ಭಾರತದ ಗಡಿ ಟಿಬೆಟ್‌ಗೆ ಶೀಘ್ರ ಚೀನಾ ಬುಲೆಟ್ ರೈಲು ಶೀಘ್ರ ಆರಂಭ!

By Kannadaprabha NewsFirst Published Mar 8, 2021, 8:56 AM IST
Highlights

 ಭಾರತ-ಚೀನಾ ನಡುವೆ ಲಡಾಖ್‌ ಗಡಿ ವಿಷಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ| ಭಾರತದ ಗಡಿ ಟಿಬೆಟ್‌ಗೆ ಶೀಘ್ರ ಚೀನಾ ಬುಲೆಟ್ ರೈಲು ಶೀಘ್ರ ಆರಂಭ!

ಬೀಜಿಂಗ್‌(ಮಾ.08): ಭಾರತ-ಚೀನಾ ನಡುವೆ ಲಡಾಖ್‌ ಗಡಿ ವಿಷಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ, ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಟಿಬೆಟ್‌ನಲ್ಲಿ ಶೀಘ್ರವೇ ಹೈಸ್ಪೀಡ್‌ ಬುಲೆಟ್‌ ರೈಲು ಸೇವೆ ಆರಂಭಿಸಲು ಚೀನಾ ನಿರ್ಧರಿಸಿದೆ. ಜುಲೈಗಿಂತ ಮೊದಲೇ ಈ ಸೇವೆ ಆರಂಭವಾಗುವ ನಿರೀಕ್ಷೆ ಇದ್ದು, ಈ ಹೈಸ್ಪೀಡ್‌ ಟ್ರೈನ್‌ ಚೀನಾದ ಪ್ರಮುಖ ಪ್ರಾಂತ್ಯಗಳನ್ನು ಸಂಪರ್ಕಿಸಲಿದೆ ಎಂದು ಇಲ್ಲಿನ ಹಿರಿಯ ಅಧಿಕಾರಿ ಶನಿವಾರ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ 435 ಕಿ.ಮೀ ಉದ್ದದ ಈ ರೈಲ್ವೆ ಮಾರ್ಗವು ಟಿಬೆಟ್‌ ರಾಜಧಾನಿ ಲಾಸ್ಹಾವನ್ನೂ ಸಂಪರ್ಕಿಸಲಿದೆ. ಇದು ಟಿಬೆಟ್‌ನ ಮೊಟ್ಟಮೊದಲ ವಿದ್ಯುತ್‌ ಚಾಲಿತ ರೈಲ್ವೆ ಹಳಿಯಾಗಿದೆ. ಯೋಜನೆಯ ಕಾಮಗಾರಿ 2014ರಲ್ಲಿಯೇ ಆರಂಭವಾಗಿದ್ದು, ಇದೇ ವರ್ಷ ಜೂನ್‌ನಲ್ಲಿ ಬುಲೆಟ್‌ ಟ್ರೈನ್‌ ಸೇವೆ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಚೀನಾ ರಾಜ್ಯ ರೈಲ್ವೆ ಗ್ರೂಪ್‌ ಕಂಪನಿ ಲಿಮಿಟೆಡ್‌ ತಿಳಿಸಿದೆ.

ಚೀನಾ ನಿರ್ಮಿತ ಬುಲೆಟ್‌ ರೈಲು ಸದ್ಯ ಗಂಟೆಗೆ 160- 350 ಕಿ.ಮೀ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. 2025ರ ಒಳಗಾಗಿ ತನ್ನ ಹೈಸ್ಪೀಡ್‌ ಬುಲೆಟ್‌ ರೈಲ್ವೆ ಮಾರ್ಗವನ್ನು 39,900 ಕಿ.ಮೀ ನಿಂದ 50,000 ಕಿ.ಮೀಗೆ ಹೆಚ್ಚಿಸಿ, ಶೇ.98ರಷ್ಟುನಗರಗಳನ್ನು ಸಂಪರ್ಕಿಸಲು ಚೀನಾ ನಿರ್ಧರಿಸಿದೆ.

click me!