ಉಗ್ರರ ದಾಳಿಗೊಳಗಾದ ಅಫ್ಘಾನ್ ಗುರುದ್ವಾರದ ದುರಸ್ತಿಗೆ 10 ಲಕ್ಷ ರೂ. ನೀಡಿದ ಕಾಶ್ಮೀರ ಸಿಖ್ ಸಂಸ್ಥೆ

By Anusha KbFirst Published Jun 22, 2022, 12:40 PM IST
Highlights

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಉಗ್ರರ ದಾಳಿಯಿಂದ ಹಾನಿಗೊಳಗಾದ ಗುರುದ್ವಾರಕ್ಕೆ ಕಾಶ್ಮೀರದ ಸಿಖ್ ಸಂಸ್ಥೆ 10 ಲಕ್ಷ ರೂ ನೆರವು ನೀಡುವುದಾಗಿ ಹೇಳಿದೆ. ಜೊತೆಗೆ ಅಫ್ಘಾನಿಸ್ತಾನದಲ್ಲಿರುವ ಸಿಖ್ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವಂತೆ ಆಫ್ಘನ್ ಸರ್ಕಾರವನ್ನು ಒತ್ತಾಯಿಸಿದೆ. 

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಉಗ್ರರ ದಾಳಿಯಿಂದ ಹಾನಿಗೊಳಗಾದ ಗುರುದ್ವಾರಕ್ಕೆ ಕಾಶ್ಮೀರದ ಸಿಖ್ ಸಂಸ್ಥೆ 10 ಲಕ್ಷ ರೂ ನೆರವು ನೀಡುವುದಾಗಿ ಹೇಳಿದೆ. ಜೊತೆಗೆ ಅಫ್ಘಾನಿಸ್ತಾನದಲ್ಲಿರುವ ಸಿಖ್ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವಂತೆ ಆಫ್ಘನ್ ಸರ್ಕಾರವನ್ನು ಒತ್ತಾಯಿಸಿದೆ. 

ಕಳೆದ ವಾರಾಂತ್ಯದಲ್ಲಿ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾಶ್ಮೀರದ ಸಿಖ್ ಸಂಸ್ಥೆಯೊಂದು ಆ ಗುರುದ್ವಾರದ ದುರಸ್ಥಿಗೆ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದೆ.

ಇಬ್ಬರ ಸಾವಿಗೆ ಕಾರಣವಾದ ದಾಳಿಯನ್ನು ಖಂಡಿಸಿರುವ ಯುನೈಟೆಡ್ ಕಾಶ್ಮೀರಿ ಸಿಖ್ ಪ್ರೋಗ್ರೆಸಿವ್ ಫೋರಂನ ಅಧ್ಯಕ್ಷ ಬಲದೇವ್ ಸಿಂಗ್ ರೈನಾ (Baldev Singh Raina),  ಕಾಬೂಲ್‌ನಲ್ಲಿ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಘಟನೆಯಿಂದ ನಮಗೆ ದುಃಖವಾಗಿದೆ ಎಂದು ಹೇಳಿದರು. ಇದೊಂದು ನೋವಿನ ಘಟನೆ ಮತ್ತು ನಾವು ಈ ದಾಳಿಯನ್ನು ಖಂಡಿಸಿದ್ದೇವೆ. ಮಾನವೀಯತೆಯ ಮೇಲೆ ಈ ದಾಳಿ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿಯುತವಾಗಿ ನೆಲೆಸಿರುವ ಸಿಖ್ ಸಮುದಾಯದ ಮೇಲೆ ಈ ದಾಳಿ ನಡೆದಿದೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಬೀದಿ ಬದಿ ಆಹಾರ ಮಾರುತ್ತಿರುವ ಅಫ್ಘಾನಿಸ್ತಾನದ TV Anchor

ಸಿಖ್ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವನ್ನು (Taliban government) ಒತ್ತಾಯಿಸಿದ ಅವರು, ಸಿಖ್ಖರು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಯಾವಾಗಲೂ ಲಭ್ಯವಿರುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ. ಅಫ್ಘಾನಿಸ್ತಾನ ಮತ್ತು ಭಾರತದ ಸಿಖ್ಖರು ಸಹ ಪ್ರೀತಿ ಮತ್ತು ಸಹೋದರತ್ವದ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ ಎಂದರು. 

ಯುನೈಟೆಡ್ ಕಾಶ್ಮೀರಿ ಸಿಖ್ ಪ್ರೋಗ್ರೆಸ್ಸಿವ್ ಫೋರಂ (United Kashmiri Sikh Progressive Forum) ಕರ್ತೆ ಪರ್ವಾನ್ ಗುರುದ್ವಾರದ (Karte Parwan Gurudwara) ದುರಸ್ತಿ ಮತ್ತು ನವೀಕರಣಕ್ಕಾಗಿ ಹತ್ತು ಲಕ್ಷ ರೂಪಾಯಿಗಳನ್ನು ನೀಡಲಿದೆ. ನಾವು ಇದಕ್ಕಾಗಿ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸ್ಫೋಟ: ಇಬ್ಬರ ಬಲಿ
 

ಈ ಕಷ್ಟದ ಸಮಯದಲ್ಲಿ ಭಾರತದ ಪ್ರತಿಯೊಬ್ಬ ಸಿಖ್ಖರು ಅಫ್ಘಾನ್ ಸಿಖ್ಖರೊಂದಿಗೆ ಇದ್ದಾರೆ ಮತ್ತು ಸಿಖ್ ಸಮುದಾಯವು ಸಂಪೂರ್ಣ ಅಫ್ಘಾನಿಸ್ತಾನವನ್ನು ಪುನರ್ನಿರ್ಮಿಸುತ್ತದೆ ಮತ್ತು ಯಾವಾಗಲೂ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ನಾವು ಭರವಸೆ ನೀಡಲು ಬಯಸುತ್ತೇವೆಎಂದು ಅವರು ಹೇಳಿದರು.

ಈ ದಾಳಿಯ ಹಿಂದೆ ಐಸಿಸ್ ಕೈವಾಡವಿತ್ತು.  ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯವೂ ( Islamic State Khorasan Province) (ISKP)ಈ ದಾಳಿಯ ಹೊಣೆ ಹೊತ್ತಿತ್ತು. ಅಲ್ಲದೇ ದಾಳಿ ವೇಳೆ ಗುರುದ್ವಾರವನ್ನು ರಕ್ಷಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದ ತಾಲಿಬಾನ್ ಹೋರಾಟಗಾರರೊಂದಿಗೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದ್ದೇವೆ ಎಂದು ಅದು ಹೇಳಿತ್ತು. 


ತಾಲಿಬಾನ್ ಉಗ್ರರು ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಈ ಮಧ್ಯೆ ಟಿವಿ ನಿರೂಪಕನಾಗಿ ಕೆಲಸ ಮಾಡಿದ್ದ ಯುವಕ ದೇಶದಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಕೆಲಸ ಕಳೆದಕೊಂಡಿದ್ದಾನೆ. ನಿರೂಪಕನಾಗಿದ್ದ ಈತ ಬೀದಿ ಬದಿ ಆಹಾರ ಮಾರಿ ಹೊಟ್ಟೆ ಹೊರೆಯುವ ಸ್ಥಿತಿ ತಲುಪಿದ್ದಾನೆ ವಿಚಾರ ಕೆಲ ದಿನಗಳ ಹಿಂದೆ ವರದಿಯಾಗಿತ್ತು.

ಇಲ್ಲಿನ ಹೆಣ್ಣು ಮಕ್ಕಳ ಸ್ಥಿತಿಯಂತೂ ತೀವ್ರ ಶೋಚನೀಯವಾಗಿದೆ. ಮಹಿಳಾ ಟಿವಿ ನಿರೂಪಕರಿಗೆ ಮುಖ ಮುಚ್ಚಿಯೇ ನಿರೂಪಣೆ ಮಾಡುವಂತೆ ಈ ಹಿಂದೆ ಖಡಕ್ ಆದೇಶ ಹೊರಡಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದು ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತದ ನಂತರ ನಾಗರಿಕರ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತಿದೆ. 

click me!