ಪಾಕಿಸ್ತಾನ ಮಕ್ಕಳ ಕವ್ವಾಲಿಗೆ ಭಾರತೀಯರು ಪಿಧಾ, ಇಂಡೋ-ಪಾಕ್ ಗಡಿ ದಾಟಿದ ಸಾಂಗ್

Published : Oct 30, 2026, 12:17 PM IST
Love from India Pak qawwali song sensation

ಸಾರಾಂಶ

ಪಾಕಿಸ್ತಾನದಲ್ಲಿ ಪುಟಾಣಿ ಮಕ್ಕಳ ಕವ್ವಾಲಿ ಹಾಡು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕ್ ಹಾಗೂ ಭಾರತದಲ್ಲಿ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಮಕ್ಕಳ ಕವ್ವಾಲಿ ಹಾಡು ಈ ಮಟ್ಟಿಗೆ ವೈರಲ್ ಆಗಿದ್ದು ಹೇಗೆ?

ಲಾಹೋರ್ (ಅ.30) ಭಾರತ ಹಾಗೂ ಪಾಕಿಸ್ತಾನ ರಾಜತಾಂತ್ರಿಕ ಸಂಬಂಧ, ಗಡಿ ಪರಿಸ್ಥಿತಿ ಯಾವತ್ತೂ ಉದ್ವಿಘ್ನವಾಗಿರುತ್ತೆ. ಉಭಯ ದೇಶಗಳು ಸೋಶಿಯಲ್ ಮೀಡಿಯಾ ಮೂಲಕವೂ ಜಟಾಪಟಿ ಸಾಮಾನ್ಯ. ಆದರೆ ಹಲವು ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನದ ಬಹುತೇಕರು ಕವ್ವಾಲಿ ಹಾಡಿಗೆ ಮನಸೋತಿದ್ದಾರೆ. ಪಾಕಿಸ್ತಾನದ ಮಕ್ಕಳ ಹಾಡಿದ ಕವ್ವಾಲಿ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪುಟಾಣಿಗಳು ಹಾಡಿಗೆ ಭಾರತೀಯರು ಲವ್ ಫ್ರಮ್ ಇಂಡಿಯಾ ಎಂದು ಕಮೆಂಟ್ಸ್ ಮಾಡಿದ್ದಾರೆ.

ಒಂದೇ ವೇದಿಕೆಯಲ್ಲಿ ಪ್ರೀತಿ ಹಂಚಿಕೊಂಡ ಇಂಡೋ-ಪಾಕ್

ಸಂಗೀತಕ್ಕೆ ಯಾವುದೇ ಗಡಿ ಹಾಗೂ ಧರ್ಮದ ಹಂಗಿಲ್ಲ ಎಂಬುದನ್ನು ಪಾಕಿಸ್ತಾನದ ಲಾಹೋರ್‌ನ ಸಣ್ಣ ಮಕ್ಕಳ ಗುಂಪೊಂದು ಮತ್ತೆ ಸಾಬೀತುಪಡಿಸಿದೆ. ಲಾಹೋರ್‌ನ ಪುಟಾಣಿ ಮಕ್ಕಳು ಕವ್ವಾಲಿ ಹಾಡನ್ನು ಅತ್ಯಂತ ಶ್ರದ್ಧೆ ಹಾಗೂ ಮಧುರವಾಗಿ ಹಾಡಿದ್ದಾರೆ. ಈ ಕವ್ವಾಲಿ ಹಾಡಿನಿಂದ ಭಾರತ ಹಾಗೂ ಪಾಕಿಸ್ತಾನ ಜನ ಒಂದೇ ವೇದಿಕೆಯಲ್ಲಿ ಪ್ರೀತಿ, ಸಂತಸ ಹಂಚಿಕೊಳ್ಳುವಂತೆ ಮಾಡಿದೆ.

ಮಕ್ಕಳ ಹಾಡಿಗೆ ಜನ ಫಿದಾ

ಇನ್‌ಸ್ಟಾಗ್ರಾಮ್‌ನಲ್ಲಿ ಸುರ್‌ತಾಲ್ ಮ್ಯೂಸಿಕ್ ಅಕಾಡೆಮಿ ಆಫಿಶಿಯಲ್ ಎಂಬ ಪೇಜ್ ಮೂಲಕ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಚಿಕ್ಕ ವಯಸ್ಸಿನ ಗಾಯಕರು ಅತ್ಯಂತ ಗಂಭೀರ ಹಾಗೂ ಸುಶ್ರಾವ್ಯವಾಗಿ ಕವ್ವಾಲಿ ಪ್ರಸ್ತುತಪಡಿಸುತ್ತಿರುವುದು ವಿಡಿಯೋದಲ್ಲಿದೆ. ಮಕ್ಕಳ ಧ್ವನಿ, ಗಾಯನದ ಏರಿಳಿತ ಮತ್ತು ತಬಲಾ ಹಾಗೂ ಹಾರ್ಮೋನಿಯಂ ವಾದನದ ತಾಳಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಲವ್ ಫ್ರಮ್ ಇಂಡಿಯಾ

ವಿಶೇಷವೆಂದರೆ ಈ ವಿಡಿಯೋಗೆ ಭಾರತದ ನೆಟ್ಟಿಗರಿಂದ ಅಪಾರ ಪ್ರಮಾಣದ ಪ್ರೀತಿ ಮತ್ತು ಶುಭಹಾರೈಕೆಗಳು ವ್ಯಕ್ತವಾಗುತ್ತಿದೆ. ಕಾಮೆಂಟ್ ವಿಭಾಗದಲ್ಲಿ ನೂರಾರು ಭಾರತೀಯರು ಲವ್ ಫ್ರಮ್ ಇಂಡಿಯಾ (Love from India) ಎಂದು ಬರೆದು ತಮ್ಮ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಕಲೆ ಮತ್ತು ಸಂಗೀತ ಹೇಗೆ ಎರಡು ದೇಶಗಳ ಜನರನ್ನು ಒಗ್ಗೂಡಿಸಬಲ್ಲದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಈ ಪ್ರದರ್ಶನವನ್ನು ವೀಕ್ಷಿಸಿದ ಅನೇಕ ನೆಟ್ಟಿಗರು ಅತ್ಯಂತ ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ಜನರು ಈ ರೀತಿ ಪ್ರೀತಿ ವ್ಯಕ್ತಪಡಿಸುತ್ತಿರುವುದು ನೋಡಿ ಖುಷಿಯಾಗಿದೆ ಎಂದಿದ್ದಾರೆ. ಹಲವು ದಶಕಗಳಿಂದ ಉಭಯ ರಾಷ್ಟ್ರಗಳ ನಡುವೆ ಹೋರಾಟವೇ ಹೆಚ್ಚಾಗಿತ್ತು. ಮಕ್ಕಳ ಹಾಡಿನಿಂದ ಇದೀಗ ಪ್ರೀತಿ ಹಂಚಿಕೊಳ್ಳುವಂತಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ. ಮತ್ತೆ ಮತ್ತೆ ನೋಡಬೇಕನ್ನುವ ವಿಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ನಾನ ಮಾಡಿಸುವ ವಾಷಿಂಗ್​ ಮಷಿನ್​: ಒಳಗೆ ಕೂತ್ರೆ ಸಾಕು, ಕ್ಲೀನ್​ ಮಾಡಿ ಒರೆಸಿಯೂ ಕಳಿಸತ್ತೆ- ಪ್ರಯೋಗ ಯಶಸ್ವಿ
Flavio Bolsonaro: ಬ್ರೆಜಿಲ್‌ ಎಲೆಕ್ಷನ್‌ ಸೋತ ಬಳಿಕ ಟ್ರಂಪ್ ಆಪ್ತ ಬೊಲ್ಸೊನಾರೋ ರಹಸ್ಯವಾಗಿ ಅಮೆರಿಕಕ್ಕೆ ಪರಾರಿ!