ನವದೆಹಲಿ: ಶ್ವಾನ ಪ್ರೇಮಿಗಳು ಶ್ವಾನದ ಮೇಲೆ ತೋರುವ ಪ್ರೀತಿ ಪದಗಳಲ್ಲಿ ವರ್ಣಿಸಲಾಗದ್ದು, ಕೆಲವೊಮ್ಮೆ ಶ್ವಾನಗಳ ಮೇಲಿನ ಈ ಪ್ರೀತಿ ಅತಿರೇಕ ಎಂದರೂ ತಪ್ಪಗಲಾರದು. ಶ್ವಾನಗಳನ್ನು ಮಕ್ಕಳಂತೆ ಮನೆಯ ಸದಸ್ಯನಂತೆ ನೋಡುವ ಸಂಸ್ಕೃತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಯುವಕನೋರ್ವ ತನ್ನ ಹಸ್ಕಿ ತಳಿಯ ಶ್ವಾನವನ್ನು ತೀರ್ಥಯಾತ್ರೆಯ ವೇಳೆ ದೇಗುಲಗಳಿಗೂ ಕರೆದೊಯ್ದಿದ್ದ. ಇದು ವಿವಾದವನ್ನು ಸೃಷ್ಟಿಸಿತ್ತು. ಈ ನಡುವೆ ಯುವಕನೋರ್ವ ತನ್ನ ಶ್ವಾನವನ್ನು ತನ್ನೊಂದಿಗೆ ಪ್ಯಾರಾ ಗ್ಲೈಡಿಂಗ್ ಕರೆದೊಯ್ದಿದ್ದು ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ವಾನವನ್ನು ಪ್ಯಾರಾಗ್ಲೈಡಿಂಗ್ (Paraglaiding) ಕರೆದೊಯ್ದಿದ್ದಕ್ಕೆ ಅನೇಕರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನ ಹಾಗೂ ಅದರ ಮಾಲೀಕ ಜೊತೆಯಾಗಿ ಪ್ಯಾರಾ ಗ್ಲೈಡಿಂಗ್‌ಗೆ ಆಕಾಶಕ್ಕೆ ಏರಿ ಬಾನಲ್ಲಿ ಹಾರುತ್ತಿದ್ದಾರೆ. ಆದರೆ ಶ್ವಾನಕ್ಕೆ ಇದು ಕೂಲ್ ಅನಿಸಿಲ್ಲ. ಅದರ ಮುಖ ನೋಡಿದರೆ ಹೆದರಿ ತರಗುಟ್ಟುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ವಿಡಿಯೋ ನೋಡಿದವರೆಲ್ಲಾ ಶ್ವಾನದ ಮಾಲೀಕನಿಗೆ (Dog Owner) ಹಿಗ್ಗಾಮುಗ್ಗಾ ಬೈದಾಡಿದ್ದಾರೆ. ಲ್ಯಾಡ್ ಬೈಬಲ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನ ವಿಡಿಯೋ ವೀಕ್ಷಿಸಿದ್ದಾರೆ.
ವಾಕಿಂಗ್ ಹೋಗುವ ತಾತನಿಗಾಗಿ ದಿನವೂ ಕಾಯುವ ಶ್ವಾನ: ಮುದ್ದಾದ ವಿಡಿಯೋ ವೈರಲ್
GoPro ಕ್ಯಾಮರಾ ಬಳಸಿ ಈ ದೃಶ್ಯವನ್ನು ಶ್ವಾನದ (Pet Dog) ಮಾಲೀಕ ಸೆರೆ ಹಿಡಿದಿದ್ದಾನೆ. ಶ್ವಾನವೂ ಇದರಿಂದ ಬಹಳಷ್ಟು ಹೆದರಿದಂತೆ ಕಾಣಿಸುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶ್ವಾನ ಪ್ಯಾರಾಗ್ಲೈಡಿಂಗ್ ಇಷ್ಟ ಪಟ್ಟಂತೆ ಕಾಣಿಸುತ್ತಿಲ್ಲ. ಅದು ತುಂಬಾ ಹೆದರಿಕೊಂಡಿದೆ. ಅವುಗಳು ಇಂತಹವುಗಳಿಗೆ ಹೆದರುತ್ತವೆ. ಅವುಗಳು ಹುಷಾರು ತಪ್ಪುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಶ್ವಾನಕ್ಕೂ ಗ್ಲಾಸ್ ಹಾಕಬೇಕಿತ್ತು. ಗಾಳಿಯ ಒತ್ತಡಕ್ಕೆ ಅವುಗಳ ಕಣ್ಣಿಗೂ ಹಾನಿಯಾಗುತ್ತವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕಣ್ಣುಗಳಿಗೆ ರಕ್ಷಣೆ ನೀಡಿದ್ದೀರಿ ಶ್ವಾನದ ಕಣ್ಣಿಗೆ ರಕ್ಷಣೆ ಏಕಿಲ್ಲ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಶ್ವಾನವೂ ಸಂಕಟ ಪಡುವಂತೆ ಕಾಣಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಶ್ವಾನಗಳು ಮನುಷ್ಯನ ಅಚ್ಚುಮೆಚ್ಚಿನ ಸ್ನೇಹಿತರು. ಶ್ವಾನಗಳು ಹಾಗೂ ಮನುಷ್ಯರ ನಡುವಿನ ಮುದ್ದಾದ ಒಡನಾಟದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ನೋಡಿದ್ದೇವೆ. ಶ್ವಾನಗಳ ಮೇಲೆ ಮನುಷ್ಯರು ತೋರುವ ಪ್ರೀತಿ ಕೆಲವೊಮ್ಮೆ ಅವುಗಳ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಕೆಲವು ಶ್ವಾನ ಪ್ರಿಯರು ಅವುಗಳನ್ನು ಮುದ್ದು ಮಾಡುವ ಭರದಲ್ಲಿ ಜೊತೆಯಲ್ಲಿಯೇ ಮಲಗಿಸಿಕೊಳ್ಳುತ್ತಾರೆ.
ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ
ಹೀಗೆಯೇ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಎರಡು ಲ್ಯಾಬ್ರಾಡಾರ್ ತಳಿಯ (Labrodar breed) ಶ್ವಾನಗಳು ನಿದ್ದೆಗೆ ಜಾರಿರುವ ಮನುಷ್ಯನನ್ನು ಮೇಲೇಳಿಸುವ ವಿಡಿಯೋ ವೈರಲ್ ಆಗಿತ್ತು. ಶ್ವಾನ ಏಳುವವರೆಗೂ ಬಿಡದ ಈ ಶ್ವಾನಗಳು ಆತನ ಬೆಡ್ಶಿಟ್ ಎಳೆದು ಕಾಲುಗಳನ್ನು ನಿಧಾನಕ್ಕೆ ಕಚ್ಚುವ ಮೂಲಕ ಆತನಿಗೆ ಕಚಗುಳಿ ಇಡುತ್ತವೆ. ನಾಯಿ ಸಾಕದ ಸಾಮಾನ್ಯ ಮನುಷ್ಯರು ಹೇಗೆ ಏಳುತ್ತಾರೆ ಹಾಗೂ ನಾಯಿ ಸಾಕುವ ಶ್ವಾನಪ್ರಿಯರು ಬೆಳಗ್ಗೆ ಹೇಗೆ ಏಳುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ನಾಯಿ ಸಾಕದವರು ತಮ್ಮ ಮೊಬೈಲ್ ಫೋನ್‌ಗೆ (Mobile phone) ನಿದ್ದೆಗಣ್ಣಲ್ಲೇ ತಡಕಾಡುತ್ತಾ ಸಮಯ ನೋಡಿಕೊಂಡು ಮೇಲೇಳುತ್ತಾರೆ. ಆದರೆ ಶ್ವಾನ ಸಾಕಿದ ಮಾಲೀಕ ಮಾತ್ರ ಆತನಿಗೆ ಎಚ್ಚರವಾಗುವ ಮೊದಲೇ ಶ್ವಾನಗಳು ಆತನನ್ನು ಎಳಿಸುತ್ತವೆ. ಈ ವಿಡಿಯೋ ತುಂಬಾ ಮುದ್ದಾಗಿದ್ದು, ಈ ವಿಡಿಯೋ ನೋಡಿದ ಬಹುತೇಕ ಶ್ವಾನಪ್ರಿಯ ನೆಟ್ಟಿಗರು ಇದು ನಿಜ ಎಂದು ಹೇಳಿದ್ದಾರೆ. ladyandtheblues ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, 1.8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ