High Alert in Mathura: ಮಸೀದಿಗೆ ದಾಳಿ ಭೀತಿ: ಮಥುರಾದಲ್ಲಿ ಹೈಅಲರ್ಟ್‌

Suvarna News   | Asianet News
Published : Dec 06, 2021, 04:00 AM IST
High Alert in Mathura: ಮಸೀದಿಗೆ ದಾಳಿ ಭೀತಿ: ಮಥುರಾದಲ್ಲಿ ಹೈಅಲರ್ಟ್‌

ಸಾರಾಂಶ

ಶಾಹಿ ಈದ್ಗಾ ಮಸೀದಿಯಲ್ಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ ಹಿನ್ನೆಲೆ ನಗರದಾದ್ಯಂತ ಭಾರಿ ಬಿಗಿಬಂದೋಬಸ್ತ್: ನಗರದಲ್ಲಿ ನಿಷೇಧಾಜ್ಞೆ

ಮಥುರಾ(ಡಿ.06): ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ(Babri Masjid) ಕೆಡವಿದ ಸ್ಮರಣಾರ್ಥ ಡಿ.6ರ ಸೋಮವಾರದಂದು ಮಥುರಾದ(Mathura) ಶಾಹಿ ಈದ್ಗಾ ಮಸೀದಿಯಲ್ಲಿ ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಿ ಸ್ಥಳೀಯ ಸಂಘಟನೆಯೊಂದು ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಹೈಅಲರ್ಟ್‌(High alert) ಘೋಷಿಸಲಾಗಿದೆ. ಈಗಾಗಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಪೊಲೀಸರು ಭಾನುವಾರ, ಗಲಭೆ ನಿಯಂತ್ರಣ ಕುರಿತಾದ ಅಣಕು ಪ್ರದರ್ಶನ ನಡೆಸಿದರು.

ಶಾಹಿ ಈದ್ಗಾ ಮಸೀದಿ ಕೃಷ್ಣನ ಜನ್ಮಸ್ಥಾನ. ಹೀಗಾಗಿ ಡಿ.6ರಂದು ಅಲ್ಲಿ ಕೃಷ್ಣನ ಮೂರ್ತಿ ಸ್ಥಾಪಿಸುವುದಾಗಿ ಸಂಘಟನೆಯೊಂದು ಎಚ್ಚರಿಕೆ ನೀಡಿತ್ತು. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಬಳಿಕ ಹೋರಾಟದಿಂದ ಹಿಂದೆ ಸರಿಯುವುದಾಗಿ ಸಂಘಟನೆ ಪ್ರಕಟಿಸಿತ್ತು. ಅದರ ಹೊರತಾಗಿಯೂ ಯಾವುದೇ ಅನಾಹುತಕಾರಿ ಘಟನೆ ತಡೆಯಲು ಸನ್ನದ್ಧವಾಗಿರುವ ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಏನೆಲ್ಲಾ ಭದ್ರತೆ ಇದೆ:

ಮಥುರಾದಲ್ಲಿ ಸೆ.144ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಶನಿವಾರದಿಂದಲೇ ಮಥುರಾ ಗಡಿಯಲ್ಲಿ ತಪಾಸಣೆಯನ್ನು ಆರಂಭಿಸಲಾಗಿದೆ. ನಗರವನ್ನು 2 ಸೂಪರ್‌ ವಲಯಗಳಾಗಿ, ನಾಲ್ಕು ವಲಯಗಳು ಮತ್ತು 8 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ.

Indonesia volcano eruption:ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಬಲಿ, ಹಲವರು ಕಣ್ಮರೆ

ವಿವಿಧ ಪಾಯಿಂಟ್‌ಗಳಲ್ಲಿ ಭಾನವಾರ ಬೆಳಗ್ಗೆಯಿಂದಲೇ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಡಿ.7ರವರೆಗೆ ಸಂಚಾರ ನಿರ್ಬಂಧ ಹೇರಲಾಗಿದ್ದು, ಮಸೀದಿ ಮತ್ತು ದೇವಸ್ಥಾನದ ಬಳಿ ವಾಹನಗಳ ಚಟುವಟಿಕೆಗಳನ್ನು ಪೂರ್ತಿ ನಿರ್ಬಂಧಿಸಲಾಗಿದೆ ಎಂದರು.

ನಿಷೇಧಾಜ್ಞೆ ಕ್ರಮಗಳನ್ನು ಬಿಗಿ

ಹಲವಾರು ಬಲಪಂಥೀಯ ಸಂಘಟನೆಗಳು ಶ್ರೀಕೃಷ್ಣ ಜನ್ಮಭೂಮಿ ಮತ್ತು ಪಕ್ಕದ ಶಾಹಿ ಈದ್ಗಾ ಕಡೆಗೆ ಉದ್ದೇಶಿತ ಮೆರವಣಿಗೆಗೆ ಒಂದು ದಿನ ಮುಂಚಿತವಾಗಿ ಮಥುರಾ ಪೊಲೀಸರು ಭಾನುವಾರ ಸಂಚಾರ ಸಲಹೆಯನ್ನು ನೀಡಿದ್ದಾರೆ. ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆದರೂ, ಪೊಲೀಸರು ಯಾವುದೇ ಅವಕಾಶವನ್ನು ತೆಗೆದುಕೊಳ್ಳದೆ ನಗರವನ್ನು ಭದ್ರತೆಗೆ ಒಳಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡು ಡಿಸೆಂಬರ್ 6 ಕ್ಕೆ 29 ವರ್ಷಗಳು ತುಂಬುವ ಕಾರಣ ನಿಷೇಧಾಜ್ಞೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!