ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಎರಡೂ ದೇಶಗಳು ತಮ್ಮದೇ ಆದ ಬೆಂಬಲಿಗ ರಾಷ್ಟ್ರಗಳನ್ನು ಹೊಂದಿದ್ದು, ಜಗತ್ತನ್ನು ಎರಡು ಭಾಗಗಳಾಗಿ ವಿಭಜಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಭಾರತ ಯಾವ ದೇಶವನ್ನು ಬೆಂಬಲಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ನವದೆಹಲಿ (ಅ.5): ಅವರದ್ದು ಶಕ್ತಿ..ಇವರದ್ದು ಯುಕ್ತಿ..ಮಸಣವಾಗುತ್ತಾ ಮಧ್ಯಪ್ರಾಚ್ಯ ಎನ್ನುವ ಅನುಮಾನ ವ್ಯಕ್ತವಾಗಿದೆ. ಇಸ್ರೇಲ್‌ನವರದ್ದು ಗಟ್ಟಿ ಗುಂಡಿಗೆ ಅನ್ನೋದರಲ್ಲಿ ಯಾವ ಅನುಮಾನಗಳೂ ಇಲ್ಲ. ಇನ್ನೊಂದೆಡೆ ಇರಾನ್‌ದು ಎಂದೂ ಮುಗಿಯದ ಹಗೆ. ಈಗಾಗಲೇ ಎರಡು ದೇಶಗಳ ಶಸ್ತ್ರಾಗಾರ ತುಂಬಿ ಹೋಗಿದೆ. ಹಾಗೇನಾದರೂ ಯುದ್ಧವಾದ್ರೆ ರಣಭೀಕರ ಪರಿಸ್ಥಿತಿ ಎದುರಾಗುವುದಂತೂ ನಿಶ್ಚಿತ. ಯುದ್ಧಕ್ಕೆ ಇಳಿದಿರುವ 2 ರಾಷ್ಟ್ರಗಳ ಸೇನಾ ಬಲಾಬಲ ಹೇಗಿದೆ? ಯುದ್ಧ ಗೆಲ್ಲೋ ತಾಕತ್ತು ಇರೋದು ಇರಾನಿಗೋ..? ಇಸ್ರೇಲಿಗೋ..? ಅನ್ನೋ ಪ್ರಶ್ನೆಗಳೂ ಇವೆ. ಇಸ್ರೇಲ್‌ಗೆ ವಾಯುಪಡೆಯೇ ಶಕ್ತಿಯಾಗಿದ್ದರೆ, ಇರಾನ್‌ಗೆ ಭೂಸೇನೆಯೇ ದೊಡ್ಡ ಬಲ.
ಈ ಎಲ್ಲಾ ಪ್ರಶ್ನೆಗಳ ನಡುವೆ ಇರುವ ಅತ್ಯಂತ ಮುಖ್ಯ ವಿಚಾರ ಏನೆಂದರೆ, ನಡೆಯುತ್ತಾ 3ನೇ ಮಹಾಯುದ್ಧ? ಅನ್ನೋದು. ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡಿರುವ ಯುದ್ಧದ ಕಿಚ್ಚು ವಿಶ್ವವನ್ನೇ ವ್ಯಾಪಿಸುತ್ತಾ..? ಈ ಭಯ, ಈ ಆತಂಕಕ್ಕೆ ಕಾರಣವಾಗಿರೋದು ಇಸ್ರೇಲ್, ಇರಾನ್ ನಡುವೆ ಶುರವಾಗಿರೋ ಕಾಳಗ. ತಮ್ಮ ಶಕ್ತಿಯನ್ನೇ ನಂಬಿಕೊಂಡಿರೋದು ಒಬ್ರು.. ತಮ್ಮ ಯುಕ್ತಿಯ ಮೇಲೆ ಭರವಸೆ ಇಟ್ಟೋರು ಇನ್ನೊಬ್ರು. ಶಕ್ತಿ. ಯುಕ್ತಿಯ ಕಾದಾಟದಿಂದ ಮಧ್ಯಪ್ರಾಚ್ಯಕ್ಕೆ ಸದ್ಯಕ್ಕೆ ಮುಕ್ತಿ ಸಿಗೋ ಹಾಗೆ ಕಾಣ್ತಿಲ್ಲ. ಗಟ್ಟಿ ಗುಂಡಿಗೆಯ ಇಸ್ರೇಲ್.. ಮುಗಿಯದ ಹಗೆಯ ಇರಾನ್.. ಇಬ್ಬರ ಬಲಾಬಲವೇನು..? ಯುದ್ಧದಲ್ಲಿ ಗೆಲ್ಲೋ ಕದನಕಲಿ ಯಾರು.? ಇರಾನ್ – ಇಸ್ರೇಲ್ ಸಮರದಿಂದ ಜಗತ್ತೇ ಇಬ್ಭಾಗ ಆಗುತ್ತಾ..? ಅನ್ನೂ ಕುತೂಹಲ ಎಲ್ಲರಲ್ಲಿದೆ.
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ ಅನ್ನೋ ಆತಂಕ ಎದುರಾಗಿದೆ. ಈಗಾಗಲೇ ಕೆಲ ದೇಶಗಳು ಇಸ್ರೇಲ್ ಪರ ವಾಲಿದ್ರೆ, ಇನ್ನು ಕೆಲ ದೇಶಗಳು ಇರಾನ್ ಬೆನ್ನಿಗೆ ನಿಂತಿವೆ. ಹಾಗಿದ್ರೆ, ಈ ಎರಡೂ ದೇಶಗಳ ಬೆಂಬಲಕ್ಕೆ ಯಾವ್ಯಾವ ರಾಷ್ಟ್ರಗಳಿವೆ. ಇದರಲ್ಲಿ ಭಾರತ ಯಾವ ಕಡೆಯಿದೆ ಅನ್ನೋ ಪ್ರಶ್ನೆಗಳು ಎದುರಾಗಿವೆ.
ಇಸ್ರೇಲ್ ವರ್ಸಸ್ ಇರಾನ್...ಎರಡೂ ದೇಶಗಳ ಮಧ್ಯೆ ಸಮರ ಶುರುವಾಗಿದೆ. ಆದ್ರೆ ಇದು ಇವರಿಬ್ಬರ ಯುದ್ಧವಾಗಿ ಮಾತ್ರವೇ ಸೀಮಿತವಾಗುತ್ತಾ..? ಹಾಗಾದ್ರೇನೆ ಒಳ್ಳೇದು. ಆದ್ರೆ, ಈ ಯುದ್ಧದಿಂದಾಗಿ ಜಗತ್ತು ಇಬ್ಭಾಗವಾಗೋ ಸಾಧ್ಯತೆಯನ್ನೂ ಅಲ್ಲಗಳೆಯೋಕೆ ಆಗಲ್ಲ. ಇಸ್ರೇಲ್ ಬೆನ್ನ ಹಿಂದೆ ಒಂದಿಷ್ಟು ರಾಷ್ಟ್ರಗಳು.. ಇರಾನ್ ಜೊತೆಗೆ ಇನ್ನೊಂದಿಷ್ಟು ರಾಷ್ಟ್ರಗಳು ನಿಲ್ಲೋ ಸೂಚನೆ ಕೊಡ್ತಿವೆ. ಹಾಗಿದ್ರೆ, ಇಲ್ಲಿ ಇಸ್ರೇಲ್ ಪರವಾಗಿ ಯಾರ್ಯಾರು ಇದ್ದಾರೆ..? ಇರಾನ್ ಜೊತೆಯಾಗಿ ಯಾರ್ಯಾರು ಇದ್ದಾರೆ..?
ಇಸ್ರೇಲ್‌ನ ಅಜೇಯ ಶಕ್ತಿ: ಶತ್ರುಗಳ ನಿದ್ದೆಗೆಡಿಸುವ ರಹಸ್ಯ ಅಸ್ತ್ರಗಳೇನು?
ಇಸ್ರೇಲ್ – ಇರಾನ್ ನಡುವಿನ ಕಾದಾಟ ವಿಕೋಪಕ್ಕೆ ಹೋಗೋದು ದಿನ ದಿನಕ್ಕೂ ದಟ್ಟವಾಗ್ತಿದೆ. ಒಂದಿಷ್ಟು ದೇಶಗಳು ಇಸ್ರೇಲ್ ಕೈ ಹಿಡಿದು ನಿಂತಿದ್ರೆ, ಇನ್ನೊಂದಿಷ್ಟು ರಾಷ್ಟ್ರಗಳು ಇರಾನ್ ಜೊತೆ ಕೈ ಕುಲುಕುತ್ತಿವೆ. ಸದ್ಯ ವಿಶ್ವದ ಚಿತ್ತ ನೆಟ್ಟಿರೋದು ಭಾರತದ ಮೇಲೆ. ಯಾವ ದೇಶದ ಪರವಾಗಿ ಭಾರತ ನಿಲ್ಲುತ್ತೆ ಅನ್ನೋ ಪ್ರಶ್ನೆ ಈಗ ಜಗತ್ತಿನ ಮುಂದಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ಯುದ್ಧಭೀತಿ, ಜಗತ್ತಿಗೆ ಕಚ್ಚಾ ತೈಲದ ಬೆಲೆ ಏರಿಕೆ ಆತಂಕ