ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ

Kannadaprabha News   | Kannada Prabha
Published : Mar 10, 2026, 04:32 AM IST
Israel

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ನಾನಾ ರೀತಿಯ ಅವಾಂತರಗಳಿಗೆ ನಾಂದಿ ಹಾಡುತ್ತಿರುವ ನಡುವೆಯೇ, ನಾಗರಿಕರ ಮೇಲೆ ಅತ್ಯಂತ ಭೀಕರ ಪರಿಣಾಮಗಳನ್ನು ಉಂಟುಮಾಡುವ ಬಿಳಿ ರಂಜಕವನ್ನು (ವೈಟ್ ಫಾಸ್ಫರಸ್‌) ಇಸ್ರೇಲ್‌ ಲೆಬನಾನ್‌ನ ಮನೆಗಳ ಮೇಲೆ ಅಕ್ರಮವಾಗಿ ಪ್ರಯೋಗಿಸಿದೆ ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆ ಸೋಮವಾರ ಆರೋಪಿಸಿದೆ.

ವಾಷಿಂಗ್ಟನ್‌: ಮಧ್ಯಪ್ರಾಚ್ಯ ಯುದ್ಧ ನಾನಾ ರೀತಿಯ ಅವಾಂತರಗಳಿಗೆ ನಾಂದಿ ಹಾಡುತ್ತಿರುವ ನಡುವೆಯೇ, ನಾಗರಿಕರ ಮೇಲೆ ಅತ್ಯಂತ ಭೀಕರ ಪರಿಣಾಮಗಳನ್ನು ಉಂಟುಮಾಡುವ ಬಿಳಿ ರಂಜಕವನ್ನು (ವೈಟ್ ಫಾಸ್ಫರಸ್‌) ಇಸ್ರೇಲ್‌ ಲೆಬನಾನ್‌ನ ಮನೆಗಳ ಮೇಲೆ ಅಕ್ರಮವಾಗಿ ಪ್ರಯೋಗಿಸಿದೆ ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆ ಸೋಮವಾರ ಆರೋಪಿಸಿದೆ.

‘ಇಸ್ರೇಲಿ ಸೇನೆಯು ಮಾ.3ರಂದು ದಕ್ಷಿಣ ಲೆಬನಾನ್‌ನ ಯೋಹ್ಮೋರ್ ಪಟ್ಟಣದಲ್ಲಿ ಮನೆಗಳ ಮೇಲೆ ಆಗಸದಲ್ಲಿ ಸ್ಫೋಟಗೊಳ್ಳುವ ಬಿಳಿ ರಂಜಕವುಳ್ಳ 2 ಫಿರಂಗಿಗಳನ್ನು ಹಾರಿಸಿದೆ. ಇದರಿಂದ ಕನಿಷ್ಠ 2 ಮನೆಗಳು ಹಾಗೂ ಒಂದು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ನಾಗರಿಕರಿಗೆ ಭಯಾನಕ ಪರಿಣಾಮಗಳನ್ನುಂಟುಮಾಡುತ್ತದೆ’ ಎಂದು ದಾಳಿಯ ಚಿತ್ರಗಳನ್ನಾಧರಿಸಿ ಸಂಸ್ಥೆ ಆರೋಪಿಸಿದೆ.

ಬಿಳಿ ಫಾಸ್ಫರಸ್‌ ಎಂದರೇನು?:

ಇದು ಒಂದು ರಾಸಾಯನಿಕ ವಸ್ತುವಾಗಿದ್ದು, ಆರ್ಟಿಲರಿ ಶೆಲ್‌ಗಳು, ಬಾಂಬ್‌ಗಳು ಮತ್ತು ರಾಕೆಟ್‌ಗಳಲ್ಲಿ ಬಳಸಲಾಗುತ್ತದೆ. ಇದು ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಉರಿಯುತ್ತದೆ. ಮನೆ, ಕೃಷಿ ಭೂಮಿ ಮತ್ತು ಇತರ ನಾಗರಿಕ ಪ್ರದೇಶಗಳಲ್ಲಿ ಇದರಿಂದ ಬೆಂಕಿ ಹಚ್ಚಬಹುದು. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ, ಜನಸಂದಣಿಯ ಪ್ರದೇಶಗಳಲ್ಲಿ ಆಗಸದಲ್ಲಿ ಸ್ಫೋಟಗೊಳ್ಳುವ ಬಿಳಿ ಫಾಸ್ಫರಸ್ ಬಳಕೆಯನ್ನು ನಿಷೇಧಿಸಲಾಗಿದೆ.

ಈ ಹಿಂದೆಯೂ ಆರೋಪ:

2 ವರ್ಷಗಳ ಹಿಂದೆಯೂ ಗಾಜಾ ಮತ್ತು ಲೆಬನಾನ್‌ ಮೇಲೆ ಇಸ್ರೇಲ್‌ ಬಿಳಿ ಫಾಸ್ಫರಸ್ ಬಳಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಇಸ್ರೇಲ್ ವಿರುದ್ಧ ಆರೋಪ ಮಾಡಿತ್ತು. ಆಗ ಇಸ್ರೇಲ್ ಆರೋಪಗಳನ್ನು ನಿರಾಕರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಚ್ಚಾತೈಲ ಗಗನನ ಮುಖಿ : ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ
ಮೋದಿಯ ಒಂದೇ ಒಂದು ಫೋನ್‌ ಕರೆಗೆ ಯುದ್ಧ ನಿಲ್ಲುತ್ತೆ : ಯುಎಇ