ಮೊದಲ ಬಾರಿ ರೈಲು ನೋಡಿ ಸಂಭ್ರಮಿಸಿದ ಬಾಲಕಿ; ವಿಡಿಯೋ ವೈರಲ್!

Published : Apr 02, 2021, 03:35 PM IST
ಮೊದಲ ಬಾರಿ ರೈಲು ನೋಡಿ ಸಂಭ್ರಮಿಸಿದ ಬಾಲಕಿ; ವಿಡಿಯೋ ವೈರಲ್!

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿನ ಹಲವು ವೈರಲ್ ವಿಡಿಯೋ ನಿಮ್ಮ ಮುಖದಲ್ಲಿ ನಗು ತರಿಸುವುದು ಖಚಿತ. ಅದರಲ್ಲೂ ಮಕ್ಕಳ ವಿಡಿಯೋಗಳು ಮತ್ತೆ ಮತ್ತ ನೋಡಬೇಕೆನ್ನಿಸುತ್ತದೆ. ಇದೀಗ ಪುಟಾಣಿ ಬಾಲಕಿಯೊಬ್ಬಳು ಮೊದಲ ಬಾರಿಗೆ ರೈಲು ನೋಡಿ ಸಂಭ್ರಮಿಸಿದ ಪರಿ ವೈರಲ್ ಆಗಿದೆ

ನವದೆಹಲಿ(ಎ.02): ಚಿತ್ರದಲ್ಲಿ ಮಾತ್ರ ನೋಡಿದ್ದ ರೈಲನ್ನು ಮೊದಲ ಬಾರಿಗೆ ನೋಡಿದ ಪುಟಾಣಿ ಬಾಲಕಿ ಸಂಭ್ರಮ ಹೇಳತೀರದು. ಬಾಲಕಿಯ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿನ ಈ ವಿಡಿಯೋ ಇದೀಗ ಭಾರಿ ಮೆಚ್ಚುಗೆ ಪಡೆದಿದೆ.

ಮರಿ ಜೊತೆ ರಸ್ತೆ ದಾಟಲು ಹರಸಾಹಸ ಪಟ್ಟ ತಾಯಿ ಕರಡಿ: ವಿಡೀಯೋ ವೈರಲ್!

ಬ್ರಿಯಾನ್ ರೊಮೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಪುಟಾಣಿ ಬಾಲಕಿಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಾಲಕಿ ರೈಲು ಬರುವುದನ್ನು ಕಾಯುತ್ತ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾಳೆ ವಿಡಿಯೋ ರೆಕಾರ್ಡ್ ಮಾಡಿದಾತ ಬರುತ್ತಿರುವುದೇನು? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರೈಲು ಎಂದು ಉತ್ತರಿಸಿದ ಬಾಲಕಿಗೆ ಅಷ್ಟೇ ಸಂತಸದಿಂದ ರೈಲು ನೋಡಿ ಸಂಭ್ರಮಿಸಿದ್ದಾಳೆ.

 

ಮಗುವಿನ ಕಣ್ಣಿನ ಮೂಲಕ ಜಗತ್ತನ್ನು ನೋಡುವುದು,ಮೊದಲ ಬಾರಿಗೆ ರೈಲು ನೋಡಿದ ಸಂಭ್ರಮ ಅವಳಿಗೆ ಎಂದು ಬ್ರಿಯಾನ್ ಟ್ವೀಟ್ ಮಾಡಿದ್ದಾರೆ. ಈ ಬಾಲಕಿ ವಿಡಿಯೋಗೆ ಭಾರಿ ಮೆಚ್ಚುಗೆ ಬಂದಿದೆ. ಮುಗ್ದ ಬಾಲಕಿಯ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ