
ಸ್ಟಾಕ್‌ಹೋಮ್ : ವಿಜ್ಞಾನ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಿದವರಿಗೆ ಕೊಡಮಾಡುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯ ಘೋಷಣೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ವೈದ್ಯಕೀಯ ನೊಬೆಲ್‌ಗೆ ಅಮೆರಿಕದ ಮೆರಿ ಇ ಬ್ರುನ್ಕೋವ್, ಫ್ರೆಡ್ ರಾಮ್ಸ್‌ಡೆಲ್ ಮತ್ತು ಜಪಾನ್‌ನ ಹಿರಿಯ ಸಂಶೋಧಕ ಶಿಮೋನ್ ಸಕಾಗುಚಿ ಅವರು ಆಯ್ಕೆಯಾಗಿದ್ದಾರೆ.
ದೇಹದ ಪ್ರತಿರಕ್ಷಣಾ ವ್ಯವಸ್ಥೆ ತನ್ನದೇ ಅಂಗದ ಮೇಲೆ ದಾಳಿ ಮಾಡುವುದನ್ನು ಯಾವ ರೀತಿ ತಡೆಯುತ್ತದೆ (peripheral immune tolerance) ಎಂಬುದನ್ನು ವಿವರಿಸುವ ಸಂಶೋಧನೆಗಾಗಿ ಈ ಮೂವರನ್ನು ವಿಶ್ವದ ಈ ಅತ್ಯುನ್ನತ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಸಂಶೋಧನೆ ಮಹತ್ವ:
ಈ ಸಂಶೋಧನೆಯು ಮಾನವ ಸ್ವಾಸ್ಥ್ಯ ಹಾಗೂ ರೋಗಗಳ ಕುರಿತು ಅಧ್ಯಯನಕ್ಕೆ ಹೊಸ ಹೊಳಹು ನೀಡಿದೆ. ಈ ಸಂಶೋಧನೆಯು ಅಟೋ ಇಮ್ಯೂನ್ ರೋಗಗಳ ಚಿಕಿತ್ಸೆಯಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಮೂವರ ಸಂಶೋಧನೆ ಪ್ರತಿಕಾಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರತಿಯೊಬ್ಬರಿಗೂ ಯಾಕೆ ಅಟೋಇಮ್ಯೂನ್ ರೋಗಗಳು ಬರುವುದಿಲ್ಲ ಎಂಬುದನ್ನು ಅರಿಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಓಲೆ ಕೆಂಪೆ ಹೇಳಿದ್ದಾರೆ.
ಈ ಮೂವರೂ ಸುಮಾರು 10.35 ಕೋಟಿ ರು. ಪ್ರಶಸ್ತಿ ಮೊತ್ತವನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ.
ಇಂದು ಭೌತಶಾಸ್ತ್ರ ನೊಬೆಲ್
ವಿಶ್ವದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಕಾರ್ಯ ಸೋಮವಾರದಿಂದ ಆರಂಭವಾಗಿದ್ದು, ಮಂಗಳವಾರ ಭೌತಶಾಸ್ತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ