
ಈ ಪ್ರಪಂಚದಲ್ಲಿ ಎಂತೆಂತಾ ಜನ ಇರ್ತಾರಪ್ಪ. ಹಲ್ಲಿ ತಿನ್ನುವವರನ್ನು, ಹುಳ ತಿನ್ನುವವರನ್ನು, ಹುಳೂ ಹುರಿದುಕೊಂಡು ತಿನ್ನುವವರನ್ನು ನೋಡಿದ್ದೇವೆ. ಆದರೆ ಇವನು ಅವರೆಲ್ಲರ ಮೀರಿ ಒಂದು ಕೈ ಮುಂದೆ ಹೋಗಿದ್ದಾನೆ.
ಜೀವಂತ ಇರುವ ಇಲಿ ಮರಿಗಳನ್ನು ಕಚಕಚನೆ ಜಗಿದು ನುಂಗಿದ್ದಾನೆ. ಈತ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜತೆಗೆ ನಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕೋಟೆ ಏರಿದ ಕೋತಿರಾಜ; ಲೈವ್ ವಿಡಿಯೋ
ಬಟ್ಟಲಿನ ಮುಂದೆ ಕುಳಿತುಕೊಂಡಿರುವ ವ್ಯಕ್ತಿ ಇಲಿ ಮರಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ. ಬಟ್ಟಲಿನಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುವ ಇಲಿ ಮರಿಗಳನ್ನು ಕಷ್ಟಪಟ್ಟು ಭಕ್ಷಿಸುತ್ತಾನೆ.
ಇಲಿಮರಿಯನ್ನು ಸಾಸ್ ನಲ್ಲಿ ಅದ್ದಿ ತಿನ್ನುವ ಪುಣ್ಯಾತ್ಮ ಅದು ಸಾಲದು ಎಂಬಂತೆ ಕೈಯಲ್ಲಿ ಮದ್ಯದ ಗ್ಲಾಸ್ ಬೇರೆ ಹಿಡಿದುಕೊಂಡಿದ್ದಾನೆ. ಇದು ಪಕ್ಕಾ ಚೀನಾದವರದ್ದೇ ಕೆಲಸ ಎಂಬುದು ಸದ್ಯದ ಸಂಶೋಧನೆಯ ಉತ್ತರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ