ಹಮಾಸ್ ಉಗ್ರರ ವಿರುದ್ದ ಸತತ ದಾಳಿ, ಗಾಜಾದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸ್ರೇಲ್!

By Suvarna News  |  First Published Oct 8, 2023, 4:59 PM IST

ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿದೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿ ದಾಳಿ ತೀವ್ರಗೊಳಿಸಿದೆ. ಇದೀಗ ಗಾಜಾದಲ್ಲಿರುವ ಐತಿಹಾಸಿಕ ಅಲ್ ಅಮೀನ್ ಮೊಹಮ್ಮದ್ ಮಸೀದಿಯನ್ನೇ ಧ್ವಂಸಗೊಳಿಸಲಾಗಿದೆ. ಗಾಜಾದ ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿದೆ.


ಜೆರುಸಲೇಮ್(ಅ.08)  ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಗೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, 1,600ಕ್ಕೂ ಹೆಚ್ಚು ಮಂದಿಯನ್ನು ವಶದಲ್ಲಿಟ್ಟುಕೊಂಡಿದ್ದಾರೆ. ಇತ್ತ 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 7000 ರಾಕೆಟ್ ದಾಳಿ ಹಾಗೂ ಇಸ್ರೇಲ್ ಒಳ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ಸುರಿಮಳೆಗೈದ ಹಮಾಸ್ ಉಗ್ರರ ಅಟ್ಟಹಾಸಕ್ಕೆ ಇಸ್ರೇಲ್ ಬೆಚ್ಚಿ ಬಿದ್ದಿತ್ತು. ಈ ದಾಳಿ ಬೆನ್ನಲ್ಲೇ ಇಸ್ರೇಲ್ ಯುದ್ಧ ಘೋಷಿಸಿದೆ. ಇದೀಗ ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದೆ. ಏರ್‌ಸ್ಟ್ರೈಕ್ ಮೂಲಕ ಗಾಜಾ ನಗರವನ್ನೇ ಧ್ವಂಸಗೊಳಿಸುತ್ತಿದೆ. ಈ ವೇಳೆ ಗಾಜಾದಲ್ಲಿರುವ ಐತಿಹಾಸಿಕ ಅಲ್ ಅಮೀನ್ ಮೊಹಮ್ಮದ್ ಮಸೀದಿಯನ್ನೂ ಇಸ್ರೇಲ್ ಧ್ವಂಸಗೊಳಿಸಿದೆ.

ಶನಿವಾರ ಹಮಾಸ್ ಉಗ್ರರು ಅಲ್ ಅಕ್ಸ ಫ್ಲಂಡ್ ಆಪರೇಶನ್ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇತ್ತ ಇಸ್ರೇಲ್ ಆಪರೇಶನ್ ಸ್ವಾರ್ಡ್ ಆಫ್ ಐರನ್ ದಾಳಿಯನ್ನು ಆರಂಭಿಸಿದೆ. ಗಾಜಾ ಪಟ್ಟಿಯಲ್ಲಿನ ಹಮಾಸ್ ಉಗ್ರರ ತಾಣಗಳು, ಕಟ್ಟಡಗಳು, ಹಮಾಸ್ ಉಗ್ರರ ನಾಯಕರ ಮನೆ, ಮಸೀದಿಗಳು ಧ್ವಂಸಗೊಂಡಿದೆ. ಇಸ್ರೇಲ್ ಏರ್‌ ಸ್ಮಾರ್ಟ್‌ಬಾಂಬ್ ಬಳಸಿ ಟಾರ್ಗೆಟ್ ಧ್ವಂಸಮಾಡುತ್ತಿದೆ. ಇಸ್ರೇಲ್ ದಾಳಿ ಆರಂಭಿಸುತ್ತಿದ್ದಂತೆ ಹಮಾಸ್ ಉಗ್ರರು ಐತಿಹಾಸಿಕ ಅಲ್ ಅಮೀನ್ ಮೊಹಮ್ಮದ್ ಮಸೀದಿಯಲ್ಲಿ ಅಡಗಿಕುಳಿತಿದ್ದಾರೆ. ಹೀಗಾಗಿ ಮಸೀದಿ ಮೇಲೆ ದಾಳಿನಡೆಸಿ ಧ್ವಂಸ ಮಾಡಲಾಗಿದೆ.

Tap to resize

Latest Videos

ಹಮಾಸ್ ಉಗ್ರ ದಾಳಿ ಖಂಡಿಸಿದ ಪ್ರಧಾನಿ ಮೋದಿ , ಇಸ್ರೇಲ್ ಬೆಂಬಲಕ್ಕೆ ನಿಂತ ಭಾರತ!

ಹಮಾಸ್ ಉಗ್ರರ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥ ಕಚೇರಿ ಮೇಲೂ ಇಸ್ರೇಲ್ ದಾಳಿ ನಡೆಸಿದೆ. ಹಲವು ಉಗ್ರರು ಈದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ವಿರುದ್ಧ ನಡೆಸಿದ ದಾಳಿಗೆ ತಕ್ಕ ಪ್ರತೀಕಾರ ತೀರಿಸುವ ಶಪಥ ಮಾಡಿರುವ ಇಸ್ರೇಲ್ ಗಾಜಾದ ಮೂಲೆ ಮೂಲೆಯಲ್ಲಿ ಸ್ಮಾರ್ಟ್‌ಬಾಂಬ್ ದಾಳಿ ನಡೆಸುತ್ತಿದೆ. ಗಾಜಾದಲ್ಲಿರುವ ಹಲವು ಮಸೀದಿಗಳು ಧ್ವಂಸಗೊಂಡಿದೆ.

 

The Al-Amin Muhammad Mosque in Khan Yunis,southern Gaza was completely destroyed in an Israeli airstrike.This mosque was used by Hamas terrorists to hide after a rocket attack on Israel.Over 50 Palestinian terrorists were hoorified in this strike.… pic.twitter.com/mHOCvzVj3e

— Baba Banaras™ (@RealBababanaras)

 

ಇಸ್ರೇಲ್ ವಾಯು ಸೇನೆ ಒಂದೊಂದೆ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ವಾಯು ಸೇನೆ ತನ್ನ ದಾಳಿಯ ವಿಡಿಯೋಗಳನ್ನು ಪೋಸ್ಟ್ ಮಾಡಿದೆ. ಇಷ್ಟೇ ಅಲ್ಲ ಇಸ್ರೇಲ್ ಹಲವು ಸಚಿವರು ದಾಳಿ ಕುರಿತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮಾತುಕತೆ ಇಲ್ಲ, ಈ ರೀತಿ ದಾಳಿ ಮತ್ತಷ್ಟು ಎಂದು ಬರೆದುಕೊಂಡಿದ್ದಾರೆ.

ಒಬ್ಬ ಉಗ್ರರನನ್ನೂ ಉಳಿಸಲ್ಲ, ಹಮಾಸ್ ಉಗ್ರರ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಆರಂಭ!

ಇಸ್ರೇಲ್ ದಾಳಿಗೆ ಗಾಜಾ ಪಟ್ಟಿಯಲ್ಲಿನ 230ಕ್ಕೂ ಉಗ್ರರು ಹತರಾಗಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಗಾಜಾ ಪಟ್ಟಿಯಲ್ಲಿರುವ ನಾಗರೀಕರು ತಕ್ಷಣವೇ ಜಾಗ ಖಾಲಿ ಮೂಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾಹು ಸೂಚನೆ ನೀಡಿದ್ದಾರೆ. ಇಸ್ರೇಲ್ ಸೇನೆ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಲಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ನೇತ್ಯಾಹು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಸೇನೆ ಹಮಾಸ್ ಉಗ್ರರನ್ನು ಹುಡುಕಿ ಹತ್ಯೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

Breaking : The al-Amin Muhammad Mosque in Gaza's Khan Younis city was reportedly destroyed in an Israeli attack. Local sources have confirmed that Israel warplanes targeted the mosque, resulting in its destruction. … pic.twitter.com/kLsS5MdgdG

— Muhammad Usman (@ManiSays0)

 

click me!