ನೀರಿಗೂ ಹರಡಿದ ಕೊರೋನಾ: ವೈರಾಣು ಪತ್ತೆ!

By Kannadaprabha NewsFirst Published Apr 21, 2020, 10:04 AM IST
Highlights

ನೀರಲ್ಲೂ ಕೊರೋನಾ ವೈರಾಣು ಪತ್ತೆ| ಮಾನವ ಬಳಕೆಯೇತರ ಉದ್ದೇಶಕ್ಕೆ ಬಳಸುವ ನೀರಲ್ಲಿ ಪತ್ತೆ

ಪ್ಯಾರೀಸ್(ಏ.21): ಗಾಳಿ ಮತ್ತು ನೀರಿನಿಂದ ಹರಡುವುದಿಲ್ಲ ಎನ್ನುವ ಕಾರಣಕ್ಕೆ ಜನರಿಗೆ ಒಂದಿಷ್ಟುನೆಮ್ಮದಿ ನೀಡಿದ್ದ ಕೊರೋನಾ ಸೋಂಕು ಇದೀಗ ಮತ್ತೊಂದು ಆತಂಕವನ್ನು ಹುಟ್ಟುಹಾಕಿದೆ.

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಹೊರತಾಗಿ ಬಳಸುವ ನೀರು ಪೂರೈಕೆ ಜಾಲದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಈಗಾಗಲೇ ದೇಶದಲ್ಲಿ 1.52 ಲಕ್ಷ ಜನರಿಗೆ ತಗುಲಿ, 19000ಕ್ಕೂ ಹೆಚ್ಚು ಜನ ಬಲಿಯಾದ ದೇಶದಲ್ಲಿ ಮತ್ತಷ್ಟುಆತಂಕಕ್ಕೆ ಕಾರಣವಾಗಿದೆ.

ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!

ನಗರದಲ್ಲಿ ಹೂವಿನ ಗಿಡಗಳಿಗೆ ಹಾಕುವುದು ಸೇರಿದಂತೆ ಇತರೆ ಕೆಲವು ಮಾನವ ಬಳಕೆಯೇತರ ಉದ್ದೇಶಗಳಿಗೆ ಬಳಸುವ ನೀರಿನ ಜಾಲದಿಂದ ಒಟ್ಟು 27 ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಪೈಕಿ 4 ಮಾದರಿಯಲ್ಲಿ ಕೊರೋನಾ ವೈರಸ್‌ನ ಸಣ್ಣ ಕುರುಹುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ತಕ್ಷಣದಿಂದ ಈ ಜಾಲವನ್ನು ಬಂದ್‌ ಮಾಡಲಾಗಿದೆ. ಆದರೆ ನಗರಕ್ಕೆ ಕುಡಿಯುವ ನೀರು ಪೂರೈಸಲು ಬೇರೆ ವಿತರಣಾ ಜಾಲವಿದ್ದು, ಅದು ಪೂರ್ಣ ಸುರಕ್ಷಿತವಾಗಿದೆ. ಜನ ಯಾವುದೇ ಆತಂಕವಿಲ್ಲದೇ ನೀರನ್ನು ಕುಡಿಯುಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

click me!