೇ ಪದೇಗೆ ಏರ್‌ಪೋರ್ಟ್‌ಗೂ ಭೇಟಿ ನೀಡಬೇಕು ಎಂದಿದ್ದಾರೆ.
ಹವಾಮಾನ ವರದಿ ನಡುವೆ ಪೋರ್ನ್ ವಿಡಿಯೋ ಪ್ರಸಾರ!
ಟೀವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಒಮ್ಮೊಮ್ಮೆ ವಿವಾದ ಸೃಷ್ಟಿಮಾಡುವುದು ಸಾಮಾನ್ಯ ಆದರೆ ಅಮೆರಿಕದ ಸ್ಥಳೀಯ ಮಾಧ್ಯಮವೊಂದು ಹವಾಮಾನ ವರದಿ ಪ್ರಸಾರದ ವೇಳೆ ಪೋರ್ನ್ ವಿಡಿಯೋವನ್ನು ಪ್ರಸಾರ ಮಾಡಿ ಸಮಸ್ಯೆಗೆ ಸಿಲುಕಿಕೊಂಡಿದೆ. ಹವಾಮಾನ ವರದಿಯ ಗ್ರಾಫಿಕ್ ವಿಡಿಯೋದಲ್ಲಿ ನಿರೂಪಕಿ ಹವಾಮಾನ ವರದಿ ನೀಡುವ ಸಮಯದಲ್ಲಿ ಆಕೆಯ ಭುಜದ ಮೇಲೆ ಪೋರ್ನ್ ವಿಡಿಯೋ ಪ್ರಸಾರವಾಗಿದೆ. ಆದರೆ ಈ ವಿಷಯವನ್ನು ನಿರೂಪಕಿಯಾಗಲಿ, ಪ್ಯಾನಲ್‌ನವರಾಗಲೀ ಗಮನಿಸದೇ ಇದ್ದುದರಿಂದ ಹವಾಮಾನ ವರದಿ ಮುಗಿಯುವವರೆಗೂ ವಿಡಿಯೋ ಪ್ರಸಾರವಾಗಿದೆ. ವೀಕ್ಷಕರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಾಹಿನಿ ಇದಕ್ಕಾಗಿ ಕ್ಷಮೆ ಕೇಳಿದೆ.