ವಂದೇ ಮಾತರಂ, ಜನಗಣಮನ ಗೀತೆಯೊಂದಿಗೆ ಅಮೆರಿಕದಲ್ಲಿ ಕನ್ನಡಿಗರ ಗೃಹಪ್ರವೇಶ

Published : Aug 16, 2026, 02:43 PM IST
Vande Mataram at US  house warming ceremony

ಸಾರಾಂಶ

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಗೃಹಪ್ರವೇಶ ವಂದೇ ಮಾತರಂ, ಜನಗಣಮನ ಗೀತೆಯೊಂದಿಗೆ ನಡೆದಿದೆ. ಭಾರತವನ್ನೇ ಒಗ್ಗೂಡಿಸಿದ ವಂದೇ ಮಾತರಂ ಇದೀಗ ದೂರದ ಅಮೆರಿಕದಲ್ಲೂ ಮೊಳಗಿದೆ. ವಿಶೇಷ ಗೃಹ ಪ್ರವೇಶ ವಿಡಿಯೋ ಇಲ್ಲಿದೆ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

ನ್ಯೂಯಾರ್ಕ್ (ಆ.16) ಭಾರತದಿಂದ ಎಷ್ಟೇ ದೂರವಿದ್ದರೂ ಮನಸ್ಸು ಭಾರತದಲ್ಲೇ ಇರುತ್ತೆ. ಇದೀಗ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150 ವರ್ಷಗಳ ನಂತರ, ಸಾವಿರಾರು ಮೈಲು ದೂರದ ಅಮೆರಿಕದ ಕನ್ನಡಿಗರ ಮನೆಯಲ್ಲೂ ಮೊಳಗಿದೆ. ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡಿಗರಾದ ಸುಚಿತ ಜಾಜು ಮತ್ತು ಅಮೋಲ್ ಜಾಜು ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ನಡೆಯಿತು.

ವಂದೇ ಮಾತರಂ, ಜನಗಣಮನ ಗೀತೆ

ಗೃಹಪ್ರವೇಶದ ಅಂಗವಾಗಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜೆಯ ಕೊನೆಯಲ್ಲಿ ಮಂಗಳಾರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಪುರೋಹಿತರಾದ ಶ್ರೀಧರ ಆಚಾರ್ಯ ಅವರು ಅಂದು ಆಗಸ್ಟ್ 15 ಎಂಬುದನ್ನು ನೆನಪಿಸಿ ಭಾರತದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಿದರು. ಅಲ್ಲಿ ನೆರೆದಿದ್ದ ಎಲ್ಲರೂ ಒಟ್ಟಾಗಿ ‘ವಂದೇ ಮಾತರಂ’ ಮತ್ತು ‘ಜನಗಣಮನ’ ಗೀತೆಗಳನ್ನು ಹಾಡಿದರು. ನಂತರ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು. ಗೃಹಪ್ರವೇಶದ ಸಂಭ್ರಮ ಕ್ಷಣಾರ್ಧದಲ್ಲಿ ದೇಶಭಕ್ತಿಯ ಸಂಭ್ರಮವಾಗಿಯೂ ಮಾರ್ಪಟ್ಟಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದ ‘ವಂದೇ ಮಾತರಂ’ಗೆ ಈಗ 150 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರ ನವೆಂಬರ್‌ನಿಂದ 2026ರ ನವೆಂಬರ್‌ವರೆಗೆ ದೇಶಾದ್ಯಂತ ‘ವಂದೇ ಮಾತರಂ’ 150ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ. ಅದೇ ‘ವಂದೇ ಮಾತರಂ’ ಇಂದು ತಾಯ್ನಾಡಿನಿಂದ ಸಾವಿರಾರು ಮೈಲು ದೂರದ ಅಮೆರಿಕದ ಆಲ್ಬನಿಯ ಮನೆಯೊಂದರ ಗೃಹಪ್ರವೇಶದಲ್ಲೂ ಮೊಳಗಿರುವುದು ವಿಶೇಷ.

ಮನೆ ಅಮೆರಿಕದಲ್ಲಿರಬಹುದು... ಆದರೆ ಮನಸ್ಸಿನಲ್ಲಿ ಭಾರತ!

ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲೆಸಿದ್ದರೂ ತಮ್ಮ ಮನೆಯ ಶುಭ ಸಮಾರಂಭದಲ್ಲಿಯೂ ಸ್ವಾತಂತ್ರ್ಯ ದಿನವನ್ನು ಮರೆಯದೆ ವಂದೇ ಮಾತರಂ ಮತ್ತು ಜನಗಣಮನ ಹಾಡಿ ದೇಶಪ್ರೇಮ ಮೆರೆದ ಈ ಕ್ಷಣ ನಿಜಕ್ಕೂ ಸ್ಫೂರ್ತಿದಾಯಕ. ದೇಶಪ್ರೇಮಕ್ಕೆ ಗಡಿಗಳಿಲ್ಲ, ದೂರವೂ ಅಡ್ಡಿಯಲ್ಲ. ತಾಯ್ನಾಡು ಸಾವಿರಾರು ಮೈಲು ದೂರವಿದ್ದರೂ ಭಾರತವನ್ನು ಹೃದಯದಲ್ಲಿ ಹೊತ್ತು ಬದುಕಬಹುದು ಎಂಬುದಕ್ಕೆ ಈ ಗೃಹಪ್ರವೇಶವೇ ಒಂದು ಸುಂದರ ಉದಾಹರಣೆ.

ಈ ಅಪರೂಪದ ದೇಶಭಕ್ತಿಯ ಕ್ಷಣಗಳ ವಿಡಿಯೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೇಫ್ರಿ ಎಪ್ಸ್ಟೀನ್ ಆಡಂಬರದ Pರ್ನ್‌ನಿಂದ AI ಸಾಮ್ರಾಜ್ಯ, ಆಂಥ್ರೊಪಿಕ್ ಸಿಇಒ ಪತ್ನಿ ಕ್ಯಾಮಿ ಕ್ಲಾರ್ಕ್ ರೋಚಕ ಪಯಣ!
Vande mataram ಅಸಹನೆ ವಿವಾದದ ನಡುವೆ ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ! ಮಿತ್ರ ಭಾರತಕ್ಕೆ UAE ವಿಶೇಷ ಶುಭಾಶಯ | ವಿಡಿಯೋ