'ಸೆಕ್ಸ್ ಮಷೀನ್' ಖ್ಯಾತಿಯ ಡೈಗೋಗೆ ಪ್ಲೇ ಬಾಯ್ ಲೈಫಿಂದ ಮುಕ್ತಿ!

By Suvarna News  |  First Published Jan 13, 2020, 1:39 PM IST

ಸಂತತಿ ಉಳಿಸಿದ 'ಸೆಕ್ಸ್ ಮಷೀನ್' ಖ್ಯಾತಿಯ ಡೈಗೋಗೆ ಕೊನೆಗೂ ಮುಕ್ತಿ!| ಶತಕ ಪೂರೈಸಿದ ಈತನಿಗೆ, ಸಂತತಿ ಉಳಿಸಿದ ಕೀರ್ತಿ| ಬರೋಬ್ಬರಿ 60 ವರ್ಷದ ಬಳಿಕ ಸ್ವಂತ ನಾಡಿನತ್ತ ಡೈಗೋ


ಕ್ಯಾಲಿಫೋರ್ನಿಯಾ[ಜ.13]: ಕೇವಲ 20 ಸಂಖ್ಯೆಗಿಳಿದು ಅಳಿವಿನಂಚಿನಲ್ಲಿದ್ದ ತನ್ನ ಸಂತತಿಯನ್ನು ಉಳಿಸಿ, ಅದನ್ನು 2000ಕ್ಕೇರಿಸಿದ ಸಂತೃಪ್ತಿಯೊಂದಿಗೆ ಶತಕ ಪೂರೈಸಿದ ದೈತ್ಯ ಆಮೆ ಡೈಗೋ ಮತ್ತೆ ಅದರ ಸ್ವಂತ ಊರಿಗೆ ಮರಳಲು ಸಿದ್ಧವಾಗಿದೆ. 

ಹೌದು ಅಮೆರಿಕದ ಕ್ಯಾಲಿಫೋರ್ನಿಯಾ ಸಾಂತಾ ಕ್ರೂಜ್ ದ್ವೀಪದಲ್ಲಿ ಇಂತಹ ದೈತ್ಯ ಆಮೆಗಳ ಸಂತತಿ ಗಣನೀಯವಾಗಿ ಕ್ಷೀಣಿಸಲಾರಂಭಿಸಿತ್ತು. ಒಂದು ಹಂತದಲ್ಲಿ ಇದು ಕೇವಲ 20 ಆಮೆಗಳಷ್ಟೇ ಉಳಿದಿದ್ದವು. ಹೀಗಿರುವಾಗ ಅಳಿವಿನಂಚಿನಲ್ಲಿರುವ ಆಮೆಗಳನ್ನು ಉಳಿಸಲು, ಸಂತಾನಭಿವೃದ್ಧಿ ಹೆಚ್ಚಿಸುವ ಕಾರ್ಯಕ್ರಮದಡಿ 1960ರಲ್ಲಿ ಗೊಲಪಾಗಾಸ್‌ ದ್ವೀಪದಿಂದ ಗಂಡು ಆಮೆ ಡೈಗೋ ಸೇರಿದಂತೆ ಒಟ್ಟು 14 ಆಮೆಗಳನ್ನು ಸಾಂತಾ ಕ್ರೂಜ್‌ ದ್ವೀಪಕ್ಕೆ ಕರತರಲಾಗಿತ್ತು.

Latest Videos

undefined

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಇದೀಗ ಬರೋಬ್ಬರಿ 60 ವರ್ಷಗಳ ಬಳಿಕ ಸಾಂತಾ ಕ್ರೂಜ್‌ ದ್ವೀಪದಲ್ಲಿ ಈ ದೈತ್ಯ ಆಮೆಗಳ ಸಂಖ್ಯೆ ವೃದ್ಧಿಯಾಗಿದ್ದು, ಇವುಗಳ ಸಂಖ್ಯೆ 2 ಸಾವಿರ ದಾಟಿದೆ. ಈ ಪೈಕಿ 800 ಡೈಗೋನಿಂದ ಜನಿಸಿವೆ ಎನ್ನಲಾಗಿದೆ. ಈ ದೈತ್ಯ ಆಮೆಗಳ ಸಂತಾನ ಅಭಿವೃದ್ಧಿಯಲ್ಲಿ ಡೈಗೋ ತನ್ನದೇಯಾದ ಮಹತ್ವದ ಹಾಗೂ ವಿಶೇಷ ಪಾತ್ರವಹಿಸಿದೆ ಎನ್ನಲಾಗಿದೆ.

ಸದ್ಯ ಸಾಂತಾ ಕ್ರೂಜ್‌ ದ್ವೀಪದಲ್ಲಿ ಆಮೆ ಸಂತತಿ ಹೆಚ್ಚಿಸುವ ಯೋಜನೆ ಯಶಸ್ವಿಯಾಗಿದ್ದು, ಮಾರ್ಚ್ ವೇಳೆಗೆ ಡೈಗೋ ಆಮೆಯನ್ನು ಮತ್ತೆ ಅದರ ಸ್ವಂತ ನಾಡು ಗೊಲಪಾಗಾಸ್‌ ದ್ವೀಪಕ್ಕೆ ಕಳುಹಿಸಲಾಗುತ್ತದೆ. ಸಾಂತಾ ಕ್ರೂಜ್‌ ದ್ವೀಪಕ್ಕೆ ಪ್ಲೇಬಾಯ್‌ ನಂತೆ ಆಗಮಿಸಿ ತನ್ನ ಸಂತತಿ ಉಳಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಡೈಗೋ ಈಗ ಶತಕವನ್ನು ಪೂರೈಸಿದೆ. 

ಇನ್ನು ಡೈಗೋ ಸ್ವಂತ ನಾಡು ಗೊಲಪಾಗಾಸ್‌ ದ್ವೀಪ ಜೀವವೈವಿಧ್ಯ ತಾಣವಾಗಿದ್ದು, ಇದನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗಗರು ಭೇಟಿ ನೀಡುತ್ತಾರೆ.

ಫ್ಲರ್ಟ್ ಬಾಯ್ ಜೊತೆ ಈಕೆಗೆ ಲವ್; ಹೊಟ್ಟೆಯೊಳಗೆ ಚಿಟ್ಟೆ ಓಡಾಡಲು ಶುರು..!

click me!