ಶ್ರಾವಣಿ ಸುಬ್ರಮಣ್ಯ ಸಿನಿಮಾ ಸ್ಟೈಲಲ್ಲಿ ಸೇಡು: ಯುವಕನಿಗೆ ಬರೋಬರಿ ದಂಡ ವಿಧಿಸಿದ ಕೋರ್ಟ್

Published : Aug 19, 2022, 12:00 PM ISTUpdated : Aug 19, 2022, 02:34 PM IST
ಶ್ರಾವಣಿ ಸುಬ್ರಮಣ್ಯ ಸಿನಿಮಾ ಸ್ಟೈಲಲ್ಲಿ ಸೇಡು: ಯುವಕನಿಗೆ ಬರೋಬರಿ ದಂಡ ವಿಧಿಸಿದ ಕೋರ್ಟ್

ಸಾರಾಂಶ

ಇಲ್ಲೊಬ್ಬ ಭೂಪ ದೂರಾದ ತನ್ನ ಗೆಳತಿಗೆ ಬುದ್ಧಿ ಕಲಿಸಲು ಯಾರೂ ಊಹಿಸದ ಕೆಲಸ ಮಾಡಿದ್ದು, ಈಗ ನ್ಯಾಯಾಲಯ ಈತನ ಗಲೀಜು ಕೆಲಸಕ್ಕೆ ಬರೋಬ್ಬರಿ 91 ಸಾವಿರ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದ್ದಾರೆ.

ಎವ್ರಿಥಿಂಗ್ ಇಸ್‌ ಫೈನ್ ಇನ್ ಲವ್‌ ಎಂಡ್ ವಾರ್ ಎಂಬ ಇಂಗ್ಲೀಷ್ ಉಕ್ತಿಯನ್ನು ನೀವು ಕೇಳಿರಬಹುದು. ಪ್ರೀತಿ ಹಾಗೂ ಯುದ್ಧದಲ್ಲಿ ಏನು ಮಾಡಿದರು ಸರಿ ಎಂಬುದು ಇದರರ್ಥ ಹಾಗೆಯೇ ಒಂದು ಸಂಬಂಧದಲ್ಲಿದ್ದಾಗ ಅಥವಾ ಒಬ್ಬರು ಇಷ್ಟವಾದರೆ ಏನು ಮಾಡಿದರು ಅವರು ಏನು ಮಾಡಿದರು ಸರಿ. ಆದರೆ ಸಂಬಂಧ ಹಳಸಿದ ಮೇಲೆ ಒಳ್ಳೆಯದೇ ಮಾಡಿದರೂ ನಮಗೆ ಅದರಲ್ಲಿ ಕೆಟ್ಟತನವೇ ಕಾಣುವುದೇ ಹೊರತು ಒಳ್ಳೆಯದು ಕಾಣದು. ಸಂಬಂಧ ಕೆಟ್ಟ ಮೇಲೆ ಬಹುತೇಕರು ತಮ್ಮ ಒಂದು ಕಾಲದ ಆತ್ಮೀಯರಿಗೆ ಒಳ್ಳೆಯದೇ ಮಾಡಲು ಹೋಗುವುದು ತೀರಾ ಕಡಿಮೆ ಹಾಗಂತ ಕೆಟ್ಟದು ಮಾಡದೇ ಇದ್ದರೆ ಎಲ್ಲರಿಗೂ ಒಳಿತು. ಕೆಲವು ಪ್ರೇಮ ಸಂಬಂಧಗಳು ಮದುವೆಯಲ್ಲಿ ಸುಖಾಂತ್ಯ ಕಂಡರೆ ಮತ್ತೆ ಕೆಲವರಿಗೆ ಪ್ರೇಮ ದುಸ್ವಪ್ನವಾಗಿ ಕಾಡುತ್ತದೆ. ಆದರಿಂದ ಹೊರಬರಲು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಸಂಬಂಧ ಕೆಟ್ಟ ಮೇಲೆ ಪರಸ್ಪರ ದ್ವೇಷ ಭಾವ ಮೂಡುತ್ತದೆ. ಭಾವನೆಗಳ ಜೊತೆ ಆಟವಾಡಿದವನಿಗೆ/ಅವಳಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಭೂಪ ದೂರಾದ ತನ್ನ ಗೆಳತಿಗೆ ಬುದ್ಧಿ ಕಲಿಸಲು ಯಾರೂ ಊಹಿಸದ ಕೆಲಸ ಮಾಡಿದ್ದು, ಈಗ ನ್ಯಾಯಾಲಯ ಈತನ ಗಲೀಜು ಕೆಲಸಕ್ಕೆ ಬರೋಬ್ಬರಿ 91 ಸಾವಿರ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದ್ದಾರೆ. ಹಾಗಂತ ಆತ ಮಾಡಿದ್ದೇನು ಅಂತ ಕೇಳಿದರೆ ನೀವು ಅಚ್ಚರಿಗೊಳ್ಳುವಿರಿ.

ನೀವು ಗಣೇಶ್ ಹಾಗೂ ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಮಣ್ಯ ಸಿನಿಮಾದಲ್ಲಿ ಇಂತಹದ್ದೇ ಒಂದು ದೃಶ್ಯವಿದೆ. ಆದರೆ ಇದಕ್ಕೆ ಸಮಾನಾದ ಸೇಡು ತೀರಿಸಿಕೊಳ್ಳುವ ದೃಶ್ಯವಿದೆ. ಸುಬ್ರಮಣ್ಯನ ವರ್ತನೆಯಿಂದ ಕೋಪಗೊಂಡ ಶ್ರಾವಣಿ ಆತ ಹಲ್ಲುಜ್ಜುವ ಬ್ರಷ್‌ ತೆಗೆದುಕೊಂಡು ಇಡೀ ಬಾತ್ ರೂಮ್‌ನ್ನು ಆ ಬ್ರಶ್‌ನಿಂದ ಸ್ವಚ್ಛಗೊಳಿಸುತ್ತಾಳೆ. ಈ ಮೂಲಕ ಸೇಡು ತೀರಿಸಿಕೊಂಡು ಖುಷಿ ಪಡುತ್ತಾಳೆ. ಆದರೆ ಈ ಪ್ರಕರಣದಲ್ಲಿ ಇಲ್ಲೊರ್ವ ಯುವಕ ತನ್ನ ಮಾಜಿ ಗೆಳತಿಯ ಬ್ಯಾಗ್‌ನಲ್ಲಿ ಮೂತ್ರ ಮಾಡಿದ್ದಾನೆ.


ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಈ ಘಟನೆ ನಡೆದಿದೆ. ಆಕ್ಟೋಬರ್ 2021ರಲ್ಲಿ ತನ್ನ ಗೆಳತಿಯ ಜೊತೆ ಜಗಳವಾಡಿ ಬ್ರೇಕ್‌ಅಪ್‌ ಮಾಡಿಕೊಂಡ 31 ವರ್ಷದ ಯುವಕ ಗೆಳತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ವಿಭಿನ್ನ ದಾರಿ ಹಿಡಿದಿದ್ದ. ಇಬ್ಬರು ಗಂಗ್ನಮ್ ಗು ಎಂಬಲ್ಲಿ ಯುವತಿಯ ಮನೆಯಲ್ಲಿ ವಾಸವಿದ್ದರು. ಈ ವೇಳೆ ಶುರುವಾದ ಮಾತಿನ ಚಕಮಕಿ ಗೆಳತಿ ಹಣದ ವಿಚಾರವಾಗಿ ಮಾತನಾಡಲು ಶುರುವಾದಾಗ ವಿಕೋಪಕ್ಕೆ ತಿರುಗಿತ್ತು. ಅವಳು ಈ ಸಂಬಂಧಕ್ಕಾಗಿ ಖರ್ಚು ಮಾಡುತ್ತಿರುವ ಹಣ ಹಾಗೂ ಹೆಚ್ಚಾಗುತ್ತಿರುವ ವೆಚ್ಚದ ಬಗ್ಗೆ ಮಾತನಾಡಿದ್ದಳು. ಇದನ್ನು ಸಹಿಸದ ಗೆಳೆಯ  ಆತನ ವಿರುದ್ಧ ಸೇಡಿಗೆ ಮುಂದಾಗಿದ್ದ. ಆಕೆಯ ಬೆಡ್‌ರೂಮಿಗೆ ತೆರಳಿದ ಮಾಜಿ ಗೆಳೆಯ ಆಕೆಯ ಅತ್ಯಂತ ದುಬಾರಿ ಬೆಲೆಯ Louis Vuitton ಹ್ಯಾಂಡ್‌ಬ್ಯಾಗ್‌ನಲ್ಲಿ ಪುತ್ರ ವಿಸರ್ಜನೆ ಮಾಡಿದ್ದ. ಇದನ್ನು ಸಹಿಸದ ಮಹಿಳೆ ಆತನ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಆತನಿಂದ ದಂಡ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ.

ಎಂತ ವಿಚಿತ್ರ ಅಲ್ವಾ, ಸೇಡು ತೀರಿಸಿಕೊಳ್ಳು ಹೀಗೂ ಮಾಡ್ತಾರಾ ಅಂತ ಅಚ್ಚರಿಯಾಗದಿರದು. ಆದರೆ ಈತ ಹೀಗೆ ಮಾಡಿದ್ದು ನಿಜ ಎಂಬುದು ತಪಾಸಣೆಯಿಂದ ಸಾಬೀತಾಗಿದ್ದು, ಕೋರ್ಟ್ ಆತನಿಗೆ ಬರೋಬ್ಬರಿ $1,150 ಡಾಲರ್ ಅಂದರೆ 91,634 ರೂಪಾಯಿ ದಂಡ ವಿಧಿಸಿದೆ. ಇನ್ನು ಈ ತರ ಕೃತ್ಯವೆಸಗಿದ್ದ ಯುವಕನ ಗುರುತನ್ನು ಖಾಸಗಿ ವಿಚಾರದ ಕಾರಣಕ್ಕೆ ಬಹಿರಂಗಪಡಿಸಲಾಗಿಲ್ಲ. ಮೂತ್ರ ಮಾಡಿದ್ದಲ್ಲದೇ ಆತ ಮಹಿಳೆ ಕೋರ್ಟ್‌ಗೆ ಹೋಗುತ್ತಿದ್ದಂತೆ ಈತ ತನ್ನ ತಪ್ಪನ್ನು ಮುಚ್ಚಿ ಹಾಕಲು ದ್ರವ ರೂಪದ ಡಿಟರ್ಜೆಂಟ್ ಅನ್ನು ಬ್ಯಾಗ್‌ಗೆ ಹಾಕಿ ತೊಳೆದಿದ್ದ. ಆದರೆ ಡಿಎನ್‌ಎ ಪರೀಕ್ಷೆ ನಡೆಸಿದಾಗ ಈತ ಕೃತ್ಯವೆಸಗಿರುವುದು ಸತ್ಯ ಹಾಗೂ ಮಹಿಳೆ ಕೇವಲ ಹಣಕ್ಕಾಗಿ ಸುಳ್ಳು ಆರೋಪ ಮಾಡಿಲ್ಲ ಎಂಬುದು ಸಾಬೀತಾಗಿದೆ. ಆದರೆ ಈ ನ್ಯೂಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಅಪ್‌ ದ ಟೌನ್ ಆಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು