ಹೈಟಿಯಲ್ಲಿ ಭೀಕರ ಭೂಕಂಪ: 1,200ಕ್ಕೂ ಅಧಿಕ ಜನರ ಸಾವು!

Published : Aug 16, 2021, 07:18 AM IST
ಹೈಟಿಯಲ್ಲಿ ಭೀಕರ ಭೂಕಂಪ: 1,200ಕ್ಕೂ ಅಧಿಕ ಜನರ ಸಾವು!

ಸಾರಾಂಶ

* ಹೈಟಿಯಲ್ಲಿ ಶನಿವಾರ ಸಂಭವಿಸಿದ ಭಾರಿ ಭೂಕಂಪ * ಹೈಟಿಯಲ್ಲಿ 7.4 ತೀವ್ರತೆಯ ಭೂಕಂಪ * 1,200ಕ್ಕೂ ಅಧಿಕ ಜನರ ಸಾವು

ಪೋರ್ಟ್‌-ಔ-ಪ್ರಿನ್ಸ್‌(ಆ..16): ಹೈಟಿಯಲ್ಲಿ ಶನಿವಾರ ಸಂಭವಿಸಿದ ಭಾರಿ ಭೂಕಂಪದಲ್ಲಿ 1,200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸುಮಾರು 2,800 ಜನರ ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಶನಿವಾರ ರಾತ್ರಿ 6 ಬಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನಕ್ಕೆ ಹೆದರಿದ ಜನರು ಮನೆಗಳು ಕುಸಿದು ಬೀಳುವ ಭಯದಿಂದ ರಸ್ತೆಗಳಲ್ಲಿ ಕಾಲ ಕಳೆದಿದ್ದಾರೆ.

ಈ ಭೂಕಂಪದ ಕೇಂದ್ರಬಿಂದು ರಾಜಧಾನಿಯಿಂದ 125 ಕಿ.ಮೀ ದೂರದಲ್ಲಿ ದಾಖಲಾಗಿತ್ತು ಎಂದು ಅಮೆರಿಕದ ಭೂ ವಿಜ್ಞಾನ ಸಂಸ್ಥೆ ತಿಳಿಸಿದೆ.

ಹೈಟಿಯ ಪ್ರಧಾನಿ ದ್ವೀಪದಾತ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು ಗಾಯಾಳುಗಳನ್ನು ರಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ
Dubai gold in India: ದುಬೈನ ಶುದ್ಧ ಚಿನ್ನವನ್ನು ಭಾರತದಲ್ಲಿ ಮಾರಿದ್ರೆ ಇಷ್ಟು ಲಾಭ ಆಗೋದು ಪಕ್ಕಾ!