ಬೀದಿನಾಯಿಯೊಂದು ನೈಟ್‌ಕ್ಲಬ್‌ಗೆ ಭೇಟಿ ನೀಡಿ ಗಿಟಾರ್ ವಾದನಕ್ಕೆ ಬೆರಗಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದಿನಾಯಿಯೊಂದು ನೈಟ್‌ಕ್ಲಬ್‌ಗೆ ಭೇಟಿ ನೀಡಿ ಗಿಟಾರ್ ವಾದನಕ್ಕೆ ಬೆರಗಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಬಾರ್‌ವೊಂದರಲ್ಲಿ ಗಿಟಾರ್ ಬಾರಿಸುತ್ತಿದ್ದು, ಈತ ಗಿಟಾರ್ ಬಾರಿಸುತ್ತಿದ್ದಂತೆ ಶ್ವಾನ ಬಾಲ ಅಲ್ಲಾಡಿಸುತ್ತಾ ಆತನ ಮುಂದೆ ಕುಳಿತುಕೊಂಡು ಆತನನ್ನೇ ನೋಡುತ್ತದೆ. ಅಲ್ಲದೇ ಸ್ವಲ್ಪ ಹೊತ್ತಿನಲ್ಲೇ ಆತನ ಸಮೀಪ ಬಂದು ಗಿಟಾರ್ ಮೇಲೆ ಕೈಯಾಡಿಸುತ್ತದೆ. ಇತ್ತ ಶ್ವಾನದ ಖುಷಿ ನೋಡಿದ ಗಿಟಾರ್ ವಾದಕ ಶ್ವಾನದ ಕೈಯಲ್ಲಿ ಗಿಟಾರ್ ಬಾರಿಸುವ ಪ್ರಯತ್ನ ಮಾಡುತ್ತಾನೆ. ಈ ವಿಡಿಯೋವನ್ನು ಗುಡ್‌ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಶ್ವಾನ ಹಾಗೂ ಗಿಟಾರ್ ವಾದಕನ ಒಡನಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. 43 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಹೃದಯದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ನಾನು ಈ ವಿಡಿಯೋವನ್ನು ದಿನವಿಡಿ ನೋಡುತ್ತೇನೆ. ಎಷ್ಟು ಸುಂದರವಾದ ಪುಟ್ಟ ನಾಯಿ, ತುಂಬಾ ಸ್ನೇಹಪರವಾಗಿದ್ದು, ಗಿಟಾರ್ ಪ್ಲೇ ಮಾಡುತ್ತಿರುವ ಯುವಕನನ್ನು ಇಷ್ಟ ಪಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಹಲವು ಪ್ರಸಿದ್ಧ ತಳಿಯ ಶ್ವಾನಗಳನ್ನು ಜನರು ಮನೆಯಲ್ಲಿ ಸಾಕುವುದು ಅವುಗಳಿಗೆ ಮನೆ ಸದಸ್ಯನಂತೆ ಸ್ಥಾನಮಾನ ನೀಡಿ ಅವುಗಳಿಗೆ ಸ್ನಾನ ಮಾಡಿಸಿ ಅವುಗಳೊಂದಿಗೆ ಹಾಸಿಗೆಯಲ್ಲಿ ಮಲಗಿಕೊಂಡು ನಿದ್ದೆ ಮಾಡುವ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಆದರೆ ಬೀದಿ ನಾಯಿಗಳು ಕೂಡ ಜೀವ ಇರುವ ಪ್ರಾಣಿಗಳು ಅವುಗಳಿಗೂ ಮನಸ್ಸಿದೇ ಎಂದು ನೋಡುವವರು ಕಡಿಮೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಸಾಮಾನ್ಯ ತಳಿಯ ಶ್ವಾನಗಳು ಮನುಷ್ಯರಿಗೆ ಅತ್ಯಂತ ಸ್ವಾಮಿನಿಷ್ಠರಾಗಿರುತ್ತವೆ. ಶ್ವಾನಗಳು ಮನುಷ್ಯನ ಅತ್ಯಂತ ಮೆಚ್ಚಿನ ಸಾಕು ಪ್ರಾಣಿಗಳು ಆಗಿವೆ. ತನ್ನ ಸಾಕಿದಾತನನ್ನು ಜೀವಕ್ಕೂ ಮಿಗಿಲಾಗಿ ಪ್ರೀತಿಸುವ ಶ್ವಾನ ಕೆಲವೊಮ್ಮೆ ಪ್ರಾಣ ಕೊಡಲು ಸಿದ್ಧವಾಗಿರುತ್ತದೆ. ಮಾಲೀಕ ಸತ್ತಾಗ ಅನ್ನಾಹಾರ ಬಿಟ್ಟು ಶ್ವಾನವೂ ಪ್ರಾಣ ಬಿಟ್ಟಂತಹ ಹಾಗೂ ಕೆಲವು ಅಪಾಯಗಳಿಂದ ತನ್ನ ಮಾಲೀಕನನ್ನು ರಕ್ಷಿಸಿದಂತಹ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ.
ಒಟ್ಟಿನಲ್ಲಿ ಇತ್ತೀಚೆಗೆ ಫ್ಯಾಷನ್ಡ್ ಆಗಿರುವ ನಾಯಿಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ಸಾಮಾನ್ಯ ತಳಿಯ ಶ್ವಾನಗಳನ್ನು ಕೂಡ ಅದೇ ರೀತಿ ಪ್ರೀತಿ ಕಾಳಜಿ ತೋರಿ ಸಾಕಬೇಕು ಎಂಬುದು ಶ್ವಾನಪ್ರಿಯರ ಆಗ್ರಹವಾಗಿದೆ.
ಕೆಲ ದಿನಗಳ ಹಿಂದೆ ಶ್ವಾನವೊಂದು ಮಕ್ಕಳ ರಸ್ತೆ ದಾಟಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ರಿಪಬ್ಲಿಕ್ ಆಫ್ ಜಾರ್ಜಿಯಾದ ನಗರ ಬಟುಮಿಯಲ್ಲಿ ಶ್ವಾನವೊಂದು ಮಕ್ಕಳು ರಸ್ತೆ ದಾಟುವ ಸಮಯದಲ್ಲಿ ವಾಹನಗಳು ಮುಂದೆ ಬರದಂತೆ ಜೋರಾಗಿ ಬೊಗಳುತ್ತಾ ಮಕ್ಕಳು ರಸ್ತೆ ದಾಟುವವರೆಗೆ ರಸ್ತೆಯಲ್ಲೇ ಅತ್ತಿತ್ತ ಓಡಾಡುತ್ತದೆ. ಈ ಶ್ವಾನದ ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು.
ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ
ಮಕ್ಕಳು ರಸ್ತೆ ದಾಟುತ್ತಿರುವಾಗಲೇ ವೇಗವಾಗಿ ಬರುತ್ತಿರುವ ಕಾರುಗಳನ್ನು ನೋಡಿ ಜೋರಾಗಿ ಬೊಗಳುವ ಶ್ವಾನ ಅವುಗಳನ್ನು ನಿಲ್ಲಿಸುವ ಯತ್ನ ಮಾಡುತ್ತದೆ. ಹಾಗಂತ ಇದು ಸಾಕಿದ ನಾಯಿ ಅಲ್ಲವಂತೆ ಇದೊಂದು ಬೀದಿ ನಾಯಿ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ನಾಯಿಗೆ ಎಷ್ಟೊಂದು ಬುದ್ಧಿವಂತಿಕೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮನುಷ್ಯರಿಂತ ಈ ಶ್ವಾನ ಎಷ್ಟೋ ಮೇಲು ಎಂದು ಜನ ಕಾಮೆಂಟ್ ಮಾಡಿದ್ದಾರೆ. ಈ ಶ್ವಾನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ ನಂತರ ಅಡ್ಜರಾದ ಪ್ರವಾಸೋದ್ಯಮ ಇಲಾಖೆ ಈ ಶ್ವಾನಕ್ಕೆ ಪೀಪಲ್ಸ್ ಚಾಯಿಸ್ ಅವಾರ್ಡ್ ನೀಡಿ ಗೌರವಿಸಿದೆ ಎಂದು ತಿಳಿದು ಬಂದಿದೆ.
ಮಗುವಿನ ಮೇಲೆ ನಾಯಿಯ ಪೊಸೆಸಿವ್‌ನೆಸ್: ಟಚ್ ಮಾಡಲು ಬಿಡದೆ ಕಾಯುವ ಶ್ವಾನ