Breaking: ಕೆನಡಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಖಲಿಸ್ತಾನಿ ಪೋಷಕ ಜಸ್ಟೀನ್‌ ಟ್ರುಡೋ!

Published : Jan 06, 2025, 10:20 PM ISTUpdated : Jan 06, 2025, 10:28 PM IST
Breaking: ಕೆನಡಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಖಲಿಸ್ತಾನಿ ಪೋಷಕ ಜಸ್ಟೀನ್‌ ಟ್ರುಡೋ!

ಸಾರಾಂಶ

ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೇಬರ್ ಪಾರ್ಟಿ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಒತ್ತಡ ಮತ್ತು ಮತದಾರರ ಬೇಸರದಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ನವದೆಹಲಿ (ಜ.6): ಖಲಿಸ್ತಾನಿ ಉಗ್ರ ಸಂಘಟನೆಯನ್ನು ಪೋಷಣೆ ಮಾಡುತ್ತಲೇ ಇಲ್ಲಿಯವರೆಗೂ ಅಧಿಕಾರ ಉಳಿಸಿಕೊಂಡಿದ್ದ ಕೆನಡಾದ ಜಸ್ಟೀನ್‌ ಟ್ರುಡೋ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಲೇಬರ್‌ ಪಾರ್ಟಿ ಪಕ್ಷ ಪ್ರಧಾನಿ ಸ್ಥಾನಕ್ಕೆ ಹೊಸ ವ್ಯಕ್ತಿಯನ್ನು ಘೋಷಣೆ ಮಾಡುವವರೆಗೂ ಈ ಸ್ಥಾನದಲ್ಲಿ ಇರಲಿದ್ದೇನೆ ಎಂದು ಸೋಮವಾರ ತಿಳಿಸಿದ್ದಾರೆ. ದೇಶದ ಬಗ್ಗೆ ಪ್ರೀತಿ ಇರುವ ಒಬ್ಬ ಫೈಟರ್‌ ಎಂದು ತಮ್ಮನ್ನು ತಾವು ಹೇಳಿಕೊಂಡ ಜಸ್ಟೀನ್‌ ಟ್ರುಡೋ, ಪ್ರಧಾನಿ ಹುದ್ದೆಯನ್ನು 9 ವರ್ಷಗಳ ಕಾಲ ಅನುಭವಿಸಿದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಒಳಗಿನ ಆಂತರಿಕ ಒತ್ತಡ ಹಾಗೂ ನಮಗೆ ಮತ ಹಾಕಿದ ಮತದಾರರ ಬೇಸರ ಈ ಎಲ್ಲಾ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸರ್ಕಾರದ ಮುಖ್ಯಸ್ಥ ಹಾಗೂ ಆಡಳುತಾರೂಢ ಲಿಬರಲ್‌ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

"ಪಕ್ಷವು ತನ್ನ ಮುಂದಿನ ನಾಯಕನನ್ನು ದೃಢವಾದ, ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ನಂತರ ನಾನು ಪ್ರಧಾನ ಮಂತ್ರಿಯಾಗಿ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ" ಎಂದು 53 ವರ್ಷದ ರಾಜಕಾರಣಿ ಬಹು ನಿರೀಕ್ಷಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸುದ್ದಿಗಾರರಿಗೆ ತಿಳಿಸಿದರು. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಮುಂಬರುವ ಚುನಾವಣೆಯಲ್ಲಿ ಅಧಿಕೃತ ವಿರೋಧ ಪಕ್ಷವಾದ ಕನ್ಸರ್ವೇಟಿವ್‌ಗಳಿಂದ ಸೋಲು ಎದುರಿಸಬಹುದು ಎಂದು ಸಮೀಕ್ಷೆಗಳು ಸೂಚನೆ ನೀಡುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ. ಇದರೊಂದಿಗೆ ಪಕ್ಷ ಶಾಶ್ವತವಾದ ನಾಯಕನಿಲ್ಲದೆ ಚುನಾವಣೆಗೆ ತೆರಳುವ ಸಾಧ್ಯತೆ ಇದೆ.

ತಮ್ಮ ಪಕ್ಷದೊಳಗಿನ ಆಂತರಿಕ ಘರ್ಷಣೆಯನ್ನು ಬಹಿರಂಗವಾಗಿ ಒಪ್ಪಿಕೊಂಡ ಟ್ರೂಡೊ, "ಈ ದೇಶವು ಮುಂದಿನ ಚುನಾವಣೆಯಲ್ಲಿ ನಿಜವಾದ ಆಯ್ಕೆಗೆ ಅರ್ಹವಾಗಿದೆ ಮತ್ತು ನಾನು ಆಂತರಿಕ ಕದನಗಳನ್ನು ಎದುರಿಸಬೇಕಾದರೆ, ಆ ಚುನಾವಣೆಯಲ್ಲಿ ನಾನು ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ನನಗೆ ಸ್ಪಷ್ಟವಾಗಿದೆ" ಎಂದು ತಿಳಿಸಿದ್ದಾರೆ.

ನಾನೊಬ್ಬ ಫೈಟರ್‌. ನನ್ನ ದೇಹದಲ್ಲಿನ ಪ್ರತಿಯೊಂದು ಮೂಳೆಯು ಯಾವಾಗಲೂ ನನಗೆ ಹೋರಾಡಲು ಹೇಳುತ್ತದೆ ಏಕೆಂದರೆ ನಾನು ಕೆನಡಿಯನ್ನರ ಬಗ್ಗೆ  ಕಾಳಜಿ ವಹಿಸುತ್ತೇನೆ. ಮತ್ತು ವಾಸ್ತವವೆಂದರೆ, ಅದರ ಮೂಲಕ ಕೆಲಸ ಮಾಡಲು ಉತ್ತಮ ಪ್ರಯತ್ನಗಳ ಹೊರತಾಗಿಯೂ, ನಮ್ಮ ಸಂಸತ್ತು ತಿಂಗಳುಗಟ್ಟಲೆ ಪಾರ್ಶ್ವವಾಯುವಿಗೆ ಒಳಗಾಗಿದೆ. ಅದಕ್ಕಾಗಿಯೇ ಇಂದು ಬೆಳಿಗ್ಗೆ ನಾನು ಗವರ್ನರ್ ಜನರಲ್ ಅವರಿಗೆ ಸಂಸತ್ತಿನ ಹೊಸ ಅಧಿವೇಶನ ಬೇಕು ಎಂದು ಸಲಹೆ ನೀಡಿದ್ದೆ. ಅವರು ಈ ಮನವಿಯನ್ನು ಪುರಸ್ಕರಿಸಿದ್ದಾರೆ ಮತ್ತು ಸದನವನ್ನು ಈಗ ಮಾರ್ಚ್ 24 ರವರೆಗೆ ಮುಂದೂಡಲಾಗುವುದು' ಎಂದು ತಿಳಿಸಿದ್ದಾರೆ.

ಇಕ್ಕಟ್ಟಿಗೆ ಸಿಲುಕಿರುವ ಪ್ರಧಾನಿ ಭವಿಷ್ಯದ ಬಗ್ಗೆ ತಮ್ಮ ಕುಟುಂಬದೊಂದಿಗೆ ಸುದೀರ್ಘ ಚರ್ಚೆ ನಡೆಸಿರುವುದಾಗಿಯೂ ಹೇಳಿದ್ದಾರೆ. "ರಜಾ ದಿನಗಳಲ್ಲಿ, ನಮ್ಮ ಭವಿಷ್ಯದ ಬಗ್ಗೆ ನನ್ನ ಕುಟುಂಬದೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ" ಎಂದು ಅವರು ಹೇಳಿದರು. 

ಕೆನಡಾದಲ್ಲಿ ಮತ್ತೆ ಮತ್ತೆ ಖಲೀಸ್ತಾನಿ ಉಗ್ರರ ಪುಂಡಾಟ; ಹಿಂದೂಗಳು, ದೇಗುಲಗಳೇ ಟಾರ್ಗೆಟ್!

2015ರಲ್ಲಿ ಕನ್ಸರ್ವೇಟಿವ್‌ ಪಕ್ಷದ ದಶಕದ ಆಡಳಿತವನ್ನು ಕೊನೆ ಮಾಡುವ ಮೂಲಕ ಜಸ್ಟೀನ್‌ ಟ್ರುಡೋ ಅಧಿಕಾರಕ್ಕೆ ಏರಿದ್ದರು. ಕೆನಡಾದ ಉದಾರವಾದಿ ಬೇರುಗಳ ಕಡೆಗೆ ಕೊಂಡೊಯ್ಯುವ ನಾಯಕ ಎನ್ನುವ ಕಾರಣಕ್ಕಾಗಿ ಇವರನ್ನು ಅತಿಯಾಗಿ ಸಂಭ್ರಮಿಸಲಾಗಿತ್ತು. ಆದರೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರ ಪುತ್ರನಾಗಿರುವ 53 ಜಸ್ಟೀನ್‌, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಎದುರಿಸುತ್ತಿದ್ದಾರೆ, ಆಹಾರ ಮತ್ತು ವಸತಿ ವೆಚ್ಚಗಳು ಗಗನಕ್ಕೇರುತ್ತಿರುವ ಮತ್ತು ವಲಸೆಯ ತೀವ್ರ ಏರಿಕೆಯಂತಹ ವಿಷಯಗಳ ಬಗ್ಗೆ ವ್ಯಾಪಕವಾದ ಮತದಾರರ ಅಸಮಾಧಾನ ಕಾರಣವಾಗಿದೆ.

ರಾಜತಾಂತ್ರಿಕ ಬಿಕ್ಕಟ್ಟು: ಕೆನಡಾದಲ್ಲಿ ಭಾರತೀಯರ ದೀಪಾವಳಿ ಆಚರಣೆ ರದ್ದು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?