
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬುದು ಎಲ್ಲರಿಗೂ ಗೊತ್ತು. ಅದರಂತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಧರೆ ಎಲನ್ ಮಸ್ಕ್ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ವಿಶ್ವದ ಅತ್ಯಂತ ಶ್ರೀಮಂತ ನಗರ ಯಾವುದು ಎಂದು ನಿಮಗೆ ತಿಳಿದಿದೆಯೇ? ಈ ಶ್ರೀಮಂತ ನಗರದಲ್ಲಿ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ 24 ಜನರಲ್ಲಿ ಓರ್ವ ಕೋಟ್ಯಾಧಿಪತಿಯಾಗಿರುತ್ತಾನೆ. ಅಷ್ಟೇ ಅಲ್ಲ, ಈ ಅಂಕಿ ಅಂಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಕನಸಿನ ನಗರಿ ಬೇರಾವುದೂ ಅಲ್ಲ, ನ್ಯೂಯಾರ್ಕ್. ಹೆನ್ಲಿ & ಪಾರ್ಟ್ನರ್ಸ್ ಬಿಡುಗಡೆ ಮಾಡಿರುವ ಶ್ರೀಮಂತ ನಗರಗಳ ಪಟ್ಟಿಯ ಪ್ರಕಾರ - ನ್ಯೂಯಾರ್ಕ್‌ನಲ್ಲಿ ಸುಮಾರು 3,49,500 ಕೋಟ್ಯಾಧಿಪತಿಗಳು ವಾಸಿಸುತ್ತಿದ್ದಾರೆ. 2012 ಮತ್ತು 2022 ರ ನಡುವೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕೆಲವು ಶ್ರೀಮಂತರು ನಗರದಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದರೂ, ಇಲ್ಲಿ ವಾಸಿಸುವ ಶ್ರೀಮಂತ ಜನರ ಸಂಖ್ಯೆಯಲ್ಲಿ 40% ರಷ್ಟು ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಬಳಿಕ ಬುಲೆಟ್ ಪ್ರೂಫ್ ಕಾರಿನಲ್ಲಿ ರಾಜ್ಯಪಾಲರ ಓಡಾಟ!
ನ್ಯೂಯಾರ್ಕ್‌ನಲ್ಲಿ ಒಟ್ಟು ಜನಸಂಖ್ಯೆ ಸುಮಾರು 82 ಲಕ್ಷ ವಿದೆ. ಇದರಲ್ಲಿ 744 ಜನರು 100 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಹೆನ್ಲಿ & ಪಾರ್ಟ್ನರ್ಸ್ ವಿಶ್ವದ 10 ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆನ್ಲಿ & ಪಾರ್ಟ್ನರ್ಸ್ ಹೆಚ್ಚು ಶ್ರೀಮಂತ ನಗರ ಮಾತ್ರವಲ್ಲ, ನಿವ್ವಳ ಮೌಲ್ಯ, ಶ್ರೀಮಂತ ಪರಂಪರೆ, ಭೌಗೋಳಿಕ ಭೂಪ್ರದೇಶ, ಕೈಗಾರಿಕೆಗಳು, ವಿಶ್ವ ಮಟ್ಟದಲ್ಲಿ ಪ್ರಭಾವ ಬೀರುವ ಸ್ಥಳೀಯ ಅಭಿವೃದ್ಧಿ ಮತ್ತು ಇಲ್ಲಿ ವಾಸಿಸುವ ಕೋಟ್ಯಾಧಿಪತಿಗಳ ಸಂಖ್ಯೆಯ ಆಧಾರದ ಮೇಲೆ ನಗರಗಳನ್ನು ಮೌಲ್ಯಮಾಪನ ಮಾಡಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಈ ವಿಷಯದಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದೆ.
ಸಿಬಿಐಗೆ ಸ್ಫೋಟಕ ಮಾಹಿತಿ! ಆ ರಾತ್ರಿ ಕೊಲ್ಕತ್ತಾ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದೇಕೆ?
ಇನ್ನು ವಿಶ್ವದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕದ ಹಣಕಾಸು ಕೇಂದ್ರವು ಮೊದಲ ಸ್ಥಾನದಲ್ಲಿದೆ, ಆದರೆ ಮ್ಯಾನ್‌ಹ್ಯಾಟನ್‌ನಲ್ಲಿರುವ ಫಿಫ್ತ್ ಅವೆನ್ಯೂದಲ್ಲಿ, ವಸತಿ ಅಪಾರ್ಟ್ಮೆಂಟ್ ಬೆಲೆಗಳು ಗರಿಷ್ಠ ಮಟ್ಟದಲ್ಲಿವೆ. ನ್ಯೂಯಾರ್ಕ್ ನಗರವು ವಿಶ್ವದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ - ನಾಸ್ಡಾಕ್ ಮತ್ತು NYSE ಗಳಿಗೂ ನೆಲೆಯಾಗಿದೆ. ಉತ್ತರ ಕ್ಯಾಲಿಫೋರ್ನಿಯಾ, ಟೋಕಿಯೊ, ಸಿಂಗಾಪುರ್, ಲಂಡನ್, ಲಾಸ್ ಏಂಜಲೀಸ್, ಪ್ಯಾರಿಸ್, ಸಿಡ್ನಿ, ಹಾಂಗ್ ಕಾಂಗ್ ಮತ್ತು ಅಂತಿಮವಾಗಿ ಬೀಜಿಂಗ್, ನ್ಯೂಯಾರ್ಕ್ ನಂತರದ ಸ್ಥಾನಗಳನ್ನು ಪಡೆದಿವೆ.
ಇವುಗಳನ್ನು ಹೊರತುಪಡಿಸಿ ಉತ್ತರ ಕ್ಯಾಲಿಫೋರ್ನಿಯಾ, ಟೋಕಿಯೊ, ಸಿಂಗಾಪುರ್, ಲಂಡನ್, ಲಾಸ್ ಏಂಜಲೀಸ್, ಪ್ಯಾರಿಸ್, ಸಿಡ್ನಿ, ಹಾಂಗ್ ಕಾಂಗ್ ಮತ್ತು ಕೊನೆಯದಾಗಿ ಬೀಜಿಂಗ್ ಕ್ರಮವಾಗಿ ಎರಡನೇ, ಮೂರನೇ, ನಾಲ್ಕನೇ, ಐದನೇ, ಆರನೇ, ಏಳನೇ, ಎಂಟು, ಒಂಬತ್ತನೇ ಮತ್ತು ಹತ್ತನೇ ಸ್ಥಾನವನ್ನು ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ