ಇದು ಅಕ್ವೇರಿಯಂ ಅಲ್ಲ ಜಪಾನ್‌ನ ಚರಂಡಿ... ಹಳೆ ವಿಡಿಯೋ ಮತ್ತೆ ವೈರಲ್

By Anusha KbFirst Published Jan 27, 2023, 9:50 PM IST
Highlights

ನಮ್ಮ ದೇಶದಲ್ಲಿ ಚರಂಡಿ ಎಂದ ಕೂಡಲೇ ಅದರ ಬಳಿ ಸಾಗ ಬೇಕಾದರೆ ಮೂಗು ಮುಚ್ಚಿಕೊಂಡೆ ಸಾಗಬೇಕು. ಆದರೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಜಪಾನ್‌ನ ಚರಂಡಿಗಳನ್ನು ನೋಡಿದರೆ ನೀವು ಅಚ್ಚರಿಯಿಂದ ಒಂದು ಕ್ಷಣ ಬೆರಗಾಗುವುದು ಪಕ್ಕಾ.

ಜಪಾನ್‌: ನಮ್ಮ ದೇಶದಲ್ಲಿ ಚರಂಡಿ ಎಂದ ಕೂಡಲೇ ಅದರ ಬಳಿ ಸಾಗ ಬೇಕಾದರೆ ಮೂಗು ಮುಚ್ಚಿಕೊಂಡೆ ಸಾಗಬೇಕು. ಆದರೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಜಪಾನ್‌ನ ಚರಂಡಿಗಳನ್ನು ನೋಡಿದರೆ ನೀವು ಅಚ್ಚರಿಯಿಂದ ಒಂದು ಕ್ಷಣ ಬೆರಗಾಗುವುದು ಪಕ್ಕಾ. ಇದೇನು ಚರಂಡಿಯೋ ಅಕ್ವೇರಿಯಂಮ್ಮೋ ಎಂದು ಒಂದು ಕ್ಷಣ ಬೆರಗು ಗಣ್ಣಿನಿಂದ ನೋಡುವಿರಿ ಅಷ್ಟೊಂದು ಶುದ್ಧ ನೀರಿನಿಂದ ಕೂಡಿವೆ ಇಲ್ಲಿನ ಚರಂಡಿಗಳು.  ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀವು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ದೇಶದ ಬಗ್ಗೆ ಮಾತನಾಡುವುದಾದರೆ ಜಪಾನ್ (Japan) ಸದಾ ಮುಂಚೂಣಿಯಲ್ಲಿ ಬಂದು ನಿಲ್ಲುತ್ತದೆ.  ಅಲ್ಲಿನ ಬೆರಗುಗೊಳಿಸುವ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಮಂತ್ರಮುಗ್ಧಗೊಳಿಸುವ ರೊಬೊಟಿಕ್ಸ್ ಮತ್ತು ಬುಲೆಟ್ ಟ್ರೈನ್‌ನಂತಹ ಮೋಡಿ ಮಾಡುವ ಆಟೋಮೊಬೈಲ್ ಸೌಲಭ್ಯಗಳವರೆಗೆ, ಜಪಾನ್ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಜಪಾನ್‌ನ ನಗರ ಯೋಜನೆಯ ಯಶಸ್ಸಿಗೆ ಮತ್ತೊಂದು ಪ್ರಭಾವಶಾಲಿ ಕೊಡುಗೆ ಎಂದರೆ  ಅಲ್ಲಿನ ಸುವ್ಯವಸ್ಥಿತ ಚರಂಡಿಗಳು. ತಂತ್ರಜ್ಞಾನ ಹಾಗೂ ಬುದ್ಧಿವಂತಿಕೆಯಲ್ಲಿ ಮುಂದಿರುವ ಈ ದೇಶದ ಚರಂಡಿಗಳು ತುಂಬಾ ಸ್ವಚ್ಛವಾಗಿದ್ದು ಅವುಗಳಲ್ಲಿ ಮೀನುಗಳು ಈಜಾಡುತ್ತವೆ. 

2020ರ ವಿಡಿಯೋ ಇದಾಗಿದ್ದು, ಈ ವಿಡಿಯೋವನ್ನು ಮುಖ್ಯ ಡಿಜಿಟಲ್ ವಾಲಾ ಅಫ್ಶರ್  ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಪಾನ್‌ನಲ್ಲಿನ ಒಳಚರಂಡಿ ಕಾಲುವೆಗಳು ತುಂಬಾ ಸ್ವಚ್ಛವಾಗಿದ್ದು, ಅದರಲ್ಲಿ ಕೋಯಿ ಮೀನುಗಳು ಈಜುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.  ವ್ಯಕ್ತಿಯೊಬ್ಬರು ಈ ಒಳಚರಂಡಿ ವ್ಯವಸ್ಥೆಯನ್ನು ರೆಕಾರ್ಡ್ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತಿದೆ. 

ಇಂದೋರ್ ಏರ್‌ಪೋರ್ಟ್‌ನ ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ

ಒಳಚರಂಡಿ ನೀರಿನ (drainage water) ಒಳಗೆ, ವಿವಿಧ ಆಕಾರಗಳ, ಗಾತ್ರಗಳ ಮತ್ತು ಬಣ್ಣಗಳ ಕೋಯಿ ಮೀನುಗಳ  (koi fish) ಈಜುವುದನ್ನು ಕಾಣಬಹುದು. ಇದರಲ್ಲಿ ನೀರು ಸಾಕಷ್ಟು ಶುದ್ಧವಾಗಿರುವುದರಿಂದ ಇದು ಮೀನಿನ ಪರಿಪೂರ್ಣ ನೋಟವನ್ನು ನೀಡುತ್ತದೆ. ಈ ವಿಡಿಯೋ ನೋಡಿದ ಅನೇಕರು ಮಂತ್ರಮುಗ್ಧರಾಗಿದ್ದು, ಇದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ತುಂಬಾ ಸ್ವಚ್ಛವಾಗಿರಲು ಬಯಸುತ್ತೇವೆ. ದುರದೃಷ್ಟವಶಾತ್ ಈ ಜಗತ್ತಿನಲ್ಲಿ ಅನೇಕರು ಈ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 7.6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 23 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 

The cleanest drainage canals in the world are in Japan pic.twitter.com/VjhuKOVQIX

— Vala Afshar (@ValaAfshar)

 

click me!