ಮಕ್ಕಳು ಗದ್ದಲ ಮಾಡಿದ್ದಕ್ಕೆ ಗುಂಡಿಕ್ಕಿ ಕೊಂದ 90ರ ವೃದ್ಧನಿಗೆ ಮರಣ ದಂಡನೆ

By Suvarna NewsFirst Published Jul 2, 2021, 10:52 AM IST
Highlights
  • ಗದ್ದಲ ಮಾಡಿದ ಮಕ್ಕಳ ಮೇಲೆ ಫೈರಿಂಗ್
  • ಶೂಟ್ ಮಾಡಿ ಮಗುವನ್ನು ಸಾಯಿಸಿದ ವೃದ್ಧನಿಗೆ ಮರಣದಂಡನೆ

ಲಾಹೋರ್(ಜು.02): ಮಕ್ಕಳು ಎಂದ ಮೇಲೆ ಗಲಾಟೆ, ಸದ್ದು ಮಾಡುತ್ತಿರುವುದು ಸಾಮಾನ್ಯ. ಸ್ವಲ್ಪ ಹಿರಿಯರು, ವೃದ್ಧರಿಗೆ ಇದು ಅತೀವ ಕಿರಿಕಿರಿ ಅನಿಸುವುದಿದೆ.

ಇದೀಗ ಗದ್ದಲ ಮಾಡಿದ ಬಾಲಕನನ್ನು 90ರ ವೃದ್ಧ ಗುಂಡಿಕ್ಕಿ ಸಾಯಿಸಿರುವ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಲಾಹೋರ್‌ನ ಸೆಷನ್ಸ್ ಕೋರ್ಟ್ ವೃದ್ಧನಿಗೆ ಮರಣದಂಡನೆ ವಿಧಿಸಿದೆ. ಹಾಗೆಯೇ 50 ಸಾವಿರ ರೂಪಾಯಿ ದಂಡವನ್ನೂ ಹೇರಿದೆ.

ಆರೋಪಿಯನ್ನು ಗಾಮ ಆಲಿಯಾಸ್ ಗಾಮನಗ ಮಾಸಿ ಎಂದು ಗುರುತಿಸಲಾಗಿದೆ. ಮಕ್ಕಳು ಬೀದಿಯಲ್ಲಿ ಸದ್ದು ಮಾಡಿದಾಗ ಆರಂಭದಲ್ಲಿ ಗಾಮ ಮಕ್ಕಳೊಂದಿಗೆ ಜಗಳ ಮಾಡಿದ್ದ. ಮಕ್ಕಳು ಟ್ಯೂಶನ್ ಮುಗಿಸಿ ಮರಳುತ್ತಿದ್ದರು.

ಮೈಕ್ರೋಸಾಫ್ಟ್‌ನಲ್ಲಿದ್ದ ಬಗ್ ಹುಡುಕಿದ 20ರ ಯುವತಿಗೆ ಸಿಕ್ತು 22 ಲಕ್ಷ

ಮಕ್ಕಳು ತನ್ನ ಮಾತು ಕೇಳದಿದ್ದಾಗ ಗಾಮಾ ಆಕ್ಷನ್ ಗನ್ ಹೊರತೆಗೆದು ಫೈರಿಂಗ್ ಮಾಡಿದ್ದಾನೆ. ಇದರಲ್ಲಿ ಒಂದು ಗುಂಡು ನೌರಾಝ್ ಮಾಸಿ ಎಂಬ ಅಪ್ರಾಪ್ತ ಬಾಲಕನಿಗೆ ತಾಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಹೋದರಿ ಮತ್ತು ತಾಯಿಗೆ ಗಾಯಗಳಾಗಿವೆ.

50,000 ರೂ. ದಂಡ

ಘಟನೆಯ ನಂತರ, ನಿಶ್ತಾರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಮಾಸಿಹ್ ವಿರುದ್ಧ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಮಕ್ಕಳು ಶಬ್ದ ಮಾಡಲು ಪ್ರಾರಂಭಿಸಿದ ನಂತರ ಮಾಸಿಹ್ ಗುಂಡು ಹಾರಿಸಿದ್ದಾರೆ. ಪ್ರಕರಣ ನ್ಯಾಯಾಲಯಕ್ಕೆ ತಲುಪಿದಾಗ ನ್ಯಾಯಾಧೀಶರು 90 ವರ್ಷದ ವ್ಯಕ್ತಿಗೆ ಮರಣದಂಡನೆ ವಿಧಿಸಿದ್ದಾರೆ. ಸೆಷನ್ಸ್ ನ್ಯಾಯಾಲಯವು ಆ ವ್ಯಕ್ತಿಗೆ 50,000 ರೂ ದಂಡವನ್ನೂ ವಿಧಿಸಿದೆ.

click me!