ಭಾರತದ ವಿರುದ್ದ ತೊಡೆತಟ್ಟಿ ಯೂಟರ್ನ್ ಹೊಡೆದ ಮಾಲ್ಡೀವ್ ಅಧ್ಯಕ್ಷ, ಸಾಲ ಮನ್ನಾಗೆ ಮನವಿ!

By Suvarna NewsFirst Published Mar 23, 2024, 1:35 PM IST
Highlights

ಭಾರತ ವಿರುದ್ಧ ತೊಡೆ ತಟ್ಟುಟ್ಟಲೇ ಮಾಲ್ದೀವ್ಸ್ ಅಧ್ಯಕ್ಷ ಪಟ್ಟಕ್ಕೇರಿದ ಮೊಹಮ್ಮದ್‌ ಮುಯಿಜು ಬಳಿಕ ನಡೆಸಿಸಿದ ಹೋರಾಟ ದೇಶ ವಿದೇಶಗಳಲ್ಲಿ ಸದ್ದು ಮಾಡಿದೆ. ಪಟ್ಟು ಬಿಗಿಗೊಳಿಸುತ್ತಲೇ ಬಂದ ಮುಯಿಜು ಇದೀಗ ಉಲ್ಟಾ ಹೊಡೆದಿದ್ದಾರೆ. ಭಾರತ ನಮ್ಮ ಆಪ್ತಮಿತ್ರ ಎಂದು ಹೊಗಳಿದ್ದಾರೆ. ಇಷ್ಟೇ ಅಲ್ಲ 34,500 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಂತೆ ಕೈಮುಗಿದು ಬೇಡಿಕೊಂಡಿದ್ದಾರೆ.
 

ಮಾಲ್ಡೀವ್ಸ್(ಮಾ.23) ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಭಾರತ ಹಾಗೂ ಮಾಲ್ಡೀವ್ಸ್ ಸಂಬಂಧ ಹಳಸಿದೆ. ಚೀನಾ ಪರ ನಿಲುವು, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ, ಚೀನಾ ಕೈಗೊಂಬೆ ರೀತಿ ವರ್ತಿಸಿದ ಮೊಹಮ್ಮದ್ ಮುಯಿಜು, ಭಾರತ ವಿರುದ್ಧ ಅತೀ ದೊಡ್ಡ ಆಂದೋಲನವನ್ನೇ ಮಾಡಿದ್ದಾರೆ. ಇದರ ಪರಿಣಾಮ ಭಾರತ, ಮಾಲ್ಡೀವ್ಸ್‌ನಿಂದ ಸೇನೆಯನ್ನು ಹಂತ ಹಂತವಾಗಿ ಹಿಂಪೆಡೆಯುತ್ತಿದೆ.ಇದೀಗ ಸಂಕಷ್ಟಕ್ಕೆ ಸಿಲುಕಿರುವ ಮಾಲ್ಡೀವ್ಸ್ ತನ್ನ ವರಸೆ ಬದಲಿಸಿದೆ. ಭಾರತ ನಮ್ಮ ಸ್ನೇಹಿತ, ನಮ್ಮ ದ್ವಿಪಕ್ಷೀಯ ಸಂಬಂಧ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಆಪ್ತ ಎಂದು ಹೊಗಳಿದೆ. ಇದರ ಬೆನ್ನಲ್ಲೇ 34,500 ಕೋಟಿ ರೂಪಾಯಿ ಸಾಲ ಮನ್ನ ಮಾಡುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಮನವಿ ಮಾಡಿದ್ದಾರೆ.

ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಚೀನಾದ ಸಖ್ಯ ಮಾಡಿದ್ದ ಮಾಲ್ಡೀವ್ಸ್‌ ಇದೀಗ ಸಾಲದ ಸುಳಿಗೆ ಸಿಲುಕಿದೆ. ಇತ್ತ ಪ್ರವಾಸೋದ್ಯಮ ನೆಲಕ್ಕಚ್ಚಿದೆ. ಭಾರತದ ವಿರುದ್ಧ ಹೋರಾಟಕ್ಕಿಳಿದ ಬೆನ್ನಲ್ಲೇ ಭಾರತೀಯರು ಸ್ವಯಂಪ್ರೇರಿತವಾಗಿ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ್ದರು. ಹಲವು ಟ್ರಾವೆಲ್ ಎಜೆನ್ಸಿಗಳು ಮಾಲ್ಡೀವ್ಸ್ ಪ್ಯಾಕೇಜ್ ರದ್ದು ಮಾಡಿದ್ದರು. ಇತ್ತ ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಪ್ರಚಾರ ಮಾಡುವ ಮೂಲಕ ಮಾಲ್ಡೀವ್ಸ್‌ಗೆ ಆರ್ಥಿಕ ಪಟ್ಟು ನೀಡಿದ್ದರು. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ ಕಂಡಿತ್ತು. ಇದು ಮಾಲ್ಡೀವ್ಸ್ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಇದೀಗ 34,500 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡಿದೆ.

ಮಾಲ್ಡೀವ್ಸ್‌ಗೆ ಭಾರತ ಸಡ್ಡು: ದ್ವೀಪರಾಷ್ಟ್ರದ ಬಳಿಯೇ ನೌಕಾನೆಲೆಗೆ ಭಾರತ ಸಿದ್ಧತೆ

ಸಾಲ ಮನ್ನಾ ಮಾಡಲು ಭಾರತವನ್ನು ಸ್ನೇಹಿತ ಎಂದು ಕರೆದಿದೆ. ಆದರೆ ಚೀನಾ ಕೈಗೊಂಬೆಯಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಮಾಲ್ಡೀವ್ಸ್ ಪರ ಭಾರತ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ ಮಾಲ್ಡೀವ್ಸ್ ಸಂಕಷ್ಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

ಮೊಹಮ್ಮದ್ ಮುಯಿಜು ತಮ್ಮ ನಿರ್ಧಾರ ಬದಲಿಸಿದ ಕಾರಣ ಈಗಾಗಲೇ ಭಾರತ ಸರ್ಕಾರ, ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನೆಯ ಮೊದಲ ತುಕಡಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಕುರಿತು ವಿದೇಶಾಂಗ ಇಲಾಖೆ ವಕ್ತಾ ರಣಧೀರ್ ಜೈಸ್ವಾಲ್‌, ‘ಮಾಲ್ಡೀವ್ಸ್‌ನಲ್ಲಿ ಎಎಲ್‌ಹೆಚ್‌ ಹೆಲಿಕಾಪ್ಟರ್‌ ನಿರ್ವಹಣೆಯಲ್ಲಿ ತೊಡಗಿದ್ದ ಭಾರತೀಯ ಸೇನಾ ತುಕಡಿಯನ್ನು ಹಿಂಡಪೆಯಲಾಗಿದೆ. ಮಾಲ್ಡೀವ್ಸ್‌ ಸರ್ಕಾರ ಅದರ ನಿರ್ವಹಣೆಗೆ ಸ್ಥಳೀಯ ತಾಂತ್ರಿಕ ತಜ್ಞರನ್ನು ನಿಯೋಜಿಸಿದೆ’ ಎಂದು ತಿಳಿಸಿದ್ದಾರೆ. ಯೋಧರನ್ನು ಹಿಂಪಡೆಯುವಂತೆ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಆದೇಶಿಸಿದ ಬಳಿಕ ಭಾರತ ತನ್ನ ಮೊದಲ ಸೇನಾ ತುಕಡಿಯನ್ನು ಹಿಂಪಡೆದಿರುವುದಾಗಿ ಘೋಷಿಸಿದೆ. ಭಾರತವು ಮಾಲ್ಡೀವ್ಸ್‌ನಲ್ಲಿರುವ ತನ್ನ 89 ಸೈನಿಕರನ್ನು ಮೇ 10ರೊಳಗೆ ವಿವಿಧ ಹಂತಗಳಲ್ಲಿ ಹಿಂಪಡೆಯುವುದಾಗಿ ತಿಳಿಸಿದೆ.

ಮಾಲ್ಡೀವ್ಸ್‌ನ ಹತ್ತಿರ ತಲುಪಿದ ಚೀನಾ ಬೇಹುಗಾರಿಕಾ ಹಡಗು: ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌

click me!