
ನವದೆಹಲಿ (ಅ.7): ಕಳೆದ 100 ವರ್ಷಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಂಘರ್ಷ ಶನಿವಾರ ವಿಕೋಪಕ್ಕೆ ತಿರುಗಿದೆ. ವೆಸ್ಟ್ ಬ್ಯಾಂಕ್, ಗಾಜಾಪಟ್ಟಿ ಹಾಗೂ ಗೋಲನ್ ಹೈಟ್ಸ್‌ನಂಥ ಪ್ರದೇಶಗಳು ತನ್ನದೆಂದು ಪ್ಯಾಲೆಸ್ತೇನಿಯರು ಸಂಘರ್ಷಕ್ಕಿಳಿದ್ದರೆ, ಈ ಪ್ರದೇಶ ನಮ್ಮ ದೇಶದ ಭಾಗ ಯಾವುದೇ ಕಾರಣಕ್ಕೂ ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದೆ. ಪಶ್ಚಿಮ ಜೆರುಸಲೇಮ್ ಕೂಡ ನಮಗೆ ಸೇರಬೇಕು ಎಂದು ಪ್ಯಾಲೆಸ್ತೇನಿಯನ್ನರು ಮಾತಿಗೆ ಇಸ್ರೇಲ್ ಈವರೆಗೂ ಸೊಪ್ಪು ಹಾಕಿಲ್ಲ. ದಿನದಿಂದ ದಿನಕ್ಕೆ ವಿವಾದ ಏರುತ್ತಿದ್ದ ನಡುವೆಯೇ ಶನಿವಾರ ಪ್ಯಾಲಿಸ್ತೇನಿಯನ್ನರ ಪರ ಹೋರಾಟ ಮಾಡುವ ಭಯೋತ್ಪಾದಕ ಸಂಘಟನೆ ಹಮಾಸ್, ಒಂದೇ ದಿನ ಬರೋಬ್ಬರಿ 7 ಸಾವಿರ ರಾಕೆಟ್‌ಗಳನ್ನು ಇಸ್ರೇಲ್‌ನತ್ತ ಉಡಾಯಿಸಿದೆ. ಇದರ ಬೆನ್ನಲ್ಲಿಯೇ ಹಮಾಸ್‌ನ ದಾಳಿಗೆ ಮಧ್ಯಪ್ರಾಚ್ಯದ ಮಹಾಬಲಿಷ್ಠ ದೇಶಗಳಲ್ಲಿ ಒಂದಾದ ಮುಸ್ಲಿಂ ಸಂಪ್ರದಾಯವಾದಿ ದೇಶ ಇರಾನ್ ನೇರವಾಗಿ ಬೆಂಬಲ ವ್ಯಕ್ತಪಡಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಸಲಹೆಗಾರ, ಇಸ್ರೇಲ್‌ನ ಮೇಲೆ ಪ್ಯಾಲಿಸ್ತೇನಿಯನ್ನರ ದಾಳಿಯನ್ನು ಇರಾನ್ ಬೆಂಬಲಿಸುತ್ತದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಹಮಾಸ್‌ನ ದಾಳಿಯಲ್ಲಿ ಈವರೆಗೂ 22 ಇಸ್ರೇಲ್ ಪ್ರಜೆಗಳು ಸಾವು ಕಂಡಿದ್ದಾರೆ.
ಇಸ್ರೇಲ್‌ನ ಶಾರ್ ಹನೆಗೆವ್ ಪ್ರದೇಶದ ಮೇಯರ್ ಓಫಿರ್ ಲೀಬ್‌ಸ್ಟೈನ್ ಅವರನ್ನು ಹಮಾಸ್ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದೆ. ಅದರೊಂದಿಗೆ ಹಮಾಸ್‌ನ ಅಲ್-ಕಸ್ಸಾಮ್ ಬ್ರಿಗೇಡ್ ತನ್ನ ಕಾರ್ಯಾಚರಣೆ 'ಅಲ್-ಅಕ್ಸಾ ಫ್ಲಡ್' ಸಮಯದಲ್ಲಿ ಹಲವಾರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇಸ್ರೇಲ್ ಸೈನಿಕರಿಗೆ ಹಿಂಸೆ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದೆ. ಕೈದಿಗಳನ್ನಾಗಿ ಮಾಡಲಾಗಿರುವ ಹೆಚ್ಚಿನ ಇಸ್ರೇಲ್ ಸೈನಿಕರನ್ನು ಜೀವಂತವಾಗಿ ಗಾಜಾಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದೆ.
ಮೀಸಲು ಸೈನಿಕರ ನಿಯೋಜನೆ ಮಾಡಿದ ಇಸ್ರೇಲ್: ಈ ಸಮಯದಲ್ಲಿ, ಇಸ್ರೇಲ್ ಭದ್ರತಾ ಪಡೆ ಹಲವಾರು ಕಾರ್ಯಾಚರಣೆಯ ಪಡೆಗಳೊಂದಿಗೆ ದಕ್ಷಿಣ ಮತ್ತು ಗಾಜಾ ಪಟ್ಟಿಯ ಸುತ್ತಮುತ್ತಲಿನ ಸಮುದಾಯಗಳನ್ನು ಬಲಪಡಿಸುತ್ತಿದೆ ಎಂದು ಐಡಿಎಫ್ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ. ಕಾರ್ಯಾಚರಣೆಯ ಕಮಾಂಡರ್‌ಗಳು ಯುದ್ಧವನ್ನು ನಿರ್ವಹಿಸಲು ಪ್ರತಿ ಸ್ಥಳವನ್ನು ತಲುಪುತ್ತಿದ್ದಾರೆ. ಅದೇ ಸಮಯದಲ್ಲಿ, ನಾವು ಎಲ್ಲಾ ಐಡಿಎಫ್ ಘಟಕಗಳಿಗೆ ಮೀಸಲು ಸೈನಿಕರನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಮೆರಿಕದ ವಾಯುಸೇನೆ ನಿಯೋಜನೆ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉದ್ವಿಗ್ನತೆಯ ನಡುವೆ ಯುಎಸ್ ವಾಯುಪಡೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅಮೆರಿಕ ವಾಯುಪಡೆಯು KC-10A ಎಕ್ಸ್‌ಟೆಂಡರ್ (ಸರಕು ವಿಮಾನ) ಅನ್ನು 'CLEAN01' ಎಂಬ ಕರೆ ಚಿಹ್ನೆಯೊಂದಿಗೆ ನಿಯೋಜಿಸಿದೆ. ಇದು ಕರಾವಳಿಯ ಸಮೀಪದಿಂದ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಮೇಲೆ ಕಣ್ಣಿಟ್ಟಿದೆ. ಈ ಸರಕು ವಿಮಾನದಲ್ಲಿ ಸಾಮಾನ್ಯವಾಗಿ ಐದು ಯುದ್ಧ ವಿಮಾನಗಳು ಇರುತ್ತವೆ.
ಇಸ್ರೇಲ್ ಗಡಿಗಳ ಮೇಲೆ ಬಾಂಬ್ ದಾಳಿ: ಇಸ್ರೇಲ್ ತನ್ನ ಗಡಿಗಳಿಗೆ ಹಾಕಿದ್ದ ಬೇಲಿಯನ್ನು ಹಮಾಸಸ್ ಉಗ್ರರು ಬುಲ್ಡೋಜರ್ ಬಳಸಿ ಕೆಡವಿದ್ದಾರೆ. ಇನ್ನೂ ಕೆಲವು ಕಡೆ ಬಾಂಬ್ ಹಾಕಿ ಉಡಾಯಿಸಿದ್ದಾರೆ. ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿರುವಂತೆ, 545 ಗಾಯಾಳುಗಳನ್ನು ದೇಶಾದ್ಯಂತ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್‌ನ ಅತಿದೊಡ್ಡ ವಿದ್ಯುತ್ ಸ್ಥಾವರದ ಮೇಲೆ ಬಾಂಬ್: ಅಶ್ಕೆಲೋನ್‌ನ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇಸ್ರೇಲ್‌ನ ಎರಡನೇ ಅತಿದೊಡ್ಡ ವಿದ್ಯುತ್ ಸ್ಥಾವರ ಎಂದು ಕರೆಯಲ್ಪಡುವ ರುಟೆನ್‌ಬರ್ಗ್ ಪವರ್ ಸ್ಟೇಷನ್ ಹಮಾಸ್‌ನ ರಾಕೆಟ್ ದಾಳಿ ಮಾಡಿದೆ.
ಇಸ್ರೇಲ್ ವಿರುದ್ಧ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ, ಮುಸ್ಲಿಮರಿಗೆ ಮಸೀದಿ ಲೌಡ್‌ಸ್ಪೀಕರ್ ಸಂದೇಶ!
ದಾಳಿ ಖಂಡಿಸಿದ ಸ್ಪೇನ್: ಸ್ಪೇನ್‌ನ ಹಂಗಾಮಿ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಇಸ್ರೇಲ್ ವಿರುದ್ಧ ಗಾಜಾದಿಂದ ದಾಳಿಯನ್ನು ಖಂಡಿಸಿದ್ದಾರೆ. "ಗಾಜಾದಿಂದ ಇಸ್ರೇಲ್ ವಿರುದ್ಧದ ಅತ್ಯಂತ ಗಂಭೀರವಾದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ' ಎಂದು ಹೇಳಿದೆ.
ಹಮಾಸ್ ಉಗ್ರರು ಪದೇ ಪದೇ ಇಸ್ರೇಲ್ ಮೇಲೆ ದಾಳಿ ಮಾಡೋದ್ಯಾಕೆ? ಯಾಕಿಷ್ಟು ದ್ವೇಷ? ವಿವರ ಇಲ್ಲಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ