ಭಾರತದ ದಾಳಿಗೆ ಲಾಹೋರ್‌, ಕರಾಚಿ ತತ್ತರ: ಪಾಕ್‌ನಾದ್ಯಂತ ಯುದ್ಧದ ಕಾರ್ಮೋಡ

Published : May 09, 2025, 05:16 AM IST
ಭಾರತದ ದಾಳಿಗೆ ಲಾಹೋರ್‌, ಕರಾಚಿ ತತ್ತರ: ಪಾಕ್‌ನಾದ್ಯಂತ ಯುದ್ಧದ ಕಾರ್ಮೋಡ

ಸಾರಾಂಶ

ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗುಬಾಣವಾಗಿದೆ. 

ಲಾಹೋರ್‌ (ಮೇ.09): ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗುಬಾಣವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವು ನಡೆಸಿದ ಡ್ರೋನ್‌ ದಾಳಿಗೆ ಪಾಕಿಸ್ತಾನದ ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ಗುರುವಾರ ಬೆಳಗ್ಗೆ ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ನಾಗರಿಕರು ಭಯಭೀತರಾಗಿದ್ದಾರೆ.

ಪಾಕ್‌ ಆಕ್ರಮಿತ ಕಾಶ್ಮೀರಕ್ಕಷ್ಟೇ ಸೀಮಿತವಾಗಿದ್ದ ಯುದ್ಧದ ಕಾರ್ಮೋಡ ಸ್ಥಿತಿ ಇದೀಗ ಇಡೀ ಪಾಕಿಸ್ತಾನವನ್ನು ಆವರಿಸಿದೆ. ಪಾಕಿಸ್ತಾನದ ದುಸ್ಸಾಹಸಕ್ಕೆ ಭಾರತ ಇಷ್ಟು ತೀವ್ರವಾಗಿ ಪ್ರತಿ ದಾಳಿ ನಡೆಸುತ್ತದೆ, ಪಾಕ್‌ ಕಾಶ್ಮೀರದಾಚೆಗಿನ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತದೆ ಎಂದು ಸಣ್ಣ ಕಲ್ಪನೆಯೂ ಮಾಡದ ಪಾಕಿಸ್ತಾನ ಇದೀಗ ತೀವ್ರ ಹತಾಶೆಗೊಳಗಾಗಿದೆ.

ಪಾಕಿಸ್ತಾನದ ಅತಿದೊಡ್ಡ ನಗರವಾದ ಲಾಹೋರ್‌ ವಾಲ್ಟನ್‌ ರಸ್ತೆಯಲ್ಲಿ ಮೂರು ಸ್ಫೋಟದ ಸದ್ದುಗಳು ಬೆಳಗ್ಗೆ ಕೇಳಿಬಂದಿವೆ. ಇದರಿಂದ ಆತಂಕಕ್ಕೊಳಗಾದ ನಿವಾಸಿಗಳು ರಕ್ಷಣೆಗಾಗಿ ಮನೆಯೊಳಗೆ ದೌಡಾಯಿಸಿದ್ದಾರೆ. ಭಾರತದ ವೈಮಾನಿಕ ದಾಳಿಯಿಂದ ನಗರದ ಹಲವೆಡೆ ದಟ್ಟಹೊಗೆ ಆವರಿಸಿದ್ದು, ಸದ್ಯ ಲಾಹೋರ್‌ದಲ್ಲಿ ಆತಂಕದ ಸ್ಥಿತಿ ಮನೆ ಮಾಡಿದೆ. ಜನ ಮನೆಯಿಂದ ಹೊರಬರಲು ಆತಂಕಪಡುವಂತಾಗಿದೆ. ಸ್ಫೋಟದ ವಿಚಾರವನ್ನು ಸ್ಥಳೀಯ ಮಾಧ್ಯಮಗಳೂ ಖಚಿತಪಡಿಸಿವೆ. ಲಾಹೋರ್‌ ಮತ್ತು ಸಿಯಾಲ್‌ಕೋಟ್‌ನಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಲವು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಉಗ್ರ ಹಫೀಜ್‌ ಪಾಕಿಸ್ತಾನ ಕೋರ್ಟ್‌ಗೆ ಅರ್ಜಿ

ಪಾಕಿಸ್ತಾನದಿಂದ ಅಪಪ್ರಚಾರ: ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳ ಮೂಲಕ ಭಾರತದ ವಿರುದ್ಧ ಅಪಪ್ರಚಾರಕ್ಕಿಳಿದಿದೆ. ಭಾರತವು ಉಗ್ರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದರೆ ಪಾಕಿಸ್ತಾನ ಮಾತ್ರ ಭಾರತವು ಜನರ ಮೇಲೆ ದಾಳಿ ನಡೆಸಿದೆ ಎಂದು ಅಪಪ್ರಚಾರಕ್ಕಿಳಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ