ದು​ಬೈ​ನಲ್ಲಿ ಉ​ಚಿತ ಕ​ನ್ನಡ ಕ​ಲಿಕಾ ಕೇಂದ್ರ ಆ​ರಂಭ

By Kannadaprabha NewsFirst Published Oct 9, 2021, 11:12 AM IST
Highlights
  •  ದು​ಬೈ​ನಲ್ಲಿ ಕ​ನ್ನಡ ಸಂಘದ ವ​ತಿ​ಯಿಂದ ನ​ಡೆ​ಯು​ತ್ತಿ​ರುವ ಉ​ಚಿತ ಕ​ನ್ನಡ ಕ​ಲಿಕಾ ಶಾ​ಲೆಗಳಿಗೆ ದಾಖಲಾತಿ ಆರಂಭ
  • ಪ್ರ​ಸಕ್ತ ಶೈ​ಕ್ಷ​ಣಿಕ ಸಾ​ಲಿನ ಆನ್‌ಲೈನ್‌ ದಾ​ಖ​ಲಾತಿ ಪ್ರ​ಕ್ರಿ​ಯೆಗೆ ಚಾ​ಲನೆ

ದುಬೈ (ಅ.09):  ದು​ಬೈ​ನಲ್ಲಿ (Dubai) ಕ​ನ್ನಡ ಸಂಘದ (Kannada Sangha) ವ​ತಿ​ಯಿಂದ ನ​ಡೆ​ಯು​ತ್ತಿ​ರುವ ಉ​ಚಿತ ಕ​ನ್ನಡ ಕ​ಲಿಕಾ ಶಾ​ಲೆಗಳಿಗೆ (Kannada Lerning School) ದಾಖಲಾತಿ ಆರಂಭವಾಗಿದೆ.

ದು​ಬೈನ ಖಾ​ಸಗಿ ಹೊ​ಟೇಲ್‌​ನ​ಲ್ಲಿ (Private Hotel) ನ​ಡೆದ ಸ​ರಳ ಸ​ಮಾ​ರಂಭ​ದಲ್ಲಿ ಶಾ​ಲೆಯ ಮ​ಹಾ​ಪೋ​ಷಕ ಪ್ರ​ವೀಣ್‌​ಕು​ಮಾರ್‌ಶೆಟ್ಟಿ (Praveen Kumar shetty), ಉ​ಪಾ​ಧ್ಯಕ್ಷ ಮೋ​ಹನ್‌ ಅ​ವರು ಪ್ರ​ಸಕ್ತ ಶೈ​ಕ್ಷ​ಣಿಕ ಸಾ​ಲಿನ ಆನ್‌ಲೈನ್‌ ದಾ​ಖ​ಲಾತಿ (Online Admission) ಪ್ರ​ಕ್ರಿ​ಯೆಗೆ ಚಾ​ಲನೆ ನೀ​ಡಿ​ದರು.

ದುಬೈ ಕನ್ನಡಿಗರ ಮಕ್ಕಳಿಗೆ ‘ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದಮ್ಮನ ಹಕ್ಕು’ ಘೋಷಣೆಯೊಂದಿಗೆ ಕನ್ನಡ ಮಿತ್ರರು ಸಂಘಟನೆ 2014ರಲ್ಲಿ 40 ಮಕ್ಕಳೊಂದಿಗೆ ಶಾಲೆ ಆರಂಭಿಸಿತು. ಶಾಲೆಯಲ್ಲಿ (School) ವಾರಂತ್ಯದಲ್ಲಿ ಮಾತ್ರ ಕನ್ನಡ ಕಲಿಸಲಾಗುತ್ತದೆ.

ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ

ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನೆವರೆಗೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡ ಕಲಿಸಲಾಗುತ್ತಿದೆ. ವಾರದ ಒಂದು ರಜಾ ದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡಿಪಿಟ್ಟಿರುವ ನಮ್ಮ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎಂಬುದು ಹೆಮ್ಮೆಯ ವಿಷಯ ಎಂದು ಮ​ಹಾ​ಪೋ​ಷಕ ಪ್ರ​ವೀಣ್‌ ಶೆಟ್ಟಿತಿ​ಳಿಸಿದ್ದಾರೆ.

ಶೈ​ಕ್ಷ​ಣಿಕ ಚ​ಟು​ವ​ಟಿ​ಕೆಯ ನೇ​ತೃತ್ವ ವ​ಹಿ​ಸಿ​ರುವ ರೂಪ ಶ​ಶಿ​ಧರ್‌ ಮಾ​ತ​ನಾಡಿ, ಈ ಬಾರಿಯ ಆನ್‌ ಲೈನ್‌ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದ ಬಗ್ಗೆ ತಿ​ಳಿ​ಸಿ​ಕೊ​ಟ್ಟರು.

ಕನ್ನಡ ಪರೀಕ್ಷೆಗಾಗಿ ಟ್ವಿಟರ್ ಅಭಿಯಾನ 

 ಯುಪಿಎಸ್‌ಸಿ(UPSC) ಸೇರಿದಂತೆ ಭಾರತ ಸರ್ಕಾರದ ಎಲ್ಲ ಹಂತದ ಉದ್ಯೋಗ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಆ.10 ರಂದು ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್‌ ಅಭಿಯಾನ ಹಮ್ಮಿಕೊಂಡಿದೆ.

ಅ.10 ರಂದು ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿದ್ದು ಈ ಬಾರಿಯೂ ಕನ್ನಡಿಗರಿಗೆ ಕನ್ನಡದಲ್ಲಿ(Kannada) ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡದೆ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ಇದನ್ನು ಖಂಡಿಸಿ ಕನ್ನಡದಲ್ಲಿ UPSC ಮತ್ತು #UPSCInKannada ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಬೆಳಗ್ಗೆ 10.10ರಿಂದ ಅಭಿಯಾನ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ(Narayana Gowda) ಹೇಳಿದ್ದಾರೆ.

UPSC ಟಾಪರ್‌ ಆಗಿ 'ನಿನ್ನಿಂದಾಗಲ್ಲ' ಎಂದವರ ಬಾಯಿ ಮುಚ್ಚಿಸಿದ ಭಾನು ಪ್ರತಾಪ್!

ಕರ್ನಾಟಕದ(Karnataka) ಉದ್ಯೋಗಗಳು(Jobs) ಕನ್ನಡಿಗರಿಗೇ ಸಿಗಬೇಕು. ಇದು ಸಾಧ್ಯವಾಗಲು ಐಎಎಸ್‌, ಐಪಿಎಸ್‌ ಸೇರಿದಂತೆ ಎಲ್ಲ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಆದರೆ ಎಲ್ಲ ಹಂತಗಳಲ್ಲೂ ಕನ್ನಡದಲ್ಲಿ ಪರೀಕ್ಷೆಗಳು ಸಿಗುತ್ತಿಲ್ಲ. ಆಯಾ ರಾಜ್ಯದ ಹುದ್ದೆಗಳು ಆಯಾ ರಾಜ್ಯದ ಜನರಿಗೆ ಸಿಗಲು ಬೇಕಾದ ನಿಯಮಗಳೂ ಇಲ್ಲವಾಗುತ್ತಿವೆ. ಇದು ನೇರವಾಗಿ ಕನ್ನಡಿಗರ ಬದುಕುವ ಹಕ್ಕಿನ ದಮನವಾಗಿರುತ್ತದೆ. ಭಾರತ ಸಂವಿಧಾನದ ಸಮಾನತೆಯ ಆಶಯಗಳಿಗೆ ಧಕ್ಕೆ ಬಂದಂತಾಗಿದೆ ಎಂದು ನಾರಾಯಣಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌(Twitter) ಅಭಿಯಾನದ ಜೊತೆಗೆ ವಿಚಾರಸಂಕಿರಣ, ಚಿತ್ರಚಳುವಳಿ, ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ. ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ(Kannadigas) ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳುವುದು ಅನೈತಿಕ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸುವವರು ಈ ಚಳವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಾರಾಯಣ ಗೌಡ ಮನವಿ ಮಾಡಿದ್ದಾರೆ.

click me!