ಯಾರೂ ಕೂಡ ಅಪಾಯಕಾರಿಯಾದ ಮೊಸಳೆಗಳೊಂದಿಗೆ ಚೆಲ್ಲಾಟವಾಡಲು ಹೋಗುವುದಿಲ್ಲ. ಆದಾಗ್ಯೂ ಇಲ್ಲೊರ್ವ ಯುವಕ ಹುಚ್ಚು ಸಾಹಸ ಮಾಡಲು ಹೋಗಿ ತನ್ನ ಒಂದು ಕೈಯನ್ನೇ ಕಳೆದುಕೊಂಡಿದ್ದಾನೆ.
ಮೊಸಳೆಗಳು ಅತ್ಯಂತ ಅಪಾಯಕಾರಿ ಸರೀಸೃಪಗಳು, ಅತ್ಯಂತ ಮಾರಣಾಂತಿಕವೆನಿಸಿದ ಪರಭಕ್ಷಕಗಳು ಎಂದು ಅವುಗಳನ್ನು ಪರಿಗಣಿಸಲಾಗಿದೆ. ಮೊಸಳೆ ಎಂದ ತಕ್ಷಣ ಬಹುತೇಕರು ಹೆದರಿ ಸುರಕ್ಷಿತ ಸ್ಥಳಗಳಿಗೆ ಹೋಗುವುದೇ ಹೆಚ್ಚು, ಯಾರೂ ಕೂಡ ಅಪಾಯಕಾರಿಯಾದ ಮೊಸಳೆಗಳೊಂದಿಗೆ ಚೆಲ್ಲಾಟವಾಡಲು ಹೋಗುವುದಿಲ್ಲ. ಆದಾಗ್ಯೂ ಇಲ್ಲೊರ್ವ ಯುವಕ ಹುಚ್ಚು ಸಾಹಸ ಮಾಡಲು ಹೋಗಿ ತನ್ನ ಒಂದು ಕೈಯನ್ನೇ ಕಳೆದುಕೊಂಡಿದ್ದಾನೆ. ಫಿಜೆನ್ ಎಂಬ twitter ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋ ನೋಡಿ ಹೌಹಾರಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಮೊಸಳೆ ಉದ್ಯಾನವನದ ಕೆಲಸಗಾರನಂತೆ ಕಾಣುವ ವ್ಯಕ್ತಿಯೊಬ್ಬ ಮೊಸಳೆಯ ಬಾಯಿಯೊಳಗೆ ಕೈ ಹಾಕಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮೊಸಳೆಯು ತನ್ನ ಬಾಯಿಯನ್ನು ಅಗಲವಾಗಿ ತೆರೆದುಕೊಂಡು ಮಲಗಿಕೊಂಡಿದೆ. ಹೀಗೆ ಬಾಯ್ತೆರೆದು ಮಲಗಿರುವ ಮೊಸಳೆಯ ಮುಂದೆ ಯುವಕ ಸಾಹಸ ಮಾಡಲು ಹೋಗಿ, ತನ್ನ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ. ಯುವಕ ತನ್ನ ಬಲಗೈಯನ್ನು ಮೊಸಳೆಯ ಬಾಯೊಳಗೆ ಇಟ್ಟಿದ್ದಾನೆ. ಕೂಡಲೇ ಮೊಸಳೆಗೆ ಇದು ಲಡ್ಡು ಬಂದು ಬಾಯಿಗೆ ಬಿತ್ತ ಎಂಬಂತೆ ಆಗಿದ್ದು, ನಿರೀಕ್ಷಿಸದೇ ಬಾಯಿಗೆ ಆಹಾರ ಬಿದ್ದಂತಾಗಿದ್ದು, ಅದು ಈತನ ಕೈಯನ್ನು ಕಚ್ಚಿ ಎಳೆದಾಡಿದೆ. ಈ ವೇಳೆ ಸ್ಟಂಟ್ ಮಾಡುವ ಸರದಿ ಮೊಸಳೆ ಪಾಲಾಗಿದ್ದು, ಯುವಕನ ಕೈಯನ್ನು ಕಚ್ಚಿ ಮೊಸಳೆ ಎಳೆದಾಡಿದೆ. ಇತ್ತ ಸುಮ್ಮನಿರಲಾರದೆ ಅಪಾಯಕಾರಿ ಮೊಸಳೆಯೆದರು ಸಾಹಸ ಮಾಡಲು ಹೋದ ಯುವಕನ ಸ್ಥಿತಿ ಇರಲಾರದೇ ಇರುವೆ ಬಿಟ್ಕೊಂಡ ಎಂಬಂತಾಗಿದೆ.
I don't know what to say to you bro!pic.twitter.com/oYoE2zRoHc
— Figen (@TheFigen)ಮೊಸಳೆ ಹಿಡಿದೆಳೆದಾಗ ನೋವಿನ ನಡುವೆಯೂ ಆತ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಆದಾಗ್ಯೂ ಆತನ ಒಂದು ಕೈ ಸಂಪೂರ್ಣ ಮೊಸಳೆ ಪಾಲಾಗಿದೆ. ಮೊಸಳೆ ಆತನ ಕೈಯನ್ನು ಬಾಯಲ್ಲಿ ಕಚ್ಚಿ ಮೂರು ಸುತ್ತು ತಿರುಗಿಸುತ್ತದೆ. ಈ ದೃಶ್ಯ ನೋಡಲು ಭಯಾನಕವಾಗಿದ್ದು, ಇದನ್ನು ಬೇರೆಲ್ಲೂ ಪ್ರಯತ್ನಿಸದಿರಿ ಎಂದು ಕಾಮೆಂಟ್‌ಗಳು ಬಂದಿವೆ. ಆಗಸ್ಟ್ 12 ರಂದು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಆಗಿನಿಂದಲೂ ಈ ವಿಡಿಯೋವನ್ನು 1.95 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಮೃಗಾಲಯ ಕೆಲಸಗಾರ ಮೂರ್ಖ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.
ದೈತ್ಯ ಹಾವಿನೊಂದಿಗೆ ಯುವಕನ ಚೆಲ್ಲಾಟ: ಫೋಟೋಗೆ ಸಖತ್ ಪೋಸ್
ಸಾಮಾನ್ಯವಾಗಿ ಮೊಸಳೆಗಳು ಭಯಾನಕವಾದ ಸರೀಸೃಪಗಳಾಗಿದ್ದು, ದೂರದರ್ಶನ, ಪಂಜರ ಅಥವಾ ಬೇರೆಡೆ ಅವುಗಳನ್ನು ಎಲ್ಲಿ ನೋಡಿದರೂ ಭಯವಾಗುತ್ತದೆ. ಇವುಗಳು ಮೂಕ ಕೊಲೆಗಾರರಾಗಿದ್ದು, ತಮ್ಮ ಬೇಟೆಯನ್ನು ಹಿಡಿಯುತ್ತೇವೆ ಎಂದು ಖಚಿತವಾಗುವವರೆಗೆ ಅವುಗಳು ಪ್ರತಿಕ್ರಿಯಿಸುವುದಿಲ್ಲ. ಆದರೆ ಅವು ಒಮ್ಮೆ ತಮ್ಮ ಬೇಟೆಯನ್ನು ಹಿಡಿಯಲು ಮುಂದಾದರೆ ತಡೆಯಲು ಸಾಧ್ಯವೇ ಇಲ್ಲ. ಟ್ವಿಟ್ಟರ್‌ನಲ್ಲಿ 11 ಸೆಕೆಂಡ್‌ಗಳ ವೀಡಿಯೊವನ್ನು ಹಂಚಿಕೊಂಡ ಫಿಜೆನ್, 'ನಿಮಗೆ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಸಹೋದರ' ಎಂದು ಬರೆದುಕೊಂಡಿದ್ದಾರೆ.
ಯುವಕನೋರ್ವ ಸಿಂಹದ (Lion) ಜೊತೆ ಚೆಲ್ಲಾಟವಾಡಲು ಹೋಗಿ ತನ್ನ ಬೆರಳನ್ನೇ ಕಳೆದುಕೊಂಡ ಘಟನೆ ಜಮೈಕಾದ (Jamaica) ಮೃಗಾಲಯದಲ್ಲಿ (Zoo) ಕೆಲ ದಿನಗಳ ಹಿಂದೆ ನಡೆದಿತ್ತು. ಯುವಕನೋರ್ವ ಮೃಗಾಲಯದಲ್ಲಿದ್ದ ಸಿಂಹದ ಜೊತೆ ಆಟವಾಡಲು ಹೋಗಿದ್ದಾನೆ. ಸಿಂಹ ಇದ್ದ ಗೂಡಿಗೆ ಅಳವಡಿಸಿದ ಕಬ್ಬಿಣದ ನೆಟ್‌ನ ಸೆರೆಯಲ್ಲಿ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ತಲೆ ಸವರಲು ಯತ್ನಿಸಿದ್ದಾನೆ. ಈತನ ಉಪಟಳದಿಂದ ಸಿಂಹ ವ್ಯಾಘ್ರಗೊಂಡಿದ್ದು, ಈತನ ಮೇಲೆ ಮುಗಿ ಬೀಳುವ ಯತ್ನ ಮಾಡಿದೆ. ಸಿಂಹ ಕೋಪಗೊಂಡಿದ್ದು ತಿಳಿದರು ಆತ ಮಾತ್ರ ತನ್ನ ಚೆಲ್ಲಾಟವಾಡುವುದನ್ನು ನಿಲ್ಲಿಸದೇ ಪದೇ ಪದೇ ಕಬ್ಬಿಣದ ನೆಟ್ಟೊಳಗೆ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ಯತ್ನಿಸಿದ್ದಾನೆ.
ಮೊಸಳೆ ಜೊತೆ ಯುವಕನ ಚೆಲ್ಲಾಟ, ಆಮೇಲೇನಾಯ್ತು ನೋಡಿ
ಸುಮ್ಮನಿದ್ದ ತನ್ನನ್ನು ಪದೇ ಪದೇ ಕೆಣಕಿ ಕಿರುಕುಳ ನೀಡುತ್ತಿರುವ ಈತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಸಿಂಹ ಹೊಂಚು ಹಾಕಿ ಈತನ ಬೆರಳನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದಿದೆ. ಈಗ ಆಟವಾಡುವ ಟೈಮ್ ಸಿಂಹದ್ದಾಗಿದ್ದು ಯುವಕ ಏನೇ ಮಾಡಿದ್ದು ಸಿಂಹ ಮಾತ್ರ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಬೆರಳು ತುಂಡಾಗುವವರೆಗೂ ಆತನನ್ನು ಬಿಟ್ಟಿಲ್ಲ. ಬೆರಳಿನ ಮೂಳೆ ಮಾತ್ರ ಉಳಿದಿದ್ದು, ಹೊರಭಾಗದ ಮಾಂಸವೆಲ್ಲಾ ಸಿಂಹದ ಪಾಲಾಗಿದೆ. ಒಂದು ವೇಳೆ ಇವರಿಬ್ಬರ ಕಾದಾಟದ ಸಮಯದಲ್ಲಿ ಕಬ್ಬಿಣದ ನೆಟ್ ಎಲ್ಲಾದರೂ ಜಾರಿದ್ದಾರೆ. ಕೇವಲ ಬೆರಳು ಮಾತ್ರವಲ್ಲ. ಇಡೀ ದೇಹವೇ ಸಿಂಹದ ಪಾಲಾಗುತ್ತಿದ್ದಿದ್ದಂತು ಸುಳ್ಳಲ್ಲ.