ಉತ್ತರಾಧಿಕಾರಿಯ ಪಟ್ಟಕ್ಕೆ 3 ಹೆಸರು ಸೂಚಿಸಿದ ಖಮೇನಿ!

Published : Jun 22, 2025, 04:48 AM IST
Ayatollah Khamenei

ಸಾರಾಂಶ

ಬಂಕರ್‌ನಲ್ಲಿ ಅಡಗಿ ಕುಳಿತಿರುವ ಖಮೇನಿ, ಅಲ್ಲಿಂದಲೇ ತಮ್ಮ ಉತ್ತರಾಧಿಕಾರಿಯಾಗಲು 3 ಜನರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. ಇವರಲ್ಲಿ ಕೊನೆಯದಾಗಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಟೆಹ್ರಾನ್‌: ‘ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದಲೇ ಸಂಘರ್ಷ ಅಂತ್ಯವಾಗುತ್ತದೆ’ ಎಂಬ ಇಸ್ರೇಲ್‌ ಆರ್ಭಟಿಸುತ್ತಿರುವ ನಡುವೆಯೇ, ಬಂಕರ್‌ನಲ್ಲಿ ಅಡಗಿ ಕುಳಿತಿರುವ ಖಮೇನಿ, ಅಲ್ಲಿಂದಲೇ ತಮ್ಮ ಉತ್ತರಾಧಿಕಾರಿಯಾಗಲು 3 ಜನರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. ಇವರಲ್ಲಿ ಕೊನೆಯದಾಗಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಇರಾನ್‌ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ಈ ಬಗ್ಗೆ ವರದಿ ಮಾಡಿದೆ, ತಾವು ಇಸ್ರೇಲ್‌ ಅಥವಾ ಅಮೆರಿಕದ ದಾಳಿಗೆ ಬಲಿಯಾಗಬಹುದು ಎಂದು ಖಮೇನಿಗೆ ತಿಳಿದಿದ್ದು, ಅಂತಹ ಸಾವನ್ನು ಅವರು ‘ಹುತಾತ್ಮತೆ’ ಎಂದು ನಂಬುತ್ತಾರೆ ಎನ್ನಲಾಗಿದೆ. ಆದ್ದರಿಂದಲೇ ತಮ್ಮ ಉತ್ತರಾಧಿಕಾರಿಯ ನೇಮಕಕ್ಕೆ ಮುಂದಾಗಿದ್ದಾರೆ. ಅವು ಈಗಾಗಲೇ 3 ಹೆಸರುಗಳನ್ನು ಅಂತಿಮ ಆಯ್ಕೆಗಾಗಿ ತಜ್ಞರಿಗೆ ಕಳಿಸಿದ್ದಾರೆ. ಆದರೆ ತಮ್ಮ ಹುದ್ದೆಗೆ ಪುತ್ರ ಮೊಜ್ತಬಾನನ್ನು ಪರಿಗಣಿಸಿಲ್ಲ ಎಂಬುದು ಗಮನಾರ್ಹ.

ಇಸ್ರೇಲ್‌ ದಾಳಿಗೆ ಬಲಿಯಾಗಿರುವ ಇರಾನ್‌ನ ಹಿರಿಯ ಸೇನಾಧಿಕಾರಿಗಳ ಹುದ್ದೆಗೂ ಖಮೇನಿ ಬಂಕರ್‌ನಿಂದಲೇ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಆಯ್ಕೆ ಏಕೆ?

ಖಮೇನಿ ನಿರ್ನಾಮ ನಮ್ಮ ಯುದ್ಧದ ಗುರಿ ಎಂದು ಇಸ್ರೇಲ್‌ ಘೋಷಣೆ

ಇದು ತಮ್ಮ ಹತ್ಯೆಗೆ ಇಸ್ರೇಲ್‌ ಸಿದ್ಧತೆ ನಡೆಸಿದೆ ಎಂದು ಖಮೇನಿಗೆ ಭೀತಿ

ಹೀಗಾಗಿ ಉತ್ತರಾಧಿಕಾರಿ ಆಯ್ಕೆಯಾಗಿ ಖಮೇನಿಯಿಂದ ಮೂರು ಹೆಸರು

ಅಮೆರಿಕ ಇಂದಲ್ಲ, ನಾಳೆ ಇರಾನ್‌-ಇಸ್ರೇಲ್‌ ಸಂಘರ್ಷದಲ್ಲಿ ಇಸ್ರೇಲ್‌ ಪರವಾಗಿ ಭಾಗಿಯಾಗುವುದು ಖಚಿತ

ಅಮೆರಿಕ ಇಂದಲ್ಲ, ನಾಳೆ ಇರಾನ್‌-ಇಸ್ರೇಲ್‌ ಸಂಘರ್ಷದಲ್ಲಿ ಇಸ್ರೇಲ್‌ ಪರವಾಗಿ ಭಾಗಿಯಾಗುವುದು ಖಚಿತವಾಗಿದೆ. ಅದಕ್ಕೆ ಸಿದ್ಧತೆ ಎನ್ನುವಂತೆ ಆಳವಾದ ಭೂಗತ ಗುರಿಗಳನ್ನು ನಾಶ ಮಾಡಲು ಸಾಧ್ಯವಾಗುವ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಬಾಂಬ್‌ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಏಕೈಕ ಜೆಟ್‌ ಆದ ಬಿ2 ಬಾಂಬರ್‌ ಅನ್ನು ಗುವಾಮ್‌ ದೇಶಕ್ಕೆ ಕಳಿಸಿಕೊಟ್ಟಿದೆ.

ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಮೆರಿಕ ಭಾಗವಹಿಸಬೇಕೇ ಬೇಡವೇ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಚಿಸುತ್ತಿರುವ ನಡುವೆಯೇ, ಅಮೆರಿಕವು ಬಿ -2 ಬಾಂಬರ್‌ಗಳನ್ನು ಪೆಸಿಫಿಕ್ ದ್ವೀಪವಾದ ಗುವಾಮ್‌ಗೆ ಸಾಗಿಸುತ್ತಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಬಾಂಬರ್ ವಿಮಾನಗಳ ನಿಯೋಜನೆಯು ಮಧ್ಯಪ್ರಾಚ್ಯದ ಉದ್ವಿಗ್ನತೆಗಳಿಗೆ ಸಂಬಂಧಿಸಿದೆಯೇ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್‌. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಫೋರ್ಡೋ ಸೇರಿದಂತೆ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಧ್ವಂಸ ಮಾಡಲು ಬಳಸಬಹುದಾದ ಅಸ್ತ್ರ ಅದು ಎಂದು ತಜ್ಞರು ಹೇಳುತ್ತಾರೆ.

 40 ವಿಮಾನ, 100 ಬಾಂಬ್‌ ಬಳಸಿ ಇರಾನ್‌ ಮೇಲೆ ಇಸ್ರೇಲ್‌ ಭಾರೀ ದಾಳಿ

ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಗುವಾಮ್‌ನ ಆಚೆಗೆ ಬಾಂಬರ್‌ಗಳನ್ನು ಸ್ಥಳಾಂತರಿಸಲು ಇನ್ನೂ ಯಾವುದೇ ಫಾರ್ವರ್ಡ್‌ ಆದೇಶಗಳನ್ನು ನೀಡಲಾಗಿಲ್ಲ ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ. ಎಷ್ಟು ಬಿ-2 ಬಾಂಬರ್‌ಗಳನ್ನು ಸ್ಥಳಾಂತರಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಪೆಂಟಗನ್ ಕೂಡ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!