ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್

By Suvarna News  |  First Published Nov 22, 2020, 9:57 PM IST

ಒಮ್ಮೊಮ್ಮೆ ಪ್ರವಾಸಿ ತಾಣದಲ್ಲಿ ಗೊತ್ತಿಲ್ಲದೆ ಅವಘಡ ನಡೆದು ಬಿಡುತ್ತದೆ/ ವ್ಯಕ್ತಿ ಮೇಲೆ ಶಾರ್ಕ್ ದಾಳಿ/ ಶಾರ್ಕ್ ಗಳು ದಾಳಿ ಮಾಡುವುದು ಅಪರೂಪ/  ಬದುಕಿಸುವ ಯತ್ನ ಮಾಡಲಾಯಿತಾದರೂ ಫಲಪ್ರದ ಆಗಲಿಲ್ಲ


ಸಿಡ್ನಿ (ನ.  22)   ಈ ಸುದ್ದಿ ಬರೆಯುವ ಮುನ್ನ ಎಚ್ಚರ ಎಂದು ಹೇಳಲೇಬೇಕು. ಸಿಡ್ನಿಯ ಪ್ರಸಿದ್ಧ ಪ್ರವಾಸಿ ತಾಣದಲ್ಲಿಯೇ ಅವಘಡ ಸಂಭವಿಸಿದೆ.

ಶಾರ್ಕ್ ಒಂದು ಕಚ್ಚಿ ಪ್ರವಾಸಿಗ ಮೃತಪಟ್ಟಿದ್ದಾನೆ.  ಸಿಡ್ನಿಯ ಕೇಬಲ್ ಬೀಚ್ ನಲ್ಲಿ ಅವಘಡ ಸಂಭವಿಸಿದೆ.  ವ್ಯಕ್ತಿಯ ರಕ್ಷಣೆ ಮಾಡಲು ಧಾವಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ.

Tap to resize

Latest Videos

ಶಾರ್ಕ್ ಬಾಯಿಂದ ಮಗಳ ರಕ್ಷಿಸಿದ ಅಪ್ಪ

ಶಾರ್ಕ್ ದಾಳಿಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ನೀರಿನಿಂದ ಹೊರಗೆ ತೆಗೆದು ಪ್ರಾಥಮಿಕ ಚಿಕಿತ್ಸೆ ಕೊಡುವ ಯತ್ನ ಮಾಡಿದರೂ ಫಲಪ್ರದವಾಗಲಿಲ್ಲ. ಶಾರ್ಕ್ ಗಳು ಈ ರೀತಿ ದಾಳಿ ಮಾಡುವುದು ತುಂಬಾ ಅಪರೂಪ.   ಆದರೆ ಕೇಬಲ್ ಬೀಚ್ ನಲ್ಲಿ ವರ್ಷದಲ್ಲಿ ಒಂದೆರಡು ಇಂಥ ಘಟನೆಗಳು ವರದಿಯಾಗುತ್ತವೆ.

ಒಂದೇ ಸಂದರ್ಭದಲ್ಲಿ 22 ಶಾರ್ಕ್ ಗಳು ದಂಡೆಯ ಕಡೆ ಬಂದಿದ್ದವು ಎನ್ನಲಾಗಿದೆ. ಆಸ್ಟ್ರೇಲಿಯಾ ಸಮುದ್ರ ದಂಡೆಯಲ್ಲಿ ಈ ಸಾವಿನೊಂದಿಗೆ ಈ ವರ್ಷ ಎಂಟನೇ ವ್ಯಕ್ತಿ ಶಾರ್ಕ್ ಗೆ ಬಲಿಯಾದಂತೆ ಆಗಿದೆ.

click me!