ಇಂಡೋನೇಷಿಯಾ ನಿರ್ಧಾರ ಆ್ಯಪಲ್ ಮಾತ್ರವಲ್ಲ ಹಲವರು ಬೆಚ್ಚಿ ಬಿದ್ದಿದ್ದಾರೆ. ಇಂಡೋನೇಷಿಯಾದಲ್ಲಿ ಐಫೋನ್ 16 ಬ್ಯಾನ್ ಮಾಡಲಾಗಿದೆ. ಬಳಸುವುದು ಅಕ್ರಮಕ್ಕೆ ಸಮವಾಗಿದೆ. ವಿದೇಶಿ ಪ್ರವಾಸಿಗರಿಗೂ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಇಂಡೋನೇಷಿಯಾ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ?
ನುಸಾಂತರ(ಅ.26) ಆ್ಯಪಲ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಐಫೋನ್ 16ಗೆ ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಭಾರತದಲ್ಲಿ ಸರದಿ ಸಾಲಿನಲ್ಲಿ ನಿಂತು ಐಫೋನ್ 16 ಖರೀದಿಸಿದ್ದಾರೆ. ಆದರೆ ಪಕ್ಕದ ಇಂಡೋನೇಷಿಯಾದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಹಲವರು ಶಾಕ್ ಆಗಿದ್ದಾರೆ. ಇಂಡೋನೇಷಿಯಾದಲ್ಲಿ ಐಫೋನ್ 16 ಬ್ಯಾನ್ ಮಾಡಿದ್ದಾರೆ. ಕೇವಲ ಮಾರಾಟ ಮಾತ್ರವಲ್ಲ, ಬಳಕೆ ಮಾಡುವುದು ಅಕ್ರಮವಾಗಿದೆ. ವಿದೇಶದಿಂದ ಆಮದು ಮಾಡಿಕೊಳ್ಳವುದು ಕೂಡ ಬ್ಯಾನ್ ಮಾಡಲಾಗಿದೆ.
ಇಂಡೋನೇಷಿಯಾದಲ್ಲಿ ನಾಗರೀಕರು ಐಫೋನ್ 16 ಬಳಕೆ ಮಾಡುವಂತಿಲ್ಲ. ಸರ್ಕಾರದ ಈ ನಿರ್ಧಾರ ವಿದೇಶಿ ಪ್ರವಾಸಿಗರಿಗೂ ಸಂಕಷ್ಟ ತಂದಿದೆ. ಎಲ್ಲಾ ದೇಶಗಳಲ್ಲಿ ಆ್ಯಪಲ್ ಫೋನ್ 16 ಬಳಕೆ ಹೆಚ್ಚಾದರೆ ಇಂಡೋನೇಷಿಯಾದಲ್ಲಿ ಮಾತ್ರ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಇದಕ್ಕೆ ಕೆಲ ಪ್ರಮುಖ ಕಾರಣಗಳಿವೆ. ಒಂದು ಐಫೋನ್ 16 ಫೋನ್‌ಗೆ ಇಂಡೋನೇಷಿಯಾ ಸರ್ಕಾರ ಐಎಂಇಐ ಪ್ರಮಾಣ ಪತ್ರ ನೀಡಿಲ್ಲ, ಇನ್ನು ಟಿಕೆಡಿಎನ್ ಪ್ರಮಾಣ ಪತ್ರವೂ ಪೂರ್ಣಗೊಂಡಿಲ್ಲ.
undefined
ಬೆಂಗಳೂರಿನ ಹೊಸ ಆ್ಯಪಲ್ ಸ್ಟೋರ್‌ನಲ್ಲಿ ಉದ್ಯೋಗ, ಲಕ್ಷ ರೂ ಸಂಬಳದ 400 ಹುದ್ದೆಗೆ ನೇಮಕಾತಿ!
ಐಫೋನ್ 16 ನಿಷೇಧಕ್ಕೆ ಕಾರಣ
ಆ್ಯಪಲ್ ಐಫೋನ್ 16ಗೆ ನಿಷೇಧ ಹೇರಲಾಗಿದೆ. ಆದರೆ ಐಫೋನ್ 15 ಸೇರಿದಂತೆ ಈ ಹಿಂದಿನ ಸೀರಿಸ್‌ಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಇಷ್ಟೇ ಅಲ್ಲ ಈ ಸೀರಿಸ್‌ಗಳನ್ನು ಬಳಕೆ ಮಾಡಲು ಅನುಮತಿ ಇದೆ. ಇಂಡೋನೇಷಿಯಾದಲ್ಲಿ ವಿದೇಶದ ಯಾವುದೇ ಉತ್ಪನ್ನ, ವಸ್ತುಗಳು ಮಾರಾಟ ಮಾಡಲು ಶೇಕಡಾ 40 ರಷ್ಟು ಸ್ಥಳೀಯತೆ ಇರಬೇಕು. ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ತಯಾರಿಸಿದ ವಸ್ತುಗಳನ್ನು ನೇರವಾಗಿ ಇಂಡೋನೇಷಿಯಾದಲ್ಲಿ ಮಾರಾಟ ಮಾಡವಂತಿಲ್ಲ. ಉತ್ಪನ್ನದಲ್ಲಿ ಕನಿಷ್ಠ 40ರಷ್ಟು ಇಂಡೋನೇಷಿಯಾ ಅಥವಾ ಸ್ಥಳೀಯ ಕೊಡುಗೆ ಇರಬೇಕು. ಆದರೆ ಆ್ಯಪಲ್ ಈ ನಿಯಮ ಉಲ್ಲಂಘಿಸಿದೆ.
ಆ್ಯಪಲ್ ಈಗಾಗಲೇ ಇಂಡೋನೇಷಿಯಾದಲ್ಲಿ ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ವಿಂಗ್ ಆರಂಭಕ್ಕೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ 95 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿದೆ. ಆದರೆ ಇನ್ನು 14.75 ಮಿಲಿಯನ್ ಅಮೆರಿಕನ್ ಡಾಲರ್ ಬಾಕಿ ಉಳಿಸಿಕೊಂಡಿದೆ. ಇಷ್ಟೇ ಅಲ್ಲ ಈ ರೀಚರ್ಚ್ ಆ್ಯಂಡ್ ಡೆವಲಪ್‌ಮೆಂಟ್ ವಿಂಗ್ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಐಫೋನ್ 16 ಉತ್ಪನ್ನದಲ್ಲಿ ಇಂಡೋನೇಷಿಯಾ ಸ್ಥಳೀಯ ಕೊಡುಗೆ ಶೂನ್ಯವಾಗಿದೆ. ಇಂಡೋನೇಷಿಯಾ ನೀತಿಗೆ ವಿರುದ್ದವಾಗಿರುವ ಕಾರಣ ಐಫೋನ್ 16 ಮಾರಾಟ, ಬಳಕೆಯನ್ನು ಇಂಡೋನೇಷಿಯಾದಲ್ಲಿ ನಿಷೇಧಿಸಲಾಗಿದೆ.
ಎಪ್ರಿಲ್ ತಿಂಗಳಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಜಖರ್ತಾಗೆ ಭೇಟಿ ನೀಡಿದ್ದ ವೇಳೆ ಕೆಲ ಘೋಷಣೆ ಮಾಡಿದ್ದರು. ಈ ವೇಳೆ ಇಂಡೋನೇಷಿಯಾದಲ್ಲಿ ಉತ್ಪಾದಕ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದ್ದರು.ಆದರೆ ಈ ಮೊದಲು ಭರವಸೆ ನೀಡಿ ಆರಂಭಿಸಿರುವ ರೀಚರ್ಚ್ ಘಟಕ ಇನ್ನು ಆರಂಭಗೊಂಡಿಲ್ಲ ಎಂದು ಇಂಡೋನೇಷಿಯಾ ಕೈಗಾರಿಕಾ ಸಚಿವಾಲಯದ ವಕ್ತಾರ ಫ್ಯಾಬ್ರಿ ಹೆನ್ರಿ ಆ್ಯಂಟೋನಿ ಹೇಳಿದ್ದಾರೆ.
ಫೆಸ್ಟಿವಲ್ ಸೇಲ್ ಮಿಸ್ ಮಾಡಿಕೊಂಡ್ರಾ? ಇದೀಗ 27,000 ರೂ ಡಿಸ್ಕೌಂಟ್‌ನಲ್ಲಿ ಐಫೋನ್ 15 ಲಭ್ಯ!
ವಿದೇಶಗಳಿಂದ ಇಂಡೋನೇಷಿಯಾಗೆ ತೆರಳಿರುವ ಪ್ರವಾಸಿಗರು ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಇಂಡೋನೇಷಿಯಾದಲ್ಲಿ ಐಫೋನ್ 16 ಬಳಕೆ ಕೂಡ ನಿಷೇಧಿಸಲಾಗಿದೆ. ಆದರೆ ಪ್ರವಾಸಿಗರು ಸಮಸ್ಯೆಯಾಗದಂತೆ ಇಂಡೋನೇಷಿಯಾ ಸ್ಪಷ್ಟ ನಿರ್ದೇಶನ ನೀಡಿದೆ. ಪ್ರವಾಸಿಗರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಇಂಡೋನೇಷಿಯಾದ ಈ ನಿರ್ಧಾರ ಆ್ಯಪಲ್ ಸಂಕಷ್ಟ ಹೆಚ್ಚಿಸಿದೆ. ಆ್ಯಪಲ್ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಇರುವ ಇಂಡೋನೇಷಿಯಾದ ನಿರ್ಧಾರ ಉದ್ಯಮಕ್ಕೆ ತೀವ್ರ ಹೊಡೆತ ನೀಡಿದೆ. ಇದೀಗ ಆ್ಯಪಲ್ ಕಂಪನಿ, ಇಂಡೋನೇಷಿಯಾ ಸರ್ಕಾರ ಜೊತೆ ಮಾತುಕತೆಗೆ ಮುಂದಾಗಿದೆ. ಅತೀ ದೊಡ್ಡ ಮಾರುಕಟ್ಟೆ ಕಳೆದುಕೊಳ್ಳಲು ಇಷ್ಟವಿಲ್ಲದ ಆ್ಯಪಲ್ ಶೀಘ್ರದಲ್ಲೇ ಹೂಡಿಕೆ ಮಾಡುವ ಸಾಧ್ಯತೆ ಇದೆ.