
ನವದೆಹಲಿ: ನೀವು ಅಮೆರಿಕಾಗೆ ತೆರಳಬೇಕಾದರೆ, ಪ್ರವಾಸಿಗರ ವೀಸಾ ಪಡೆಯಲು 2024ರವರೆಗೆ ಕಾಯಬೇಕಾಗಬಹುದು. ಪ್ರವಾಸಿಗರ ವೀಸಾ ಪಡೆಯಲು ಭಾರೀ ಪ್ರಮಾಣದಲ್ಲಿ ಜನರು ಅರ್ಜಿ ಸಲ್ಲಿಸಿದ್ದು, 2022ರಲ್ಲಿ ಅರ್ಜಿ ಸಲ್ಲಿಸಿದವರು ಸುಮಾರು ಒಂದೂವರೆ ವರ್ಷ ಕಾಯಬೇಕು ಎಂದು ಅಮೆರಿಕದ ವೆಬ್‌ಸೈಟ್ ಮಾಹಿತಿ ನೀಡಿದೆ.
ಅಮೆರಿಕ ವೀಸಾ ಪಡೆಯುವ ಪ್ರಕ್ರಿಯೆ ಬೇರೆ ದೇಶಗಳಿಗೆ ಹೋಲಿಸಿದರೆ ಸುದೀರ್ಘವಾದದ್ದು. ಕೋವಿಡ್ ವೇಳೆಯಲ್ಲಿ ವೀಸಾ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ತಮ್ಮ ಸ್ವದೇಶಕ್ಕೆ ತೆರಳಿದ್ದು, ಇನ್ನು ಮರಳಿ ಬಂದಿಲ್ಲ. ಹೀಗಾಗಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇದು ವೀಸಾ ಪ್ರಕ್ರಿಯೆಯಲ್ಲಿ ಇನ್ನಷ್ಟು ವಿಳಂಬವಾಗುವುದಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಮೊಟ್ಟಮೊದಲ ಬಾರಿ ಅಮೆರಿಕಕ್ಕೆ ತೆರಳಲು ವೀಸಾಗಾಗಿ ಅರ್ಜಿ ಸಲ್ಲಿಸಿದವರು ವರ್ಷಗಟ್ಟಲೇ ಕಾಯಬೇಕಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕದ ರಾಯಭಾರಿ ಕಚೇರಿಯ ವಕ್ತಾರರು, ಕಚೇರಿಯಲ್ಲಿ ಸಿಬ್ಬಂದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೇಮಕ ಮಾಡಿ, ವಿದ್ಯಾರ್ಥಿಗಳು, ತಾತ್ಕಾಲಿಕ ಕೃಷಿ ಕಾರ್ಮಿಕರು ಹಾಗೂ ಕೆಲಸಗಾರರು ಹಾಗೂ ಉದ್ಯಮಿಗಳು ಮೊದಲಾದವರ ನಿಗದಿತ ಅರ್ಜಿಗಳನ್ನು ಪರಿಗಣಿಸಿ ಆದ್ಯತೆ ಮೇರೆಗೆ ವೀಸಾ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವೀಸಾ ಮಾತ್ರವಲ್ಲ, ವೀಸಾ ಅರ್ಜಿ ಪ್ರಕ್ರಿಯೆಗೆ ಅಪಾಯಿಂಟ್‌ಮೆಂಟ್ ಪಡೆಯಲೇಬೇಕು 8 ತಿಂಗಳು ಕಾಯಾಬೇಕಾದ ಪರಿಸ್ಥಿತಿ ಇದೆ.
ವರ್ಕ್ ಫ್ರಮ್ ಹೋಮ್ ಮಾಡ್ತಿರುವವರಿಗೆ ಗುಡ್‌ನ್ಯೂಸ್ : ಸ್ಪೆಷಲ್ ವೀಸಾ ನೀಡಲಿದೆ ಇಂಡೋನೇಷ್ಯಾ
ಕೆಲ ದಿನಗಳ ಹಿಂದೆ ಭಾರತ ಹಾಗೂ ವೆಸ್ಟ್‌ಇಂಡೀಸ್ ಆಟಗಾರರಿಗೂ ಅಮೆರಿಕಾ ವೀಸಾ ಸಮಸ್ಯೆ ಎದುರಾಗಿತ್ತು. ಭಾರತ ಹಾಗೂ ವೆಸ್ಟ್‌ಇಂಡೀಸ್ ಕೊನೆಯ ಎರಡು ಟಿ20 ಪಂದ್ಯಗಳು ಅಮೆರಿಕಾದ ಫ್ಲೋರಿಡಾದಲ್ಲಿ ನಿಗದಿಯಾಗಿ ಅಲ್ಲೇ ನಡೆದಿವೆ. ಆದರೆ ಇದಕ್ಕೂ ಮೊದಲು ಆಟಗಾರರಿಗೆ ಅಮೆರಿಕಾ ವೀಸಾ ಸಮಸ್ಯೆಯಾದ ಹಿನ್ನೆಲೆಯಲ್ಲಿ ಮ್ಯಾಚ್ ಅಲ್ಲಿ ನಡೆಯುವುದು ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಅಮೆರಿಕದ ವೀಸಾ ಸಿಗದ ಕಾರಣ ಪಂದ್ಯಗಳು ಟ್ರಿನಿಡಾಡ್ ಇಲ್ಲವೇ ಸೇಂಟ್ ಕಿಟ್ಸ್ ಅಂಡ್ ನೆವಿಸ್‌ನಲ್ಲೇ ನಡೆಯುವ ಸಾಧ್ಯತೆ ಇತ್ತು. ಆದರೆ ಯಾನ ಅಧ್ಯಕ್ಷ ಇರ್ಫಾನ್ ಅಲಿ ಮಧ್ಯಸ್ಥಿಕೆಯಿಂದಾಗಿ ಆಟಗಾರರ ವೀಸಾ ಸಮಸ್ಯೆ ಬಗೆಹರಿದಿದ್ದು, ನಂತರ ಎಲ್ಲಾ ಆಟಗಾರರು ಅಮೆರಿಕಕ್ಕೆ ತೆರಳಲಿ ಅಲ್ಲೇ ಪಂದ್ಯಗಳು ನಡೆದಿವೆ.
ಇಂದಿನಿಂದ ಚೀನಾ ವೀಸಾಗೆ ಭಾರತೀಯರು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ವಿವರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ