ಇರಾನ್‌ನ ಅಣ್ವಸ್ತ್ರ ಘಟಕದ ಮೇಲೆ ಇಸ್ರೇಲ್‌ ಬಾಂಬ್‌

Published : Jun 22, 2025, 04:40 AM IST
bomb blast

ಸಾರಾಂಶ

ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.

ಟೆಲ್‌ ಅವಿವ್‌/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಇಸ್ರೇಲ್‌-ಇರಾನ್‌ ಸಂಘರ್ಷ 9ನೇ ದಿನಕ್ಕೆ ಪ್ರವೇಶಿಸಿದೆ. ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.

ಇದೇ ವೇಳೆ, ಇಸ್ರೇಲ್‌ನ 1200 ಜನರ ನರಮೇಧಕ್ಕೆ ಕಾರಣವಾದ ಅ.7ರ ಹಮಾಸ್‌ ದಾಳಿಗೆ ಸಹಕರಿಸಿದ್ದ ಕಮಾಂಡರ್‌ ಸೇರಿದಂತೆ ಇರಾನಿ ರೆವಲ್ಯೂಷನರಿ ಗಾರ್ಡ್ಸ್‌ನ 2 ಕಮಾಂಡರ್‌ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ

ಇರಾನ್‌ ಅಣುಸ್ಥಾವರದ ಮೇಲೆ 2ನೇ ಬಾರಿ ದಾಳಿ:

ಇಸ್ರೇಲ್ ಸೇನೆಯು ಇರಾನ್‌ನ ಇಸ್ಫಹಾನ್ ಅಣ್ವಸ್ತ್ರ ಕೇಂದ್ರದ ಮೇಲೆ 2ನೇ ಬಾರಿ 50 ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿದೆ. ದಾಳಿಯಿಂದ ಘಟಕಕ್ಕೆ ಹಾನಿಯಾಗಿದ್ದು ಉಪಗ್ರಹ ಚಿತ್ರದಲ್ಲಿ ಕಾಣುತ್ತದೆ ಆದರೆ ಇರಾನ್‌ ಮಾತ್ರ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿಕೊಂಡಿದ್ದು, ಅಣ್ವಸ್ತ್ರ ಸೋರಿಕೆ ಭೀತಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಫಹಾನ್‌ ಇರಾನ್‌ನ ಪ್ರಮುಖ ಅಣ್ವಸ್ತ್ರ ಕೇಂದ್ರವಾಗಿದ್ದು, ಇಲ್ಲಿ ಯುರೇನಿಯಂ ಸಂಸ್ಕರಣೆ ಮಾಡಲಾಗುತ್ತದೆ. ಇಂಧನ ಫ್ಯಾಬ್ರಿಕೇಷನ್‌ ಘಟಕವನ್ನೂ ಇದು ಹೊಂದಿದೆ. ಈ ಹಿಂದೆ ಜೂ.13ರಂದು ಮೊದಲ ಬಾರಿ ಘಟಕದ ಮೇಲೆ ದಾಳಿ ಆಗಿತ್ತು.

ಹಮಾಸ್‌ ಆಪ್ತ ಕಮಾಂಡರ್ ಫಿನಿಶ್:

ಗಾಜಾದಲ್ಲಿ ಪ್ಯಾಲೆಸ್ತೀನಿಗಳನ್ನು ಬೆಂಬಲಿಸುತ್ತಿದ್ದ ಸಾಗರೋತ್ತರ ಕ್ಯುಡ್ಸ್‌ನ ಕಮಾಂಡರ್‌ ಸಯೀದ್‌ ಇಜಾದಿ ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸಲು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಹಿಜ್ಬುಲ್ಲಾ, ಹಮಾಸ್ ಮತ್ತು ಯೆಮೆನ್‌ನ ಹೌತಿಗಳಿಗೆ ಪೂರೈಸುತ್ತಿದ್ದ ಬೆನ್‌ಹ್ಯಾಮ್ ಶರಿಯಾರಿಯನ್ನು ರಾತ್ರಿ ವೇಳೆ ನಡೆಸಿದ ದಾಳಿಯಲ್ಲಿ ಮುಗಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಜಾದಿ, 2023ರ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್ ರಾಜಧಾನಿ ಟೆಲ್‌ ಅವೀವ್‌ ಮೇಲೆ ದಾಳಿ ನಡೆಸಿ 1200ಕ್ಕೂ ಅಧಿಕ ನಾಗರಿಕರ ಬಲಿ ಪಡೆದ ದಾಳಿಕೋರರಿಗೆ ಇಜಾದಿ ಆರ್ಥಿಕ ಹಾಗೂ ಶಸ್ತ್ರಾಸ್ತ ನೆರವು ನೀಡಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಸ್‌ ಮಾಹಿತಿ ನೀಡಿದ್ದು, ‘ಇರಾನ್‌ನ ಕ್ವೋಂ ಪ್ರಾಂತ್ಯದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ ಮೇಲೆ ನಡೆಸಿದ ದಾಳಿಯಲ್ಲಿ, ರೆವಲ್ಯೂಷನರಿ ಗಾರ್ಡ್‌ನ ಸಾಗರೋತ್ತರ ಶಾಖೆಗಳ 2 ಕಮಾಂಡರ್‌ಗಳನ್ನು ಕೊಲ್ಲಲಾಗಿದೆ’ ಎಂದಿದ್ದಾರೆ. ಆದರೆ ಈ ಬಗ್ಗೆ ರೆವಲ್ಯೂಷನರಿ ಗಾರ್ಡ್ಸ್‌ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ.

ಇರಾನ್‌ನ ಶೇ.93 ಡ್ರೋನ್‌ ನಾಶ:

ಅತ್ತ ಇರಾನ್‌ ಕ್ಷಿಪಣಿ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ಲಭಿಸುತ್ತಿದ್ದಂತೆ, ರಾಜಧಾನಿ ಟೆಲ್‌ ಅವಿವ್‌ ಸೇರಿ ಮಧ್ಯ ಇಸ್ರೇಲ್‌, ವೆಸ್ಟ್‌ ಬ್ಯಾಂಕ್‌ನಲ್ಲಿ ಸೈರನ್‌ಗಳು ಮೊಳಗಿವೆ. ಬಳಿಕ ಗಾಳಿಯಲ್ಲೇ ಇರಾನ್‌ನ ಕ್ಷಿಪಣಿಗಳು ಧ್ವಂಸವಾಗುತ್ತಿದ್ದುದೂ ಕಂಡುಬಂದಿದೆ.

ಇರಾನ್‌ 470 ಡ್ರೋನ್‌ಗಳನ್ನು ನಾವು ಹಿಮ್ಮೆಟ್ಟಿಸಿದ್ದೇವೆ. ಡ್ರೋನ್‌ ನಾಶದಲ್ಲಿ ನಮ್ಮ ಸಕ್ಸಸ್‌ ರೇಟ್‌ ಶೇ.93 ಎಂದು ಇಸ್ರೇಲ್‌ ಹೇಳಿಕೊಂಡಿದೆ,

ಯುದ್ಧದ ನಡುವೆಯೇ ಇರಾನ್‌ ಅಣ್ವಸ್ತ್ರ ಪ್ರಯೋಗದ ವದಂತಿ

ಅನುಮಾನ ಹುಟ್ಟಿಸಿದ ಭೂಕಂಪಟೆಹ್ರಾನ್‌: ಇಸ್ರೇಲ್‌ ಜತೆಗಿನ ಸಂಘರ್ಷದ ನಡುವೆಯೇ ಉತ್ತರ ಇರಾನ್‌ನ ಸೆಮ್ನಾನ್‌ನಲ್ಲಿ ರಿಕ್ಟರ್‌ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಇರಾನ್‌ನ ಕ್ಷಿಪಣಿ ಸಂಕೀರ್ಣಕ್ಕೆ ಸಮೀಪದಲ್ಲೇ ಸಂಭವಿಸಿರುವ ಈ ಭೂಕಂಪನ ಸಾಕಷ್ಟು ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ. ಇರಾನ್‌ ಏನಾದರೂ ಪರಮಾಣು ಪರೀಕ್ಷೆ ನಡೆಸಿದೆಯೇ ಎಂಬ ಶಂಕೆ ಮೂಡಿಸಿದೆ. ಕಂಪನದ ಕೇಂದ್ರವು ಇರಾನ್‌ನ ಬಾಹ್ಯಾಕಾಶ ಮತ್ತು ಕ್ಷಿಪಣಿ ಸಂಕೀರ್ಣಗಳ ಸಮೀಪದಲ್ಲೇ ಇದೆ. ಹೀಗಾಗಿ ಈ ಕಂಪನ ನಾನಾ ಊಹಾಪೋಹ ಹುಟ್ಟುಹಾಕಿದೆ.

ಭೂಗತ ಪರಮಾಣು ಘಟಕ ಧ್ವಂಸದ ಬಾಂಬ್‌ ಇರಾನ್‌ನತ್ತ

ನ್ಯೂಯಾರ್ಕ್‌: ಇರಾನ್‌ ಭೂಗತವಾಗಿ ನಿರ್ಮಿಸಿರುವ ಅಣ್ವಸ್ತ್ರ ತಯಾರಿಕಾ ಘಟಕ ಧ್ವಂಸಕ್ಕೆ ಅಗತ್ಯವಾದ ಬಂಕರ್‌ ಬಸ್ಟರ್‌ ಬಾಂಬ್‌ಗಳನ್ನು ಹೊತ್ತುತಂದು ದಾಳಿ ನಡೆಸುವ ಬಿ-2 ಸ್ಟೆಲ್ತರ್‌ ವಿಮಾನಗಳನ್ನು ಅಮೆರಿಕ ಸೇನೆಯು ಇರಾನ್‌ನತ್ತ ಸಾಗಿಸಿದೆ ಎಂದು ವರದಿಗಳು ಹೇಳಿವೆ. ಭೂಮಿಯಲ್ಲಿ 200 ಅಡಿದ ಆಳದವರೆಗೂ ಸಾಗಿ ಗುರಿ ಧ್ವಂಸ ನಾಶ ಮಾಡಬಲ್ಲ ಈ ಬಾಂಬ್‌ಗೆ ಇತ್ತೀಚೆಗೆ ಇಸ್ರೇಲ್‌ ಅಮೆರಿಕಕ್ಕೆ ಬೇಡಿಕೆ ಸಲ್ಲಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!