Kinder Ban: ಬ್ಯಾಕ್ಟೀರಿಯಾ ಇತ್ತಾ! ಬ್ರಿಟನ್ನಲ್ಲಿ ಕಿಂಡರ್‌ ಉತ್ಪನ್ನ ಸೇವಿಸದಂತೆ ಸೂಚನೆ

Published : Apr 07, 2022, 03:59 AM ISTUpdated : Apr 07, 2022, 04:12 AM IST
Kinder Ban: ಬ್ಯಾಕ್ಟೀರಿಯಾ ಇತ್ತಾ! ಬ್ರಿಟನ್ನಲ್ಲಿ ಕಿಂಡರ್‌ ಉತ್ಪನ್ನ ಸೇವಿಸದಂತೆ ಸೂಚನೆ

ಸಾರಾಂಶ

* ಬ್ರಿಟನ್ನಲ್ಲಿ ಕಿಂಡರ್‌ ಉತ್ಪನ್ನ ಸೇವಿಸದಂತೆ ಸೂಚನೆ * ಚಾಕೋಲೇಟಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆ * ಸಾಲ್ಮೋನೆಲ್ಲಾದಿಂದ ಗಂಭೀರ ಕಾಯಿಲೆ

ನವದೆಹಲಿ(ಏ. 07) ಇಟಲಿ ಮೂಲದ ಪ್ರಖ್ಯಾತ ಫೆರ್ರೆರೊ ಕಂಪನಿಯ ಕಿಂಡರ್‌ (Kinder) ಉತ್ಪನ್ನಗಳನ್ನು ಸೇವಿಸದಂತೆ ಬ್ರಿಟನ್ನಿನ (Britain) ಆಹಾರ ಗುಣಮಟ್ಟಏಜೆನ್ಸಿ (ಎಫ್‌ಎಸ್‌ಎ) ಗ್ರಾಹಕರಿಗೆ ಸಲಹೆ ನೀಡಿದೆ. ಕಿಂಡರ್‌ ಉತ್ಪನ್ನಗಳಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗುವ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ಜು.11, 2020ರಿಂದ ಅ.7, 2022ರ ವರೆಗೆ ಬಳಸಬಹುದಾದ ಅವಧಿ ಹೊಂದಿರುವ ಕಿಂಡರ್‌ ಎಗ್‌ ಸರ್‌ಪ್ರೈಸ್‌ ಚಾಕೋಲೆಟ್‌ (Chocolate) ಸೇವಿಸದಂತೆ ಸೂಚಿಸಿದೆ.

ಬ್ರಿಟನ್ನಿನಾದ್ಯಂತ ಇತ್ತೀಚೆಗೆ ಕನಿಷ್ಠ 63 ಸಾಲ್ಮೋನೆಲ್ಲಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಯುಕೆ ಆರೋಗ್ಯ ಭದ್ರತಾ ಏಜೆನ್ಸಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಈ ಪ್ರಕರಣಗಳಿಗೂ ಕಿಂಡರ್‌ ಅಥವಾ ಫೆರ್ರೆರೊ ಕಂಪನಿಯ ಉತ್ಪನ್ನಗಳಿಗೂ ಸಂಬಂಧ ಇರುವುದು ದೃಢವಾಗಿದೆ. ಕಿಂಡರ್‌ ಕಂಪನಿಯ ಸಿಂಗಲ್‌ ಮತ್ತು ಮಲ್ಟಿಪ್ಯಾಕ್‌ ಕಿಂಡರ್‌ ಸರ್‌ಪ್ರೈಸ್‌ ಎಗ್‌ಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಕಿಂಡರ್‌ ಎಗ್‌ ಸರ್‌ಪ್ರೈಸ್‌ ಮೊಟ್ಟೆಯಾಕಾರದ ಚಿಕ್ಕ ಬಾಕ್ಸ್‌ ಒಳಗೆ ಚಾಕೋಲೇಟ್‌ ಮತ್ತು ಆಟಿಕೆಗಳನ್ನು ಒಳಗೊಂಡಿರುವ ಮಕ್ಕಳ ಅಚ್ಚುಮೆಟ್ಟಿನ ಸಹಿ ತಿಂಡಿ. ಈ ಬೆನ್ನಲ್ಲೇ ಫೆರ್ರೆರೊ ತನ್ನ ಉತ್ಪನ್ನಗಳನ್ನು ಹಿಂಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಏನಿದು ಸಾಲ್ಮೋನೆಲ್ಲಾ? ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ. ಆಹಾರ ವಸ್ತುಗಳ ಮೂಲಕ ಇದು ಮಾನವನ ದೇಹಕ್ಕೆ ಸೇರಿ ಅತಿಸಾರ, ಹೊಟ್ಟೆಸೆಳೆತ, ವಾಕರಿಕೆ, ವಾಂತಿ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆ ಅದಾಗೇ ಗುಣವಾಗುತ್ತದೆ. ಆದರೆ ಮಕ್ಕಳಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಇದು ಹೆಚ್ಚು ಕಾಡುತ್ತದೆ. ಸಾಲ್ಮೋನೆಲ್ಲಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯೂ ಇರುತ್ತದೆ.

Chaitra Navratri ಚೈತ್ರ ನವರಾತ್ರಿ ವೇಳೆ ಮದ್ಯ,ಮಾಂಸ ಮಾರಾಟ ನಿಷೇಧಿಸಲು ದಕ್ಷಿಣ ದೆಹಲಿ ಮೇಯರ್ ಆಗ್ರಹ!

 ಏರ್ ಇಂಡಿಯಾ (Air India) ವಿಮಾನದಲ್ಲಿ ಜೈನ ಪ್ರಯಾಣಿಕರಿಗೆ ಆಕಸ್ಮಿಕವಾಗಿ ಮಾಂಸಾಹಾರಿ ಆಹಾರವನ್ನು ನೀಡಿದ ಕೆಲವು ದಿನಗಳ ನಂತರ, ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿ  ಮತ್ತು ಜೈನ ಸಮುದಾಯವು (Jain community ) ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ದೇಶೀಯ ವಿಮಾನಗಳಲ್ಲಿ ಮಾಂಸಾಹಾರ ಊಟವನ್ನು ನೀಡುವುದನ್ನು ನಿಷೇಧಿಸುವಂತೆ ಕೋರಿತ್ತು.

"ಸಸ್ಯಾಹಾರಿ ಪ್ರಯಾಣಿಕರ ಪರವಾಗಿ ಈ ವಿನಂತಿಯನ್ನು ಮಾಡಲಾಗುತ್ತಿದೆ... ಕಟ್ಟುನಿಟ್ಟಾದ ಸಸ್ಯಾಹಾರಿ ಪ್ರಯಾಣಿಕರಿಗೆ ಸಸ್ಯಾಹಾರಿ ಆಹಾರದ ಬದಲಿಗೆ ಮಾಂಸಾಹಾರಿ ಆಹಾರವನ್ನು ನೀಡಿದಾಗ ಹೆಚ್ಚು ತೊಂದರೆ ಮತ್ತು ಕಸಿವಿಸಿ ಅನುಭವಿಸುತ್ತಾರೆ" ಎಂದು ಮಂಡಳಿಯ ಸದಸ್ಯ ರಾಜೇಂದ್ರ ಶಾ ಪತ್ರದಲ್ಲಿ ತಿಳಿಸಿದ್ದಾರೆ. ವಿಶೇಷವೆಂದರೆ, ಅಂತರರಾಷ್ಟ್ರೀಯ ಮಾರ್ಗದಲ್ಲಿ ಸಂಭವಿಸಿದ ಘಟನೆಗಾಗಿ ದೇಶೀಯ ವಿಮಾನಗಳಲ್ಲಿ ಮಾಂಸಾಹಾರಿ ಆಹಾರವನ್ನು ನಿಷೇಧಿಸುವಂತೆ ಗುಂಪು ಒತ್ತಾಯಿಸಿತ್ತು.

ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಬರೆದುಕೊಂಡಿದ್ದ ಪ್ರಯಾಣಿಕ ರಾಘವೇಂದ್ರ ಜೈನ್ ಅವರು, ಮಾರ್ಚ್ 25 ರಂದು ಏರ್ ಇಂಡಿಯಾ ವಿಮಾನದಲ್ಲಿ ಟೋಕಿಯೊದಿಂದ ದೆಹಲಿಗೆ ಕುಟುಂಬದೊಂದಿಗೆ ಪ್ರಯಾಣಿಸಿದ್ದಾಗಿ ಹೇಳಿದ್ದರು. ತಾನು ಸಸ್ಯಾಹಾರಿ ಊಟವನ್ನು ಮೊದಲೇ ಬುಕ್ ಮಾಡಿದ್ದೆ ಮತ್ತು ಚೆಕ್-ಇನ್ ಕೌಂಟರ್‌ನಲ್ಲಿ ಅವುಗಳನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದರು. ಇದರ ನಡುವೆಯೂ ಸಿಬ್ಬಂದಿ ಮಾಂಸಾಹಾರಿ ಊಟ ನೀಡಿದ್ದರು ಎಂಬುದು ಸುದ್ದಿಯಾಗಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?