India Super Power Country: ಭಾರತವೇ ಜಗತ್ತಿನ ಭವಿಷ್ಯ, ಸೂಪರ್‌ ಪವರ್ ದೇಶ: ಇಸ್ರೇಲ್‌ ಬಣ್ಣನೆ

Kannadaprabha News, Ravi Janekal |   | Kannada Prabha
Published : Nov 05, 2025, 01:15 PM IST
israel foreign minister Gideon saar visit india

ಸಾರಾಂಶ

ಭಾರತ ಪ್ರವಾಸದಲ್ಲಿರುವ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಭಾರತವನ್ನು 'ಜಾಗತಿಕ ಮಹಾಶಕ್ತಿ' ಮತ್ತು 'ಭವಿಷ್ಯ' ಎಂದು ಬಣ್ಣಿಸಿದ್ದಾರೆ. ಹಮಾಸ್ ದಾಳಿಯ ನಂತರ ಪ್ರಧಾನಿ ಮೋದಿ ಮೊದಲು ಕರೆ ಮಾಡಿದ್ದನ್ನು ಸ್ಮರಿಸಿದ ಅವರು, ಇಸ್ರೇಲ್ ಮತ್ತು ಭಾರತದ ಸಂಬಂಧ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.

ನವದೆಹಲಿ (ನ.5): ಭಾರತ ಜಾಗತಿಕ ಮಹಾಶಕ್ತಿ. ಭಾರತವೇ ಭವಿಷ್ಯ. ಇಸ್ರೇಲ್ ಸಣ್ಣದು, ಆದರೆ ನಾವು ಪ್ರಾದೇಶಿಕ ಶಕ್ತಿಯಾಗಿದ್ದೇವೆ. ಇಸ್ರೇಲ್ ಮತ್ತು ಭಾರತದ ಸಂಬಂಧ ಎಂದಿಗಿಂತ ಬಲಿಷ್ಠವಾಗಿದೆ’ ಎಂದು ಇಸ್ರೇಲ್‌ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಬಣ್ಣಿಸಿದ್ದಾರೆ.

3 ದಿನ ಭಾರತ ಪ್ರವಾಸದಲ್ಲಿರುವ ಅವರು ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದರು.

‘ನಾವು ಭಾರತದ ಸ್ನೇಹಕ್ಕೆ ಆಭಾರಿಯಾಗಿದ್ದೇವೆ. 2023ರ ಅ.7ರಂದು ಹಮಾಸ್‌ ಉಗ್ರರು ನಮ್ಮ ಮೇಲೆ ದಾಳಿ ಮಾಡಿದರು. ಆ ಭೀಕರ ದಿನದಂದು ಪ್ರಧಾನಿ ನೆತನ್ಯಾಹು ಅವರಿಗೆ ಕರೆ ಮಾಡಿದ ಮೊದಲ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ನಾವು ಮರೆಯುವುದಿಲ್ಲ. 

ಇದನ್ನೂ ಓದಿ: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್‌, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್‌!

ಭಾರತ ಜಾಗತಿಕ ಮಹಾಶಕ್ತಿ. ಭಾರತವೇ ಭವಿಷ್ಯ. ಇಸ್ರೇಲ್ ಚಿಕ್ಕದಾಗಿದೆ, ಆದರೆ ನಾವು ಪ್ರಾದೇಶಿಕ ಶಕ್ತಿ. ನಾವಿಬ್ಬರೂ ಒಟ್ಟಾಗಿ ಉತ್ತಮ ಕೆಲಸಗಳನ್ನು ಮಾಡಬಹುದು ಮತ್ತು ನಾವು ಖಂಡಿತವಾಗಿಯೂ ಮಾಡುತ್ತೇವೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!