ಮೃತಪಟ್ಟ ನಾಯಿಯಿಂದ 41 ಲಕ್ಷ ರೂಪಾಯಿ ಗೆದ್ದ ಮಾಲೀಕ, ಪೆಟ್ ಡಾಗ್ ನೆನೆದು ಭಾವುಕ!

By Chethan Kumar  |  First Published Aug 22, 2024, 9:47 PM IST

ಮುದ್ದಿನ ನಾಯಿ ಮೃತಪಟ್ಟು ಕೆಲ ದಿನಗಳು ಉರುಳಿದೆ. ನೋವು ಮಾತ್ರ ಮಾಲೀಕನ ಮನಸ್ಸಿನಿಂದ ಮಾಯವಾಗಿರಲಿಲ್ಲ. ಆದರೆ ಇದೇ ನಾಯಿಯ ನೆನಪು ಮಾಲೀಕನಿಗೆ 41 ಲಕ್ಷ ರೂಪಾಯಿ ಗೆಲ್ಲುವಂತೆ ಮಾಡಿದೆ.


ವಾಶಿಂಗ್ಟನ್(ಆ.22) ನಿಯತ್ತಿಗೆ ಮತ್ತೊಂದು ಹೆಸರೆ ನಾಯಿ. ಅನ್ನ ಹಾಕಿದ ಮಾಲೀಕನ ಯಾವತ್ತೂ ಮರೆಯಲ್ಲ, ನಾಯಿ ತೋರುವ ಪ್ರೀತಿ, ಕಾಳಜಿ, ಜೊತೆಗೆ ನೀಡುವ ರಕ್ಷಣೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಹುತೇಕರು ಸಾಕು ನಾಯಿ ಮೇಲೆ ಅತಿಯಾದ ಪ್ರೀತಿ ತೋರುತ್ತಾರೆ. ಹೀಗೆ ವ್ಯಕ್ತಿಯೊಬ್ಬ ಜರ್ಮನ್ ಶೆಫರ್ಡ್ ನಾಯಿ ಸಾಕಿದ್ದ. ಪ್ರೀತಿಯ ನಾಯಿ ಅಚಾನಕ್ಕಾಗಿ ಮೃತಪಟ್ಟಿದೆ. ನಾಯಿ ಮೃತಪಟ್ಟು ಹಲವು ದಿನಗಳು ಉರುಳಿದರೂ ನೋವು ಹಾಗೇ ಉಳಿದಿತ್ತು. ಆದರೆ ಇದೇ ನಾಯಿಯ ನೆನಪು ಮಾಲೀಕನಿಗೆ ಬರೋಬ್ಬರಿ 41 ಲಕ್ಷ ರೂಪಾಯಿ ಗೆಲ್ಲುವಂತೆ ಮಾಡಿದೆ.

ಅಮೆರಿಕದ ವಾಶಿಂಗ್ಟನ್ ಸ್ಟ್ರೀನ್‌ ರೋಗರ್ಸ್ ಸೋರ್ಸ್ ಅನ್ನೋ ವ್ಯಕ್ತಿ ನಾಯಿ ಸಾಕಿದ್ದ. ತಾನು ಎಲ್ಲಿಗೆ ಹೋದರು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ. ನಾಯಿ ಕೂಡ ಮಾಲೀಕನ ಮಾತಿನಂತೆ ನಡೆಯುತ್ತಿತ್ತು. ರೋಗರ್ಸ್ ಹಾಗೂ ಮುದ್ದಿನ ನಾಯಿಯ ಪ್ರೀತಿ ಮುದ್ದಾಟ ಹೀಗೆ ಮುಂದುವರಿದಿತ್ತು. ಇತ್ತೀಚೆಗೆ ಈ ಜರ್ಮನ್ ಶೆಫರ್ಡ್ ನಾಯಿ ಮೃತಪಟ್ಟಿದೆ. 

Tap to resize

Latest Videos

undefined

ನಕಲಿ ಕರೆ ಎಂದು 6 ತಿಂಗಳಿನಿಂದ ನಿರ್ಲಕ್ಷಿಸಿದ ವ್ಯಕ್ತಿಗೆ ಕಾದಿತ್ತು ಅಚ್ಚರಿ!

ನಾಯಿ ಮೃತಪಟ್ಟ ಆಘಾತದಿಂದ ಮಾಲೀಕ ಚೇತರಿಸಿಕೊಳ್ಳಲು ಕೆಲ ದಿನಗಳನ್ನೇ ತೆಗೆದುಕೊಂಡಿದ್ದ. ದಿನಗಳು ಉರುಳಿದರೂ ತನ್ನ ಮುದ್ದಿನ ನಾಯಿ ಇನ್ನಿಲ್ಲ ಅನ್ನೋ ಕೊರಗು ನೋವು ಮಾತ್ರ ಕಾಡುತ್ತಲೇ ಇತ್ತು. ಹೀಗಿರುವಾಗ ಶಾಪಿಂಗ್ ವೇಳೆ ಲಾಟರಿ ಟಿಕೆಟ್ ಖರೀದಿಸಲು ಮುಂದಾಗಿದ್ದಾನೆ. ಈ ವೇಳೆ ತಮಗಿಷ್ಠದ ನಂಬರ್ ಮೇಲೆ ಟಾಟರಿ ಟಿಕೆಟ್ ಖರೀದಿಸಿ ಟಿವಿ ಶೋನಲ್ಲಿ ಫಲಿತಾಂಶ ಪರೀಕ್ಷಿಸಲು ಈತ ಮುಂದಾಗಿದ್ದಾನೆ.

ಟಿಕೆಟ್ ನಂಬರ್ ಸೆಟ್ ಮಾಡಿಕೊಡುವಂತೆ ಡೀಲರ್ ಸೂಚಿಸಿದ್ದಾರೆ. ಈ ವೇಳೆ 1-0-8-2-2 ಎಂಬ ನಂಬರ್ ಸೆಟ್ ಮಾಡಿ ಟಿಕೆಟ್ ಖರೀದಿಸಿದ್ದಾನೆ. ಬಳಿಕ ಕೆಲ ದಿನಗಳ ಬಳಿಕ ಟಿವಿ ಶೋನಲ್ಲಿ ಫಲಿತಾಂಶ ಪ್ರಕಟಗೊಂಡಾಗ ಅಚ್ಚರಿಯಾಗಿದೆ. 1-0-8-2-2 ನಂಬರ್ ಲಾಟರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ಗೆದ್ದಿದ್ದಾನೆ. ಭಾರತೀಯ ರೂಪಾಯಿಗಳಲ್ಲಿ 41 ಲಕ್ಷ ರೂಪಾಯಿ.

ಎಲ್ಲರಿಗೂ ಅಚ್ಚರಿಯಾಗಿದೆ. ಈ ನಂಬರ್ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗಿತ್ತು. ಈ ವೇಳೆ ಉತ್ತರಿಸಿದ ರೋಗರ್ಸ್, ಇದು ನನ್ನ ಜರ್ಮನ್ ಶೆಫರ್ಡ್ ನಾಯಿಯ ಲೈಸೆನ್ಸ್ ನಂಬರ್.  ನಾಯಿಗೆ ಸ್ಥಳೀಯ ಆಡಳಿತ ಲೈಸೆನ್ಸ್ ನೀಡಿತ್ತು. ನಾಯಿ ಮೃತಪಟ್ಟ ನೋವು ಮಾಸಿರಲಿಲ್ಲ. ಒಂದು ನಂಬರ್ ಸೆಟ್ ಮಾಡಬೇಕು ಎಂದಾಗ ಬೇರೆ ನಂಬರ್ ನನಗೆ ತೋಚಲಿಲ್ಲ. ಹೀಗಾಗಿ ಈ ನಂಬರ್ ನೀಡಿದೆ. ಮೃತಪಟ್ಟ ಬಳಿಕವೂ ನನಗೆ ನೆರವು ನೀಡುತ್ತಿರುವ ನಾಯಿ ನೆನೆದು ರೋಗರ್ಸ್ ಭಾವುಕರಾಗಿದ್ದಾರೆ.

ಕೆಲಸ ಕಳೆದುಕೊಂಡ ಎರಡೇ ದಿನದಲ್ಲಿ ಜಾಕ್‌ಪಾಟ್: 2.5 ಕೋಟಿ ರೂ ಲಾಟರಿ ಗೆದ್ದ ಮಹಿಳೆ!

click me!