
ಗಾಜಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಲ್ಲಿ 7 ವಾರದ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ಕದನ ವಿರಾಮ ಜಾರಿಗೆ ಬಂದಿದೆ. 4 ದಿನದ ಕದನ ವಿರಾಮ ಅಂಗವಾಗಿ ಶುಕ್ರವಾರ ಇಸ್ರೇಲ್‌ನ 13 ಹಾಗೂ ಥಾಯ್ಲೆಂಡ್‌ನ 12 ಜನ ಸೇರಿದಂತೆ 25 ಒತ್ತೆಯಾಳುಗಳಯನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಒಪ್ಪಂದದ ಅನ್ವಯ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ರೆಡ್‌ಕ್ರಾಸ್ (Redcross) ಸಂಸ್ಥೆಗೆ ಒಪ್ಪಿಸಿದ್ದಾರೆ. ಬಳಿಕ ರೆಡ್‌ಕ್ರಾಸ್‌ನವರು ಗಾಜಾ-ಇಸ್ರೇಲ್ (Gaza Israel Border) ಗಡಿಯಲ್ಲಿ ಅವರನ್ನು ಇಸ್ರೇಲ್ ವಶಕ್ಕೆ ಒಪ್ಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾಪಡೆ 39 ಮಂದಿ ಯುದ್ಧಕೈದಿಗಳನ್ನು ಬಿಡುಗಡೆ ಮಾಡುವ ಪಟ್ಟಿ ಸಿದ್ಧಪಡಿಸಿ ಇಟ್ಟುಕೊಂಡಿದೆ.
ಆಸ್ಪತ್ರೆಗಳೇ ಹಮಾಸ್ ಉಗ್ರರ ತಂಗುದಾಣ, ಗಾಜಾ ಶಿಫಾ ಆಸ್ಪತ್ರೆಯಲ್ಲಿ ವಿದೇಶಿ ಒತ್ತೆಯಾಳುಗಳು ಪತ್ತೆ
4 ದಿನಗಳ ಕದನ ವಿರಾಮಕ್ಕೆ (Ceasefire) ಉಭಯ ಪಂಗಡಗಳು ಇತ್ತೀಚೆಗೆ ಒಪ್ಪಿದ್ದು, ಹಮಾಸ್‌ನವರು ಒಟ್ಟು 50 ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿದ್ದಾರೆ. ಇಸ್ರೇಲ್ 150 ಜನರ ಬಿಡುಗಡೆಗೆ ಸಮ್ಮತಿಸಿವೆ. ಯುದ್ಧಕೈದಿಗಳು, ಮಹಿಳೆಯರು ಮತ್ತು ಅಪ್ರಾಪ್ತರು ಸೇರಿದಂತೆ 150 ಮಂದಿಯನ್ನು ಬಿಡುಗಡೆ ಮಾಡಲು ಇಸ್ರೇಲ್ ಸಹ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಗಾಜಾಗೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳನ್ನು ಸಹ ಪೂರೈಕೆ ಮಾಡಲು ಒಪ್ಪಿಕೊಂಡಿದೆ.
ಗಾಜಾ ಶಾಂತ:
ಈ ನಡುವೆ, ಶುಕ್ರವಾರ ಕದನ ವಿರಾಮ ಘೋಷಣೆಯಾದ ಬಳಿಕ ಗಾಜಾಪಟ್ಟಿಯಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೆ ಆಗಮಿಸುತ್ತಿದ್ದ ಸರಕು ಹಡಗನ್ನು ಅಪಹರಿಸಿದ ಯೆಮೆನ್ ಉಗ್ರರ ಗುಂಪು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ