ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ| ಸರ್ಜರಿ ನಡೆದ ಬಳಿಕ ಮತ್ತಷ್ಟು ಹದಗೆಟ್ಟ ಆರೋಗ್ಯ| ಅಜ್ಜನ ಹುಟ್ಟುಹಬ್ಬ ಕಾರ್ಯಕ್ರಮಕ್ಕೂ ಕಿಮ್ ಗೈರು
ಪ್ಯೋಂಗಿಯಾಂಗ್(ಏ.21): ವಿಶ್ವದ ಅತ್ಯಂತ ರಹಸ್ಯಮಯ ದೇಶಗಳಲ್ಲೊಂದಾದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕಾರ್ಡಿಯೋವ್ಯಾಸ್ಕುಲರ್ ಸಮಸ್ಯೆಯಿಂದ ಬಳಲುತ್ತಿದ್ದ ಕಿಮ್‌ಗೆ ಸರ್ಜರಿ ಕೂಡಾ ನಡೆದಿತ್ತು. ಆದರೆ ಈ ಸರ್ಜರಿ ಬಳಿಕ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸಂಬಂಧ ಪ್ರತಿಕ್ರಿಯಯಿಸಿರುವ ಅಮೆರಿಕದ ಅಧಿಕಾರಿಯೊಬ್ಬರು ಕಿಮ್ ಆರೋಗ್ಯ ಕಳೆದ ಹಲವಾರು ತಿಂಗಳೀಂದ ಹದಗೆಟ್ಟಿದೆ. ಅತ್ಯಧಿಕ ಧೂಮಪಾನ ಮಾಡುತ್ತಿದ್ದ ಕಿಮ್, ಸ್ಥೂಲಕಾಯದಿಂದಲೂ ಬಳಲುತ್ತಿದ್ದರು. ಅವರನ್ನು ಏಪ್ರಿಲ್ 11 ರಂದು ಕೊನೆಯ ಬಾರಿ ನೊಡಲಾಗಿತ್ತು. ಇಷ್ಟೇ ಅಲ್ಲದೇ ಅವರು ತನ್ನ ಅಜ್ಜ ದಿನ ಹಿನ್ನೆಲೆ ಏಪ್ರಿಲ್ 15 ರಂದು ನಡೆಸಲಾಗುತ್ತಿದ್ದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿಲ್ಲ ಎನ್ನಲಾಗಿದೆ.
ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ವಂತೆ, ಯಾಕೆ?
ಕಿಮ್ ಜಾಂಗ್ ಉನ್‌ರಿಗೆ ಇತ್ತೀಚೆಗೆ ದಕ್ಷಿಣ ಕೊರಿಯಾದ ಹಯಾಂಗ್‌ಸಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಗುಪ್ತಚರ ಇಲಾಖೆ ಸಿಬ್ಬಂದಿ ನೀಡಿರುವ ಮಾಹಿತಿ ಅನ್ವಯ ಉತ್ತರ ಕೊರಿಯಾದಿಂದ ಸೂಕ್ತ ಹಾಗೂ ನಿಖರ ಮಾಹಿತಿ ಲಭ್ಯವಾಗುವುದು ಬಹಳ ಕಷ್ಟ. ಯಾಕೆಂದರೆ ಇಲ್ಲಿನ ನಾಗರಿಕರು ತಮ್ಮ ನಾಯಕನನ್ನು ದೇವರಂತೆ ಕಾಣುತ್ತಾರೆ. ಹೀಗಾಗಿ ನಾಯಕನಿಗೆ ಸಂಬಂಧಿಸಿದ ಮಾಹಿತಿಯನ್ನು ಯಾರೊಬ್ಬರೂ ಬಾಯ್ಬಿಡುವುದಿಲ್ಲ.
ಕಿಮ್ ತಂದೆಯೂ ನಿಗೂಢ ನಾಪತ್ತೆ!
2008ರಲ್ಲಿ ಉತ್ತರ ಕೊರಿಯಾ ಅಂದಿನ ಅಧ್ಯಕ್ಷ ಕಿಮ್ ಜಾಂಗ್ IIಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರಿಗೆ ಸ್ಟ್ರೋಕ್ ಉಂಟಾಗಿದೆ ಎಂದು ಅಧಿಕಾರಿಗಳು ನಂತರ ತಿಳಿಸಿದ್ದರು. ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸಿತ್ತು. 2011ರಲ್ಲಿ ಕಿಮ್ ಜಾಂಗ್ II ಮೃತಪಟ್ಟಿದ್ದರು.