ತನ್ನ ಕೊನೆಗಾಲದಲ್ಲಿ ಆಸರೆಯಾಗಿದ್ದ ಗೆಳತಿಗೆ 900 ಕೋಟಿ ಆಸ್ತಿ ಬಿಟ್ಟುಹೋದ ಇಟಲಿ ಮಾಜಿ ಪ್ರಧಾನಿ!

By Santosh Naik  |  First Published Jul 10, 2023, 6:48 PM IST

ಕಳೆದ ತಿಂಗಳು ಜುಲೈ 12 ರಂದು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಬಹುಕಾಲದ ಅನಾರೋಗ್ಯದಿಂದ ನಿಧನರಾದರು. ಆದರೆ, ತಮ್ಮ 54 ಸಾವಿರ ಕೋಟಿ ಆಸ್ತಿಯಲ್ಲಿ, ಕೊನೆಗಾಲದಲ್ಲಿ ಗರ್ಲ್‌ಫ್ರೆಂಡ್‌ ಆಗಿ ಜೊತೆಯಲ್ಲಿದ್ದ ಗೆಳತಿ ಮಾರ್ಟಾ ಫ್ಯಾಸಿನಾಗೆ 900 ಕೋಟಿ ರೂಪಾಯು ಆಸ್ತಿ ನೀಡಿ ಹೋಗಿದ್ದಾರೆ.
 


ನವದೆಹಲಿ (ಜು.10): ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಕಳೆದ ಜೂನ್‌ 12 ರಂದು ನಿಧನರಾದರು. 17 ವರ್ಷಗಳ ಕಾಲ ಇಟಲಿ ಪ್ರಧಾನಿಯಾಗಿದ್ದ ಬೆರ್ಲುಸ್ಕೋನಿ ಸಾವಿಗೆ ಇಡೀ ದೇಶ ಸಂತಾಪ ವ್ಯಕ್ತಪಡಿಸಿತ್ತು. ಇಟಲಿಯ ಮಾಧ್ಯಮ ಕ್ಷೇತ್ರದ ದಿಗ್ಗಜರೂ ಆಗಿದ್ದ ಬೆರ್ಲುಸ್ಕೋನಿ ಬರೋಬ್ಬರಿ 54 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಇದರ ನಡುವೆ 906 ಕೋಟಿ ರೂಪಾಯಿ ಆಸ್ತಿಯನ್ನು ಕೊನೆಗಾಲದಲ್ಲಿ ತಮ್ಮ ಗೆಳತಿಯಾಗಿದ್ದ 33 ವರ್ಷದ ಮಾರ್ಟಾ ಫ್ಯಾಸಿನಾಗೆ ನೀಡಬೇಕು ಎಂದು ವಿಲ್‌ ಬರೆದಿಟ್ಟು ಹೋಗಿದ್ದಾರೆ. ಇದೇ ಉಯಿಲಿನಲ್ಲಿ ತಮ್ಮ ಆಸ್ತಿ ಬಹುಶಃ 54 ಸಾವಿರ ಕೋಟಿ ಎಂದೂ ಅವರು ತಿಳಿಸಿದ್ದಾರೆ. 2020ರ ಮಾರ್ಚ್‌ನಲ್ಲಿ ಬೆರ್ಲುಸ್ಕೋನಿ ಹಾಗೂ ಫ್ಯಾಸಿನಾ ರಿಲೇಷನ್‌ಷಿಪ್‌ನಲ್ಲಿ ಇದ್ದಾರೆ ಎನ್ನುವುದು ಗೊತ್ತಾಗಿತ್ತು. ಆದರೆ, ಇಬ್ಬರೂ ಎಂದೂ ವಿವಾಹವಾಗಬೇಕು ಎಂದು ನಿರ್ಧಾರ ಮಾಡಿರಲಿಲ್ಲ. ಮೂಲಗಳ ಪ್ರಕಾರ ಸಾಯುವ ಕೊನೆಗಳಿಗೆಯಲ್ಲಿ ಮಾರ್ಟಾ ಫ್ಯಾಸಿನಾರನ್ನು ತನ್ನ ಹೆಂಡತಿ ಎಂದು ಹೇಳಿ ಬೆರ್ಲುಸ್ಕೋನಿ ವಿಧಿವಶರಾದರು ಎನ್ನಲಾಗಿದೆ.

ಇನ್ನು ಮಾರ್ಟಾ ಫ್ಯಾಸಿನಾ ಸಾಮಾನ್ಯ ಹುಡುಗಿಯಲ್ಲ. 2018ರ ಇಟಲಿ ಸಾರ್ವತ್ರಿಕ ಚುನಾವಣೆಯಿಂದಲೂ ಆಕೆ ಇಟಲಿಯ ಕೆಳಮನೆಯ ಸದಸ್ಯರಾಗಿದ್ದಾರೆ. 1994ರಲ್ಲಿ ಬೆರ್ಲುಸ್ಕೋನಿ ರಾಜಕಾರಣಕ್ಕೆ ಇಳಿದಾಗ ಆರಂಭಿಸಿದ್ದ ಫೋರ್ಜಾ ಇಟಲಿಯಾ ಪಾರ್ಟಿಯ ಸಂಸದರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆರ್ಲುಸ್ಕೋನಿ ಸಾವಿನ ಬಳಿಕ ಅವರ ವ್ಯವಹಾರವನ್ನು ಐವರು ಮಕ್ಕಳ ಪೈಕಿ ಇಬ್ಬರು ಹಿರಿಯರಾದ ಮಾರಿಕಾ ಹಾಗೂ ಪಿಯರ್‌ ಸಿಲ್ವಿಯೋ ನೋಡಿಕೊಳ್ಳಲಿದ್ದಾರೆ. ಇಬ್ಬರೂ ಕೂಡ ಈಗಾಗಲೇ ಬೆರ್ಲುಸ್ಕೋನಿ ವ್ಯವಹಾರದಲ್ಲಿ ವ್ಯವಸ್ಥಾಪಕ ಅಧಿಕಾರಿಯ ಸ್ಥಾನವನ್ನು ಹೊಂದಿದ್ದರು. ತಮ್ಮ ಕುಟುಂಬ ವ್ಯವಹಾರದಲ್ಲಿ ಬೆರ್ಲುಸ್ಕೋನಿ ಅವರ ಪಾಲಿ ಶೇ. 53ರಷ್ಟಿದೆ. ಇದನ್ನು ತಮ್ಮ ಐವರು ಮಕ್ಕಳಿಗೂ ಹಂಚಿರುವುದಾಗಿ ವಿಲ್‌ನಲ್ಲಿ ತಿಳಿಸಿದ್ದಾರೆ.

2011ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬೆರ್ಲುಸ್ಕೋನಿ ಅವರ ಜನಪ್ರಿಯತೆ ಕುಸಿಯಲು ಆರಂಭವಾಗಿತ್ತು. ಸೆಕ್ಸ್‌ ಸ್ಕ್ಯಾಂಡಲ್ಸ್‌, ಭ್ರಷ್ಟಾಚಾರ, ತೆರಿಗೆ ವಂಚನೆ ಸೇರಿದಂತೆ ಸಾಲು ಸಾಲು ಆರೋಪಗಳನ್ನು ಇವರು ಎದುರಿಸಿದ್ದರು. ಇದರ ಹೊರತಾಗಿಯೂ, ಬರ್ಲುಸ್ಕೋನಿ ಪತ್ರಿಕಾಗೋಷ್ಠಿಯಲ್ಲಿ, 'ನನಗೆ ರಾಜಕೀಯ ತಿಳಿದಿದೆ, ಏಕೆಂದರೆ ಮಾಧ್ಯಮ ಉದ್ಯಮಿಯಾಗಿ ನಾನು ರಾಜಕಾರಣಿಗಳನ್ನು ಬಹಳ ಹತ್ತಿರದಿಂದ ಅರ್ಥಮಾಡಿಕೊಂಡಿದ್ದೇನೆ' ಎಂದು ಹೇಳಿದ್ದರು.

Tap to resize

Latest Videos

ಬುಂಗಾ ಬುಂಗಾ ಪಾರ್ಟಿ ಕುಖ್ಯಾತಿಯ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ನಿಧನ

1936 ರಲ್ಲಿ ಜನಿಸಿದ ಬೆರ್ಲುಸ್ಕೋನಿ ಆರಂಭದಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ ಕೆಲಸ ಮಾಡಿದರು. ಆ ಬಳಿಕ, ಮೀಡಿಯಾಸೆಟ್ ಎಂಬ ಪ್ರಸಾರ ಕಂಪನಿಯನ್ನು ಇವರು ಆರಂಭಿಸಿದ್ದರು. ಎಸಿ ಮಿಲನ್‌ನಂತಹ ಬಿಲಿಯನ್ ಡಾಲರ್ ಫುಟ್‌ಬಾಲ್ ಕ್ಲಬ್‌ಗೆ1986 ರಿಂದ 2017 ರವರೆಗೆ ಅವರ ಕಂಪನಿಯು ಮಾಲೀಕರಾಗಿತ್ತು. 1993 ರಲ್ಲಿ ಅವರು ಫೋರ್ಜಾ ಇಟಾಲಿಯಾ ಪಕ್ಷವನ್ನು ರಚಿಸಿದರು ಮತ್ತು ಕೆಲವು ವರ್ಷಗಳ ನಂತರ ಪ್ರಧಾನಿಯಾದರು. ಬೆರ್ಲುಸ್ಕೋನಿ ಮೂರು ಬಾರಿ ಇಟಲಿಯ ಪ್ರಧಾನಿಯಾಗಿದ್ದರು. ಅವರು 2001 ರಿಂದ 2006 ರವರೆಗೆ ಪ್ರಧಾನಿಯಾಗಿದ್ದಾಗ,ಇಟಲಿಯ ಆರ್ಥಿಕ ಕ್ಷೇತ್ರವನ್ನು ಯುರೋಪ್ನಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಮಾಡಿದರು. 2008ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಅಧಿಕೃತ ಸಂಭಾಷಣೆಯಲ್ಲಿ ಇಂಗ್ಲೀಷ್‌ ಬಳಸಿದ್ರೆ ಇಟಲಿಯಲ್ಲಿ 89 ಲಕ್ಷ ದಂಡ

click me!