ಸ್ವಿಮ್ಮಿಂಗ್ ಮಾಡ್ತಿದ್ದ ವೃದ್ಧನ ಶಿಶ್ನದೊಳಗೆ ನುಗ್ಗಿದ ಲೀಚ್..! ರಕ್ತ ಹೀರಿದ್ರೂ ಗೊತ್ತೇ ಆಗಿಲ್ಲ

By Suvarna News  |  First Published Jun 27, 2020, 12:36 PM IST

ಮಳೆಗಾಲ ಎಂದು ನದಿ, ಸರೋವರ, ಕೆರೆಯಲ್ಲಿ ಈಜಲು ಹೋಗ್ತಿರಾ..? ಹಾಗಾದ್ರೆ ನೀವು ಎಚ್ಚರದಿಂದಿರಬೇಕು..ಹಾಯಾಗಿ, ಮೈಮರೆತು ಈಜಿದ್ರೆ ಹೀಗೂ ಆಗಬಹುದು. ಇಲ್ಲಿ ಓದಿ.


ಕಾಂಬೋಡಿಯಾ(ಜೂ.27): ನೀರಲ್ಲಿ ಮೈಮರೆತು ಈಜುತ್ತಿದ್ದ ವೃದ್ಧನ ಶಿಶ್ನದ ಒಳಕ್ಕೆ ಲೀಚ್ ನುಗ್ಗಿರುವ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ. ಲೀಚ್ ಶಿಶ್ನದೊಳಗೆ ನುಗ್ಗಿ ರಕ್ತ ಹೀರಿದರೂ ವೃದ್ಧನಿಗೆ ಮಾತ್ರ ಗೊತ್ತೇ ಆಗಿಲ್ಲ.

ಮೂತ್ರ ಮಾಡುವ ಸಂದರ್ಭ ಅತೀವ ನೋವುಂಟಾಗಿ ವೃದ್ಧ ವೈದ್ಯರ ಬಳಿ ಹೋಗಿದ್ದ. ನೋವುಂಟಾದಾಗಲೇ ಏನೋ ಆಗಿದೆ ಎಂಬುದು ಆತನಿಗೆ ಅರಿವಾಗಿತ್ತು. ಆಸ್ಪತ್ರೆಗೆ ಹೋದಾಗ ಮಿನಿ ಕ್ಯಾಮೆರಾವೊಂದನ್ನು ವೃದ್ಧನ ಶಿಶ್ನದ ಓಳಗೆ ಹಾಕಿ ನೋವಿಗೆ ಕಾರಣ ಏನು ಎಂಬುದನ್ನು ವೈದ್ಯರು ಪರೀಕ್ಷಿಸಿದ್ದರು. ಕ್ಯಾಮೆರಾದಲ್ಲಿ ಕಂಡು ಬಂದ ದೃಶ್ಯ ವೈದ್ಯರೂ ಸೇರಿ ವೃದ್ಧನೂ ಬೆಚ್ಚಿಬೀಳಿಸಿತ್ತು.

Tap to resize

Latest Videos

30 ವರ್ಷದ ಬಳಿಕ ಗೊತ್ತಾಯ್ತು ‘ಅವಳು’ ಅವಳಲ್ಲ ‘ಅವನು’!

ಶಿಶ್ನದಲ್ಲಿ ಅತೀವ ನೋವಿಗೆ ಲೀಚ್‌ ಕಾರಣವೆಂಬುದು ನಂತರ ತಿಳಿದಿತ್ತು. ಅದಾಗಲೇ ರಕ್ತ ಹೀರಿ ದೊಡ್ಡದಾಗಿ ಬೆಳೆದಿತ್ತು. ನಂತರ ವಿಚಾರಿಸಿದಾಗ ವೃದ್ಧ ತಾನು ನದಿಯಲ್ಲಿ ಈಜಲು ಹೋಗಿರುವುದಾಗಿ ತಿಳಿಸಿದ್ದಾನೆ. ಲೀಚ್ ತನ್ನ ಶಿಶ್ನದೊಳಗೆ ಪ್ರವೇಶಿಸಿದ್ದಾಗಲಿ, ಮೂತ್ರನಾಳದಲ್ಲಿ ಹೋಗಿದ್ದಾಗಲೀ ವೃದ್ಧನ ಅರಿವಿಗೆ ಬಂದಿಲ್ಲ.

ಘಟನೆಯ ನಂತರ ಆಸ್ಪತ್ರೆ ಅಧಿಕಾರಿಗಳು, ಹೇಳಿಕೆ ಪ್ರಕಟಿಸಿ ಮಳೆಗಾಲದಲ್ಲಿ ನದಿಗಳಲ್ಲಿ ಲೀಚ್ ಹೆಚ್ಚಾಗಿರುತ್ತವೆ. ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ. ಲೀಚ್‌ಗಳು ಸ್ವಭಾವತ ಚಿಕ್ಕದಾಗಿದ್ದು, ರಕ್ತ ಹೀರಿದಾಗ ದೇಹದ ಗಾತ್ರ ಹೆಚ್ಚಿಸಿಕೊಳ್ಳುತ್ತವೆ. ವೃದ್ಧನ ಶಿಶ್ನದೊಳಗೆ ಹೊಕ್ಕ ಲೀಚ್ ರಕ್ತ ಹೀರಿ ದಪ್ಪಗಾಗಿದ್ದು, ಅದನ್ನು ಹೊರ ತೆಗೆಯುವ ಚಿಕಿತ್ಸೆ ಮತ್ತಷ್ಟು ಕ್ಲಿಷ್ಟಕರವಾಗಿತ್ತು. ಗುಪ್ತಾಂಗದಲ್ಲಿ ಅದಾಗಲೇ ಸಾಕಷ್ಟು ಗಾಯಗಳನ್ನೂ ಮಾಡಿತ್ತು.

ಸೆಕೆ ತಡೆಯಲಾಗದೆ ಗುಪ್ತಾಂಗಕ್ಕೆ ಕುಲ್ಫೀ ಹಾಕಿದ ಮಹಿಳೆ: ಮುಂದಾಗಿದ್ದು ದುರಂತ!

ಹಾಗಾಗಿಯೇ ಲೀಚ್‌ ಹೊರಗೆತೆಯುವ ಮುನ್ನ ಚಿಕ್ಕ ಟೂಲ್ ಶಿಶ್ನದೊಳ ಹಾಕಿ ಲೀಚ್‌ನ್ನು ಕೊಲ್ಲಲಾಗಿತ್ತು. ಮನುಷ್ಯರ ದೇಹದೊಳಗೆ ಲೀಚ್ ಹೋಗುವುದು ಇದೇ ಮೊದಲಲ್ಲ. 2018ರಲ್ಲಿ ಚೀನಾದ ವ್ಯಕ್ತಿಯೊಬ್ಬರ ಮೂಗಿನೊಳಗೆ ನುಗ್ಗಿದ ಲೀಚ್ ರಕ್ತ ಉಗುಳುತ್ತಲೇ ಹೊರಗೆ ಬಂದಿತ್ತು.

click me!