ಅಧಿಕಾರ ಸ್ವೀಕರಿಸಿದ ಮೊದಲನೇ ದಿನವೇ ಜೋ ಬೈಡೆನ್ ಐತಿಹಾಸಿಕ ಕ್ರಮ!

By Suvarna NewsFirst Published Jan 18, 2021, 4:41 PM IST
Highlights

ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್| ಮೊದಲನೇ ದಿನವೇ, ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಮಸೂದೆ ಮಂಡನೆ| ಅಮೆರಿಕಾದಲ್ಲಿ ಸುಮಾರು 11 ಮಿಲಿಯನ್ ಅಕ್ರಮ ವಲಸಿಗರು
 

ವಾಷಿಂಗ್ಟನ್(ಜ.18): ಅಧಿಕಾರ ಸ್ವೀಕರಿಸಿದ ಮೊದಲನೇ ದಿನವೇ ಜೋ ಬೈಡೆನ್ ಐತಿಹಾಸಿಕ ಕ್ರಮಕ್ಕೆ ಮುಂದಾಗಿದ್ದಾರೆ. ಮೊದಲನೇ ದಿನವೇ, ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಬೈಡೆನ್ ಮುಂದಾಗಿದ್ದಾರೆ.

ಅಮೆರಿಕಾದಲ್ಲಿ ಸುಮಾರು 11 ಮಿಲಿಯನ್ ಅಕ್ರಮ ವಲಸಿಗರಿದ್ದಾರೆಂದು ಅಂದಾಜಿಸಲಾಗಿದೆ. ಅವರಿಗೆ ಪೌರತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಡೆಯುತ್ತಲೇ ಬಂದಿದ್ದು, ಕಗ್ಗಂಟಾಗಿ ಪರಿಣಮಿಸಿದೆ.

ಈ ಹಿಂದೆ ಬರಾಕ್ ಒಬಾಮಾ ಕೂಡಾ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಭರವಸೆ ನೀಡಿದ್ದರು, ಆದರೆ ತಮ್ಮ ಆಡಳಿತಾವಧಿಯಲ್ಲಿ ಅದನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ವಲಸಿಗ-ವಿರೋಧಿ ನೀತಿಯನ್ನೇ ಮುಂದುವರೆಸಿದ್ದರು. ಕಳೆದ ಚುನಾವಣೆಯಲ್ಲಿ ಜೋ ಬೈಡೆನ್‌ ವಲಸಿಗರಿಗೆ ಪೌರತ್ವ ಕೊಡುವ ಬಗ್ಗೆ ಭರವಸೆ ನೀಡಿದ್ರು.

ಜೋ ಬೈಡೆನ್‌ರ ಈ ಯೋಜನೆಗೆ ಅಮೆರಿಕಾ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿದ್ರೆ, ಅಮೆರಿಕಾದ ಪಾಲಿಗೆ ಇದು ಐತಿಹಾಸಿಕ ದಿನವಾಗಲಿದೆ ಎಂಬ ಅಭಿಪ್ರಾಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

click me!