ಪರಾಕಾಷ್ಠೆ ಸುಖ ಪಡೆಯಲು ಗೂಳಿ ವಯಾಗ್ರ ತಿಂದ..ಪರಿಣಾಮ ಏನ್ ಚೆಂದ!

By Suvarna News  |  First Published Jan 13, 2020, 9:37 PM IST

ಗೂಳಿಗಳಿಗೆ ನೀಡುವ ವಯಾಗ್ರ ತಿಂದ/ ಮಹಿಳೆ ಜತೆ ಪರಾಕಾಷ್ಠೆ ಸರಸಕ್ಕೆ ಮುಂದಾಗಿದ್ದ/ ಮೂರು ದಿನವಾದರೂ ಬದಲಾಗದ ಜನನಾಂಗದ ಗಾತ್ರ/ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ


ಮೆಕ್ಸಿಕೊ[ಜ.13] ಆ ಮನುಷ್ಯನಿಗೆ ಅಪರಿಮಿತ ಬೇಕಾಗಿತ್ತು. ಗೂಳಿಗಳಿಗೆ ನೀಡುವ ಲೈಂಗಿಕ ಉತ್ತೇಜಕವನ್ನು ಸೇವಿಸಿದ್ದಾನೆ. ಒಂದಲ್ಲ-ಎರಡಲ್ಲ ಈ ವ್ಯಕ್ತಿ ಮೂರು ದಿನ ಪಟ್ಟ ಪಾಡು!

ಈ ಲೈಂಗಿಕ ಉತ್ತೇಜಕ ಸೇವಿಸುತ್ತಿದ್ದಂತೆ ಆತನ ಜನನಾಂಗ ತೀವ್ರವಾಗಿ ಉದ್ರೇಕಗೊಂಡಿದೆ. ಇದಾದ ಮೇಲೆ ಯಮನೋವು ಆರಂಭವಾಗಿದೆ. ನೋವು ತಾಳಲಾರದೆ ವ್ಯಕ್ತಿ ಇದೀಗ ಆಸ್ಪತ್ರೆಗೆ ಬಂದು ಮಲಗಿದ್ದಾನೆ.

Tap to resize

Latest Videos

ಇದೆಲ್ಲಾ ಆಗಿರುವುದು ದೂರದ ಮೆಕ್ಸಿಕೋದಲ್ಲಿ. ವ್ಯಕ್ತಿ ಇದೀಗ ಅಮೆರಿಕಾ ಹಾಗೂ ಮೆಕ್ಸಿಕೊ ಗಡಿ ನಗರ ರೇನೋಸಾದ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಚಿಕೆ ಬಿಟ್ಟ ಜೋಡಿಯಿಂದ ಚಲಿಸುವ ಬಸ್ ನಲ್ಲೇ ಸಂಭೋಗ

ವೆರಾಕ್ರಜ್ ಪಟ್ಟಣದಲ್ಲಿ ವಾಸಿಸುವ ವ್ಯಕ್ತಿ 30 ವರ್ಷದ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಲು ಹಾತೊರೆದಿದ್ದಾನೆ. ಇದೇ ಕಾರಣಕ್ಕೆ ಲೈಂಗಿಕ ಉತ್ತೇಜಕಗಳ ಖರೀದಿ ಮಾಡಿ ಸೇವಿಸಿದ್ದಾನೆ.

ಉತ್ತೇಜಕ ಸೇವಿಸಿದ ನಂತರ ಜನನಾಂಗ ದೊಡ್ಡದಾಗಿದೆ. ಮೂರು ದಿನಗಳ ಕಾಲ ಹಾಗೆ ಉಳಿದಿದೆ. ಈ ನಡುವೆ ನೋವು ತೀವ್ರವಾಗಿ ಬಾಧಿಸಲು ಆರಂಭಿಸಿದೆ. ನೋವು ತಾಳಲಾರದೆ ವ್ಯಕ್ತಿ ಆಸ್ಪತ್ರೆಯ ಹಾದಿ ಹಿಡಿದಿದ್ದಾರೆ.

ಈ ಉತ್ತೇಜಕ ಸೇವಿಸಿದಾಗ ಸಾಮಾನ್ಯವಾಗಿ 4 ತಾಸುಗಳ ಕಾಲ ಲೈಂಗಿಕ ಉತ್ತೇಜನ ಇರಬಹುದು. ಆದರೆ ಈತನ ವಿಚಾರದಲ್ಲಿ ಅದು ಮೂರು ದಿನಕ್ಕೆ ಬಂದು ನಿಂತಿದೆ.  ಚಿಕಿತ್ಸೆ ಸರಿಯಾಗಿ ಸಿಗದಿದ್ದರೆ ಜನನಾಂಗ ಕಳೆದುಕೊಳ್ಳಬೇಕಾದ ಆತಂಕ ಇದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

click me!