
ಇಸ್ಲಾಮಾಬಾದ್ (ಅ.22) ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ತಿರುಗೇಟು ನೀಡಿತ್ತು. ಉಗ್ರರ 9 ನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು. ಈ ಪೈಕಿ ಉಗ್ರ ಮಸೂದ್ ಅಜರ್ ಅವರ ಜೈಶ್ ಇ ಮೊಹಮ್ಮದ್ ನೆಲೆ ಕೂಡ ಧ್ವಂಸಗೊಂಡಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್ ಅವರ ಕುಟುಂಬದ ಹಲವರು ಹತ್ಯೆಯಾಗಿದ್ದರು. ಬಳಿಕ ಜೈಶ್ ಇ ಮೊಹಮ್ಮದ್ ಮಹತ್ವದ ಸಂದೇಶ ಸಾರಲು, ಮಹಿಳಾ ಘಟಕ ಘೋಷಿಸಿತ್ತು. ಮಸೂದ್ ಅಜರ್ ಸಹೋದರಿ ನೇತೃತ್ವದ ಜಮಾತ್ ಉಲ್ ಮುಮಿನಾತ್ ಈ ಘಟಕ ಮುನ್ನಡೆಸುತ್ತಿದ್ದಾರೆ. ಇದೀಗ ಈ ಮಹಿಳಾ ಉಗ್ರ ಘಟಕ ಮಹಿಳೆಯರಿಗೆ ಆನ್‌ಲೈನ್ ಜಿಹಾದಿ ಕೋರ್ಸ್ ಆರಂಭಿಸಿದೆ. ಪಾಕಿಸ್ತಾನದ 500 ರೂಪಾಯಿ ಶುಲ್ಕ ಇಡಲಾಗಿದ್ದು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹಲವು ಮಹಿಳೆಯರು ಈ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.
ಮಹಿಳಾ ಉಗ್ರ ಘಟಕ ಆರಂಭಿಸಿರುವ ಆನ್‌ಲೈನ್ ಜಿಹಾದಿ ಕೋರ್ಸ್‌ಗೆ ತುಫತ್ ಅಲ್ ಮೊಮಿನತ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನ ರೂಪಾಯಿ 500 ರೂಪಾಯಿ ನೀಡಿ ಹಲವರು ಸೇರಿಕೊಂಡಿದ್ದಾರೆ. ಇದೀಗ ಮಹಿಳಾ ಘಟಕ ಈ ಕೋರ್ಸ್ ಮೂಲಕ ಹಣದ ಜೊತೆ ಕಾರ್ಯಾವ್ಯಾಪ್ತಿ ಹೆಚ್ಚಿಸಿಕೊಳ್ಳಲ ಮುಂದಾಗಿದೆ. ಉಗ್ರ ವಲಯದಲ್ಲಿ ಈ ಆನ್‌ಲೈನ್ ಕೋರ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳಾ ಉಗ್ರ ಘಟಕ ಆರಂಭಿಸಿರುವ ಜಿಹಾದಿ ಆನ್‌ಲೈನ್ ಕೋರ್ಸ್ ನವೆಂಬರ್ 8 ರಿಂದ ಆರಂಭಗೊಳ್ಳುತ್ತಿದೆ. ಪ್ರತಿ ದಿನ 40 ನಿಮಿಷ ಕೋರ್ಸ್ ಇರಲಿದೆ. ಮಸೂದ್ ಅಜರ್ ಸಹೋದರಿಯಾರದ ಸದಿಯಾ ಅಜರ್ ಹಾಗೂ ಸಮೈರಾ ಅಜರ್ ತರಬೇತಿ ನೀಡಲಿದ್ದಾರೆ. ಸದಿಯ ಅಜರ್ ಪತಿ ಯೂಸುಫ್ ಅಜರ್, ಭಾರತದ ಆಪರೇಶನ್ ಸಿಂದೂರ್ ಏರ್‌ಸ್ಟ್ರೈಕ್ ವೇಳೆ ಹತನಾಗಿದ್ದ.
ಜೈಶ್ ಇ ಮೊಹಮ್ಮದ್ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವ ಹಿನ್ನಲೆಯಲ್ಲಿ ಇದೀಗ ಜೈಶ್ ಇ ಮೊಹಮ್ಮದ್ ಭಾರಿ ಆರ್ಥಿಕ ಸಂಕಷ್ಟ ಅನುಭವಿಸಿದೆ. ಉಗ್ರರ ನೆಲೆ ಧ್ವಂಸದಲ್ಲಿ ಜೈಶ್ ಇ ಮೊಹಮ್ಮದ್ ಕುಟುಂಬಸ್ಥರು ಹತ್ಯಯಾಗಿದ್ದರು. ಈ ಎಲ್ಲಾ ಸದಸ್ಯರು ಜೈಶ್ ಇ ಮೊಹಮ್ಮದ್ ಸದಸ್ಯರಾಗಿದ್ದರು. ಇವರಿಗೆ ಪಾಕಿಸ್ತಾನ ಸರ್ಕಾರ ಘೋಷಿಸಿದ ಪರಿಹಾರ ಮೊತ್ತ ಕೂಡ ತಲುಪಿಲ್ಲ ಎಂದು ವರದಿಯಾಗಿದೆ. ಇತ್ತ ಉಗ್ರ ಸಂಘಟನೆಗಳ ಕಟ್ಟಿ ಬೆಳೆಸಲು ಜೈಶ್ ಇ ಮೊಹಮ್ಮದ್ ಪರದಾಡುತ್ತಿದೆ. ಹೀಗಾಗಿ ಹಲವು ಮೂಲಗಳಿಂದ ಹಮ ಸಂಗ್ರಹಿಸಲು ಮುಂದಾಗಿದೆ. ಇದೀಗ ಮಹಿಳಾ ಘಟಕ ಹೊಸ ಯೋಜನೆ ಮೂಲಕ ಹಣ ಸಂಗ್ರಹಿಸಲು ಮುಂದಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ