ಯುವಕನೋರ್ವ ಸಿಂಹದ (Lion) ಜೊತೆ ಚೆಲ್ಲಾಟವಾಡಲು ಹೋಗಿ ತನ್ನ ಬೆರಳನ್ನೇ ಕಳೆದುಕೊಂಡ ಘಟನೆ ಜಮೈಕಾದ (Jamaica) ಮೃಗಾಲಯದಲ್ಲಿ (Zoo) ನಡೆದಿದೆ. ಯುವಕನೋರ್ವ ಮೃಗಾಲಯದಲ್ಲಿದ್ದ ಸಿಂಹದ ಜೊತೆ ಆಟವಾಡಲು ಹೋಗಿದ್ದಾನೆ. ಸಿಂಹ ಇದ್ದ ಗೂಡಿಗೆ ಅಳವಡಿಸಿದ ಕಬ್ಬಿಣದ ನೆಟ್‌ನ ಸೆರೆಯಲ್ಲಿ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ತಲೆ ಸವರಲು ಯತ್ನಿಸಿದ್ದಾನೆ. ಈತನ ಉಪಟಳದಿಂದ ಸಿಂಹ ವ್ಯಾಘ್ರಗೊಂಡಿದ್ದು, ಈತನ ಮೇಲೆ ಮುಗಿ ಬೀಳುವ ಯತ್ನ ಮಾಡಿದೆ. ಸಿಂಹ ಕೋಪಗೊಂಡಿದ್ದು ತಿಳಿದರು ಆತ ಮಾತ್ರ ತನ್ನ ಚೆಲ್ಲಾಟವಾಡುವುದನ್ನು ನಿಲ್ಲಿಸದೇ ಪದೇ ಪದೇ ಕಬ್ಬಿಣದ ನೆಟ್ಟೊಳಗೆ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ಯತ್ನಿಸಿದ್ದಾನೆ.
ಸುಮ್ಮನಿದ್ದ ತನ್ನನ್ನು ಪದೇ ಪದೇ ಕೆಣಕಿ ಕಿರುಕುಳ ನೀಡುತ್ತಿರುವ ಈತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಸಿಂಹ ಹೊಂಚು ಹಾಕಿ ಈತನ ಬೆರಳನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದಿದೆ. ಈಗ ಆಟವಾಡುವ ಟೈಮ್ ಸಿಂಹದ್ದಾಗಿದ್ದು ಯುವಕ ಏನೇ ಮಾಡಿದ್ದು ಸಿಂಹ ಮಾತ್ರ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಬೆರಳು ತುಂಡಾಗುವವರೆಗೂ ಆತನನ್ನು ಬಿಟ್ಟಿಲ್ಲ. ಬೆರಳಿನ ಮೂಳೆ ಮಾತ್ರ ಉಳಿದಿದ್ದು, ಹೊರಭಾಗದ ಮಾಂಸವೆಲ್ಲಾ ಸಿಂಹದ ಪಾಲಾಗಿದೆ. ಒಂದು ವೇಳೆ ಇವರಿಬ್ಬರ ಕಾದಾಟದ ಸಮಯದಲ್ಲಿ ಕಬ್ಬಿಣದ ನೆಟ್ ಎಲ್ಲಾದರೂ ಜಾರಿದ್ದಾರೆ. ಕೇವಲ ಬೆರಳು ಮಾತ್ರವಲ್ಲ. ಇಡೀ ದೇಹವೇ ಸಿಂಹದ ಪಾಲಾಗುತ್ತಿದ್ದಿದ್ದಂತು ಸುಳ್ಳಲ್ಲ.
Telling my kids this was Daniel pic.twitter.com/dCXgDNT7Ty
— Ms blunt from shi born 🇯🇲 “PRJEFE” (@OneciaG)
ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!
ಇಷ್ಟೆಲ್ಲಾ ನಡೆಯುತ್ತಿದ್ದರೂ ಈತನ ಜೊತೆ ಇದ್ದ ಇಬ್ಬರು ಯುವಕರು ಮಾತ್ರ ಈ ದೃಶ್ಯವನ್ನು ವಿಡಿಯೋ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಯವಕನ ಬೆರಳು ತುಂಡಾಗುವವರೆಗೂ ಅವರು ಮಾತ್ರ ವಿಡಿಯೋ ಮಾಡುವ ಸ್ಥಳದಿಂದ ಅತ್ತಿತ್ತ ಕದಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಶೋ ಆಫ್ ಅವಮಾನವನ್ನು ತರುತ್ತದೆ ಎಂಬ ಮಾತು ಜಮೈಕಾದಲ್ಲಿ ಚಾಲ್ತಿಯಲ್ಲಿದೆ. ಇದೇ ಮಾತನ್ನು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ದಾಳಿ ಮಾಡುವಂತೆ ಬಂದ ನೀರು ಕುದುರೆಗೆ ಹೊಡೆದು ಓಡಿಸಿದ ಗಾರ್ಡ್: ವಿಡಿಯೋ
ಮೃಗಾಲಯಗಳಲ್ಲಿ ಕ್ರೂರ ಪ್ರಾಣಿಗಳನ್ನು ಕೆಣಕದಿರಿ ಎಂಬ ಜಾಗೃತಿಯನ್ನು ಮೃಗಾಲಯದ ಸಿಬ್ಬಂದಿ ಮತ್ತೆ ಮತ್ತೆ ಮೂಡಿಸುತ್ತಿರುತ್ತಾರೆ ಆದಾಗ್ಯೂ ಕೆಲವರು ಮೃಗಾಲಯದ ಸಿಬ್ಬಂದಿಯ ಮಾತನ್ನು ನಿರ್ಲಕ್ಷಿಸಿ ದುಸ್ಸಾಹಸ ಮಾಡಲು ಹೋಗಿ ತಮ್ಮ ಪ್ರಾಣವನ್ನು ಅಪಾಯಕ್ಕೊಡುತ್ತಾರೆ.
ಮೃಗಾಲಯವೊಂದಕ್ಕೆ ಬಂದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಕಂದನನ್ನು ಎತ್ತಿ ಕರಡಿಗಳಿದ್ದಂತಹ ಸ್ಥಳಕ್ಕೆ ಎಸೆದ ಘಟನೆ ಉಜ್ಬೇಕಿಸ್ತಾನ್‌ನ (Uzbekistan) ತಾಷ್ಕೆಂಟ್‌ನಲ್ಲಿ(Tashkent) ಕೆಲ ದಿನಗಳ ಹಿಂದೆ ನಡೆದಿತ್ತು. ಡೈಲಿ ಮೇಲ್(Daily Mail) ವರದಿ ಪ್ರಕಾರ ತಾಯಿ ಮಗುವನ್ನು ಕರಡಿಗಳಿರುವ ಪ್ರದೇಶದ ಸುತ್ತಲು ಹಾಕಿದ್ದ ಕಂಬಿಗಳ ಮೇಲಿನಿಂದ ಸುಮಾರು 16 ಅಡಿ ಕೆಳಗಿನ ಕಂದಕಕ್ಕೆ ಎಸೆಯುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಈ ವೇಳೆ ಗೂಡಿನಲ್ಲಿ ಜುಜು ಎಂಬ ಒಂದು ಕಂದು ಬಣ್ಣದ ಕರಡಿ ಇತ್ತು. ಮಗು ಕೆಳಗೆ ಬೀಳುತ್ತಿದ್ದಂತೆ ಕರಡಿ ಅದರ ಬಳಿ ಓಡಿ ಹೋಗುತ್ತದೆ. ಜೊತೆಗೆ ಸುತ್ತಲಿದ್ದವರು ಕೂಡ ಕರಡಿ ಇದ್ದ ಸ್ಥಳಕ್ಕೆ ಬಂದು ಮಗುವನ್ನು ಎತ್ತಿ ಕರೆದೊಯ್ಯುತ್ತಾರೆ. ಇತ್ತ ತಾಯಿ (Mother) ಈ ಕೃತ್ಯವೆಸಗಿದಾಗ ಅಲ್ಲಿದ್ದವರು ಅಸಹಾಯಕತೆಯಿಂದ ನೋಡುತ್ತಿದ್ದರು ಮತ್ತು ಮಹಿಳೆ ತನ್ನ ಮಗುವನ್ನು(Baby) ಕೆಳಗೆ ಎಸೆದಾಗ ತಡೆಯಲು ಯತ್ನಿಸಿದರಾದರು ಅಷ್ಟರಲ್ಲಾಗಲೇ ಮಗು ಕೆಳಗೆ ಬಿದ್ದಾಗಿತ್ತು. ಇದಾದ ಬಳಿಕ ಮಹಿಳೆ ವಿರುದ್ಧ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿತ್ತು.