ಸಿಂಹದ ಮರಿ ಹೊತ್ತೊಯ್ದ ಲಂಗೂರ್, ಮರದಿಂದ ಮರಕ್ಕೆ ಜಿಗಿದು ಕಿತಾಪತಿ!

Published : Feb 05, 2020, 12:49 PM IST
ಸಿಂಹದ ಮರಿ ಹೊತ್ತೊಯ್ದ ಲಂಗೂರ್, ಮರದಿಂದ ಮರಕ್ಕೆ ಜಿಗಿದು ಕಿತಾಪತಿ!

ಸಾರಾಂಶ

ಸಿಂಹದ ಮರಿ ಹೊತ್ತೊಯ್ದು, ಮರದಿಂದ ಮರಕ್ಕೆ ಜಿಗಿದ ಲಂಗೂರ್| ವೈರಲ್ ಆಯ್ತು ಲಂಗೂರ್ ಕಿತಾಪತಿ ದೃಶ್ಯ| 'ದ ಲಯನ್ ಕಿಂಗ್' ಸಿನಿಮಾ ದೃಶ್ಯ ನೆನಪಿಸಿದ ಲಂಗೂರ್ ದೃಶ್ಯ

ಕೇಪ್‌ಟೌನ್[ಫೆ.05]: 'ದ ಲಯನ್ ಕಿಂಗ್' ಸಿನಿಮಾದಲ್ಲಿ, ಬೇಬಿ ಸಿಂಬಾನನ್ನು ರಾಕಿಫೀ ಹೆಸರಿನ ಲಂಗೂರ್ ಒಂದು ಅದರ ತಾಯಿಒ ಮಡಿಲಿನಿಂದ ಹೊತ್ತೊಯ್ದು ಬೆಟ್ಟದ ತುದಿಯಲ್ಲಿ ನಿಂತು ಕಾಡಿನ ಪ್ರಾಣಿಗಳಿಗೆ ಅದನ್ನು ಪರಿಚಯಿಸುವ ದೃಶ್ುಯ ನಿಮಗೆ ನೆನಪಿರಬಹುದು. ಇಂತಹುದೇ ರಿಯಲ್ ದೃಶ್ಯವೊಂದು ಸದ್ಯ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಂಡು ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಕದ್ದಿದೆ.

ಹೌದು ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಕಂಡು ಬಂದ ನೈಜ ಘಟನೆಯ ವಿಡಿಯೋ ಇದಾಗಿದ್ದು, ಲಂಗೂರ್ ಒಂದು ಸಿಂಹದ ಮರಿಯನ್ನು ಹೊತ್ತು ಮರದಿಂದ ಮರಕ್ಕೆ ಜಿಗಿಯುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಯೂ ಟ್ಯೂಬರ್ ಕರ್ಟ್ ಶುಲ್ಸ್ ಎಂಬವರಿ 2020ರ ಫೆಬ್ರವರಿ 1 ರಂದು ಶೇರ್ ಮಾಡಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಕರ್ಟ್ 'ಮೀಟಿಂಗ್‌ಗಿಂತ ಮೊದಲು ನಾನು ಫೋಟೋಗ್ರಫಿ ಮಾಡಲು ಕ್ರೂಗರ್ ಪಾರ್ಕ್‌ಗೆ ತೆರಳುವ ನಿರ್ಧಾರ ತೆಗೆದುಕೊಂಡೆ. ಇದು ನನ್ನ ಹವ್ಯಾಸ ಕೂಡಾ ಹೌದು' ಎಂದು ಬರೆದಿದ್ದಾರೆ.

ಇದೇ ವೇಳೆ ಅವರು ಈ ಘಟನೆ ಕುರಿತಾಗಿಯೂ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಸಿಂಬಾನನ್ನು ಜಿಗಿಯುತ್ತಿದ್ದ ಲಂಗೂರ್ ದೃಶ್ಯವನ್ನೇ ನೆನಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!