ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ದಾಳಿ: ಬುರ್ಜ್‌ ಖಲೀಫಾ ಬಳಿಯೂ ಸ್ಫೋಟ: ದುಬೈ ಮೇಲೇಕೆ ಇರಾನ್ ಸಿಟ್ಟು?

Published : Mar 01, 2026, 01:07 PM ISTUpdated : Mar 01, 2026, 01:12 PM IST
Dubai's Burj Khalifa Hit By Iran Missile

ಸಾರಾಂಶ

ಇರಾನ್‌ನ ಸರ್ವೋಚ್ಚ ನಾಯಕನ ಹತ್ಯೆಗೆ ಪ್ರತೀಕಾರವಾಗಿ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬುರ್ಜ್ ಖಲೀಫಾ ಬಳಿ ಸ್ಫೋಟಗಳು ಸಂಭವಿಸಿವೆ. ಅಮೆರಿಕದ ಸೇನಾ ನೆಲೆಗಳಿಗೆ ಆಶ್ರಯ ನೀಡಿರುವ ಯುಎಇ ಮೇಲೆ ಇರಾನ್ ದಾಳಿ ನಡೆಸಿರುವುದು ಮಧ್ಯಪ್ರಾಚ್ಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

ದುಬೈ: ಮಧ್ಯಪ್ರಾಚ್ಯ ಸಂಘರ್ಷದಲ್ಲಿ ತನ್ನ ನಾಯಕ ಅಲಿ ಖಮೇನಿಸ ಸಾವಿನ ನಂತರ ಅಮೆರಿಕಾದ ಮೇಲೆ ಇರಾನ್‌ನ ಪ್ರತೀಕಾರವು ಹೆಚ್ಚುತ್ತಿರುವಂತೆ ಕಂಡುಬಂದಿದ್ದು, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬುರ್ಜ್ ಖಲೀಫಾ ಸಮೀಪವೂ ಸ್ಫೋಟಗಳು ಸಂಭವಿಸಿದ ವರದಿಯಾಗಿವೆ. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಯಾಗಿ ಇರಾನ್ ಮೇಲೆ ಮುಗಿಬಿದ್ದಿದ್ದು, ಇತ್ತ ಇರಾನ್ ಸುತ್ತಮುತ್ತಲು ಏನೇ ಆದರೂ ಸದಾ ತಣ್ಣಗೆ ಕುಳಿತಿರುತ್ತಿದ್ದ ಅರಬ್ ದೇಶಗಳ ಮೇಲೂ ದಾಳಿ ನಡೆಸಿದೆ. ದುಬೈನ ವಿಮಾನ ನಿಲ್ದಾಣ, ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬುರ್ಜ್‌ ಖಲೀಫಾದ ಕಟ್ಟಡದ ಸಮೀಪವೂ ದಾಳಿ ನಡೆಸಿದ್ದು, ದಾಳಿಯ ಹಿನ್ನೆಲೆ ಬುರ್ಜ್‌ ಖಲೀಫಾದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ.

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಗಳಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬ ಸಂಪೂರ್ಣವಾಗಿ ಸಾವನ್ನಪ್ಪಿದ ನಂತರ ಇರಾನ್, ತನ್ನ ನಾಯಕನ ಕೊಂದ ಅಮೆರಿಕ ಮತ್ತು ಇಸ್ರೇಲಿಗರ ವಿರುದ್ಧ ಅತ್ಯಂತ ಕಠೋರವಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ ಕೆಲವೇ ಗಂಟೆಗಳ ನಂತರ ದುಬೈನಲ್ಲಿ ಇತ್ತೀಚಿನ ಸ್ಫೋಟಗಳು ಕೇಳಿ ಬಂದಿವೆ.

ಕೇವಲ ಇಸ್ರೇಲ್ ಮತ್ತು ಇರಾನ್ ನಡುವಿಣ ಈ ಯುದ್ಧ ಈಗ ಅಮೆರಿಕಾದ ಮಧ್ಯಪ್ರವೇಶದಿಂದಾಗಿ ಜಾಗತಿ ಘರ್ಷಣೆಯಾಗಿ ಬದಲಾಗಿದ್ದು, ಯುದ್ಧವೂ ವಿಸ್ಥರಣೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿಶ್ವದ ಅತ್ಯಂತ ಗುರುತಿಸಬಹುದಾದ ಲ್ಯಾಂಡ್ ಮಾರ್ಕ್ ಎನಿಸಿದ ದುಬೈನ ಬುರ್ಜ್ ಖಲೀಫಾ ಬಳಿ ಸ್ಫೋಟಗಳ ವರದಿಗಳು ಈಗಾಗಲೇ ಘಟನೆಯಿಂದ ಅಸ್ಥಿರತೆ ಉಂಟಾಗಿರುವ ಮಧ್ಯಪ್ರಾಚ್ಯದ ಪರಿಸ್ಥಿತಿಗೆ ಮತ್ತೊಂದು ಆಯಾಮವನ್ನು ನೀಡಿವೆ. ಇರಾನ್‌ನ ಈ ಪ್ರತಿದಾಳಿಗಳು ಯುಎಇಗೆ ಮಾತ್ರ ಸೀಮಿತವಾಗಿಲ್ಲ. ಕುವೈತ್ ಮತ್ತು ಎರ್ಬಿಲ್‌ನಲ್ಲಿರುವ ಯುಎಸ್ ಮಿಲಿಟರಿ ಸ್ಥಾಪನೆಗಳನ್ನು ಸಹ ಗುರಿಯಾಗಿರಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ವರದಿಯಾಗಿವೆ.

ತಟಸ್ಥವಾಗಿರುವ ದುಬೈ ಮೇಲೇಕೆ ಇರಾನ್ ಸಿಟ್ಟು

ಯುಎಇ ಅಧಿಕೃತವಾಗಿ ಇಸ್ರೇಲ್ ಇರಾನ್ ಸಂಘರ್ಷದ ಭಾಗವಾಗಿಲ್ಲ. ಆದರೂ ಇರಾನ್ ಗಲ್ಫ್ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಏಕೆಂದರೆ ಯುಎಇ ಅಮೆರಿಕದ ಮಿಲಿಟರಿ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ ಸೌಲಭ್ಯಗಳಿಗೆ ನೆಲೆ ನೀಡಿದೆ. ಹೀಗಾಗಿಯೇ ಈ ಸಂಘರ್ಷದ ಸಮಯದಲ್ಲಿ ಇರಾನ್ ಯುಎಇ ಮೇಲೆ ದಾಳಿ ನಡೆಸುತ್ತಿದೆ. ಇದರ ಜೊತೆಗೆ ದುಬೈ ವಿಶ್ವದ ಅತ್ಯಂತ ಜನನಿಬಿಡ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದೆ. ಯುಎಇ ದೃಢೀಕರಿಸದ ಭದ್ರತಾ ಘಟನೆಗಳು ಸಹ ಜಾಗತಿಕ ಪ್ರಯಾಣ, ವ್ಯಾಪಾರ ಮತ್ತು ಮಾರುಕಟ್ಟೆಗಳಲ್ಲಿ ತಕ್ಷಣದ ಪರಿಣಾಮಗಳನ್ನು ಬೀರುತ್ತಿದೆ. ಅಧಿಕೃತವಾಗಿ ದೃಢಪಡೀಸದೇ ಇದ್ದರೂ ಅಧಿಕಾರಿಗಳು ಕಣ್ಗಾವಲು ಮತ್ತು ತುರ್ತು ಸಿದ್ಧತೆ ಕ್ರಮಗಳನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ: ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ

 

ಕುವೈತ್ ಮತ್ತು ಎರ್ಬಿಲ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ

ಪ್ರಾದೇಶಿಕ ಮಾಧ್ಯಮ ವರದಿಗಳ ಪ್ರಕಾರ, ಇರಾನಿನ ಪಡೆಗಳು ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆ ಮತ್ತು ಉತ್ತರ ಇರಾಕ್‌ನ ಎರ್ಬಿಲ್‌ನಲ್ಲಿರುವ ಅಮೆರಿಕದ ಕೆಲ ಸ್ಥಾಪನೆಗಳ ಮೇಲೆಯೂ ದಾಳಿ ನಡೆಸಿವೆ. ಅಮೆರಿಕದ ಸೌಲಭ್ಯಗಳನ್ನು ಗುರಿಯಾಗಿಸಿಕೊಳ್ಳುವ ಮೂಲಕ ಈ ಯುದ್ಧದಲ್ಲಿ ಅಮೆರಿಕಾದ ಪಾಲ್ಗೊಳ್ಳುವಿಕೆಯನ್ನು ತಡೆಯುವುದು ಇರಾನ್‌ನ ಕಾರ್ಯತಂತ್ರವಾಗಿದೆ. ಅಮೆರಿಕದ ನೆಲೆಗಳಲ್ಲಿ ಕಾಣಿಸುವ ಯಾವುದೇ ದೃಢಪಡಿಸಿದ ಸಾವುನೋವುಗಳು ಈ ಯುದ್ಧದ ಬಿಕ್ಕಟ್ಟನ್ನು ತೀವ್ರವಾಗಿ ಹೆಚ್ಚಿಸಬಹುದು ಎಂದು ರಕ್ಷಣಾ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:  ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್-ಇಸ್ರೇಲ್‌ ಯುದ್ಧ: ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ?
ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಅಯಾತುಲ್ಲಾ ಅಲಿ ಖಮೇನಿ ಮೃತದೇಹದ ಫೋಟೋ ರಿವೀಲ್