
ಜೆಪಿ ಮೋರ್ಗನ್ ಚೇಸ್ (JPMorgan Chase) ಸಂಸ್ಥೆಯ ಎಕ್ಸಿಕ್ಯೂಟಿವ್ ಒಬ್ಬರು ತನ್ನ ಕೆಳಗಡೆ ಕೆಲಸ ಮಾಡುವ ಮ್ಯಾರೀಡ್ ಇಂಡಿಯನ್ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಮೊಕದ್ದಮೆ ಹೂಡಲಾಗಿದೆ.
ಜೆಪಿ ಮೋರ್ಗನ್ ಸಂಸ್ಥೆಯ ಸೀನಿಯರ್ ಮ್ಯಾನೇಜಿಂಗ್ ಡೈರೆಕ್ಟರ್ ಲೋರ್ನಾ ಹಜ್ದಿನಿ (Lorna Hajdini) ಮೇಲೆ ಆರೋಪ ಮಾಡಲಾಗಿದೆ. ಈ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ. ಲೋರ್ನಾ ಹಜ್ದಿನಿ ಅವರು ತನಗೆ ಮಾದಕ ದ್ರವ್ಯ ನೀಡಿ ಲೈಂ*ಗಿಕವಾಗಿ ಕಿರುಕುಳ ನೀಡಿದ್ದಾರೆ, ಜನಾಂಗೀಯವಾಗಿ ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಸಂತ್ರಸ್ತ ಉದ್ಯೋಗಿ ಅವರು, ಲೋರ್ನಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡ್ಕೊಂಡು ನನಗೆ ಕಿರುಕುಳ ಕೊಡುತ್ತಿದ್ದರು. ಕೆಲಸದ ನೆಪ ಹೇಳಿಕೊಂಡು, ನನಗೆ ಖಾಸಗಿಯಾಗಿ ಭೇಟಿಯಾಗಿ ಎಂದು ಒತ್ತಾಯ ಮಾಡುತ್ತಿದ್ದರು, ಹಲವಾರು ಬಾರಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾರೆ. ಮಾನಸಿಕವಾಗಿ ಕೂಡ ನನಗೆ ಕಿರುಕುಳ ಕೊಟ್ಟಿದ್ದಾರೆ” ಹೇಳಿದ್ದಾರೆ.
ಈ ಆರೋಪಕ್ಕೆ ಸಂಸ್ಥೆಯು ಪ್ರತಿಕ್ರಿಯೆ ನೀಡಿದ್ದು, "ದೂರಿನ ಬಗ್ಗೆ ಆಂತರಿಕ ತನಿಖೆ ಮಾಡಿದ್ದೇವೆ, ದೂರಿನಲ್ಲಿರುವ ವಿಷಯದ ಬಗ್ಗೆ ಯಾವುದೇ ಆಧಾರವಿಲ್ಲ. ನಮ್ಮ ಸಂಸ್ಥೆಯು ಕೆಲಸಕ್ಕೆ ಬದ್ಧವಾಗಿದೆ" ಎಂದು ಹೇಳಿದೆ.
ಕಾರ್ಪೋರೇಟ್ ಕಂಪೆನಿಯಲ್ಲಿ ಪುರುಷ ಉದ್ಯೋಗಿ ಮೇಲೆ ಮಹಿಳಾ ಉದ್ಯೋಗಿಯೇ ಲೈಂ*ಗಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಇನ್ನೊಂದು ಕಡೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಈ ವಿವಾದದ ಬೆನ್ನಲೇ 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ಲೋರ್ನಾಗೆ ಲಿಂಕ್ಡ್‌ಇನ್‌ನಲ್ಲಿ ಅನೇಕ ವರ್ಷಗಳಿಂದ ಕಾಂಟ್ಯಾಕ್ಟ್ ಅಲ್ಲಿದ್ದೇನೆ, ಕೆಲಸ ಬೇಕು ಎಂದು ಮೆಸೇಜ್ ಮಾಡಿದಾಗ ಅವರು ರೆಸ್ಯೂಮ್ ಕಳಿಸಿ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ, 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ತಾನು ಹಲವು ವರ್ಷಗಳಿಂದ ಲೋರ್ನಾ ಅವರೊಂದಿಗೆ ಲಿಂಕ್ಡ್‌ಇನ್‌ನಲ್ಲಿ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಕುತೂಹಲಕ್ಕಾಗಿ ಅವರು ಲೋರ್ನಾ ಅವರಿಗೆ ಒಂದು ಸಂದೇಶ ಕಳುಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ