ಸುರಂಗ ಕೊರೆತ, ನೀರಲ್ಲಿ ಗಡಿ ದಾಟುವ ಕುರಿತು ಉಗ್ರರಿಗೆ ಪಾಕ್‌ ತರಬೇತಿ!

By Suvarna NewsFirst Published Mar 9, 2021, 8:53 AM IST
Highlights

ಸುರಂಗ ಕೊರೆತ, ನೀರಲ್ಲಿ ಗಡಿ ದಾಟುವ ಕುರಿತು ಉಗ್ರರಿಗೆ ಪಾಕ್‌ ತರಬೇತಿ| ಕದನ ವಿರಾಮ ಜಾರಿ ಘೋಷಣೆ ಹೊರತಾಗಿಯೂ ನಿಂತಿಲ್ಲ ದುಷ್ಕೃತ್ಯ

ನವದೆಹಲಿ(ಮಾ.09): ಗಡಿಯಲ್ಲಿ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕುರಿತು ಪಾಕಿಸ್ತಾನ ಘೋಷಣೆ ಮಾಡಿದ್ದರೂ, ಮತ್ತೊಂದೆಡೆ ಗಡಿಯಲ್ಲಿ ವಿವಿಧ ಉಗ್ರ ಸಂಘಟನೆಗಳಿಗೆ ನಾನಾ ರೀತಿಯ ತರಬೇತಿ ನೀಡುವ ಕ್ಯಾಂಪ್‌ಗಳನ್ನು ಮುಂದುವರೆಸಿರುವ ವಿಷಯ ಬೆಳಕಿಗೆ ಬಂದಿದೆ. ಭಾರತದ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲೇ ಕನಿಷ್ಠ ಇಂಥ 6 ತರಬೇತಿ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ವಿವಿಧ ಉಗ್ರರಿಗೆ ಸಾಂಪ್ರದಾಯಿಕ ತರಬೇತಿಗಳ ಜೊತೆಜೊತೆಗೇ, ಮರಾಲಾದಲ್ಲಿರುವ ಶಿಬಿರದಲ್ಲಿ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರರಿಗೆ ಗಡಿಯಲ್ಲಿ ಸುರಂಗ ಕೊರೆದು ಭಾರತದ ಕಡೆ ದಾಟುವುದು ಹೇಗೆ? ನದಿಯನ್ನು ದಾಟಿ ಹೋಗುವುದು ಹೇಗೆ ಎಂಬ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.

ಇನ್ನು ಸಮನಿ ಶಿಬಿರದಲ್ಲಿ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಅಲ್‌ ಬದ್‌್ರ ಸಂಘಟನೆ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಗುಲ್ಪುರ್‌ನಲ್ಲಿ ಜೈಷ್‌ ಉಗ್ರರಿಗೆ, ಕಥುವಾ ಬಳಿ ಲಷ್ಕರ್‌ ಎ ತೊಯ್ಬಾ, ಕೋಟ್ಲಿ ಬಳಿ ಹಲವು ಉಗ್ರ ಸಂಘಟನೆಯ ಕಾರ್ಯಕರ್ತರಿಗೆ ನಾನಾ ರೀತಿಯ ತರಬೇತಿ ನೀಡಲಾಗುತ್ತಿ ಎಂಬುದು ಬೆಳಕಿಗೆ ಬಂದಿದೆ.

click me!