ವೈಟ್ ಹೌಸ್ ನಲ್ಲಿ ಭೂತ ಕಾಟ! ಓಡಾಡ್ತಿರೋ ಆತ್ಮ ಯಾರದ್ದು?

By Roopa Hegde  |  First Published Nov 7, 2024, 5:43 PM IST

ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕಾವನ್ನು ಆಳುವ ನಾಯಕ ವೈಟ್ ಹೌಸ್ ನಲ್ಲಿ ವಾಸಮಾಡ್ತಾನೆ. ಅತ್ಯಂತ ಸುರಕ್ಷಿತ ಈ ಸ್ಥಳದಲ್ಲೇ ಭಯ ಆವರಿಸಿದೆ. ವೈಟ್ ಹೌಸ್ ಭೂತದ ವಿಷ್ಯಕ್ಕೆ ಸುದ್ದಿಯಲ್ಲಿದೆ.      
 


ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (America 47th President Donald Trump) ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ವಿರುದ್ಧ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ವೈಟ್ ಹೌಸ್ ಮತ್ತೆ ಸುದ್ದಿಯಲ್ಲಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಕುಳಿತು ಅಧಿಕಾರ ನಡೆಸುವ ವೈಟ್ ಹೌಸ್ (White House ) ನಲ್ಲಿ ಭೂತ (House)ವಿದ್ಯಾ? ಹೀಗೊಂದು ಪ್ರಶ್ನೆ ಅನೇಕ ವರ್ಷಗಳಿಂದ ಹರಿದಾಡ್ತಿದೆ. 

18ನೇ ಶತಮಾನದಲ್ಲಿ ನಿರ್ಮಿಸಲಾದ ಶ್ವೇತಭವನಕ್ಕೆ ಹಲವು ಅಧ್ಯಕ್ಷರು ಭೇಟಿ ನೀಡಿ ತಮ್ಮ ವಿಭಿನ್ನ ಅನುಭವ ಹಂಚಿಕೊಂಡಿದ್ದಾರೆ. ಶ್ವೇತಭವನವನ್ನು ಭೂತದ ಮಹಲು ಎಂದು ಕರೆಯಲಾಗುತ್ತದೆ.  ವೈಟ್ ಹೌಸ್ ನಲ್ಲಿ ವಿಚಿತ್ರ ಮತ್ತು ಭಯಾನಕ ಶಬ್ದಗಳು ಕೇಳಿ ಬರುತ್ತವೆ ಎಂಬ ಸುದ್ದಿ ಇದೆ. ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ವೈಟ್ ಹೌಸ್ ನಲ್ಲಿ ಅನೇಕ ಭಯ ಹುಟ್ಟಿಸುವ ಘಟನೆಗಳು ನಡೆದಿವೆ.  ದೇಶದ ಮೂರನೇ ಅಧ್ಯಕ್ಷ ಥಾಮಸ್ ಜೆಫರ್ಸನ್ ಕೂಡ ಇದಕ್ಕೆ ಸಾಕ್ಷ್ಯವಾಗಿದ್ದಾರೆ. ಥಾಮಸ್ ಜೆಫರ್ಸನ್  ವೈಟ್ ಹೌಸ್ ಸಂಸ್ಥಾಪಕರು.

Tap to resize

Latest Videos

undefined

16 ವರ್ಷದೊಳಗಿನ ಮಕ್ಕಳಿಗೆ ಫೇಸ್‌ಬುಕ್, ಇನ್‌ಸ್ಟಾ ಸೇರಿ ಸೋಶಿಯಲ್ ಮೀಡಿಯಾ ಬ್ಯಾನ್!

ಹ್ಯಾರಿ ಎಸ್. ಟ್ರೂಮನ್ ಬರೆದ ಪತ್ರದಲ್ಲಿ ಏನಿದೆ? : ಅಧ್ಯಕ್ಷ ಹ್ಯಾರಿ ಎಸ್. ಟ್ರೂಮರ್ ಬರೆದ ಪತ್ರವೊಂದರಲ್ಲಿ ಈ ಬಗ್ಗೆ ಉಲ್ಲೇಖವಿದೆ. ವೈಟ್ ಹೌಸ್ ನಲ್ಲಿ ಇರಲು ಅವರು ಭಯಪಡುತ್ತಿದ್ದರು ಎಂಬುದು ಈ ಪತ್ರದಿಂದ ಸ್ಪಷ್ಟವಾಗುತ್ತದೆ. ಹ್ಯಾರಿ. ಎಸ್. 1946 ರಲ್ಲಿ ಅಧ್ಯಕ್ಷರಾಗಿದ್ದರು. ಅವರು ತಮ್ಮ ಪತ್ನಿಗೆ ಬರೆದ ಪತ್ರ ಈಗ್ಲೂ ವೈಟ್ ಹೌಸ್ ಲೈಬ್ರರಿ ಮತ್ತು ಮ್ಯೂಸಿಯಂನಲ್ಲಿದೆ. ನನಗೆ ಭಯವಾಗಿತ್ತು. ನಾನು ಬಟ್ಟೆಯನ್ನು ಧರಿಸಿ ಎಲ್ಲ ಕಡೆ ಹುಡುಕಾಟ ನಡೆಸಿದೆ. ನಿನ್ನ ಬೆಡ್ ರೂಮಿಗೆ ಕೂಡ ಹೋಗಿ ಬಂದೆ. ಆದ್ರೆ ಅಲ್ಲಿ ಯಾರೂ ಇರಲಿಲ್ಲ. ಮತ್ತೆ ನನ್ನ ಬೆಡ್ ರೂಮಿಗೆ ವಾಪಸ್ ಬರುವ ವೇಳೆ ನಿನ್ನ ಬೆಡ್ ರೂಮ್ ಬಳಿ ಹೆಜ್ಜೆ ಗುರುತಿತ್ತು. ಒಂದು ಗಂಟೆಗಳ ಕಾಲ ಯಾವುದೇ ಸಿಬ್ಬಂದಿ ಇರಲಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ. 

ಭಯಗೊಂಡಿದ್ದ ಜಾರ್ಜ್ ಬುಷ್ ಹೆಣ್ಣು ಮಕ್ಕಳು : ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ಬುಷ್ ಮಕ್ಕಳಿಗೂ ಇದ್ರ ಅನುಭವವಾಗಿದೆ. 2018 ರಲ್ಲಿ ಮಾಜಿ ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ಅವರ ಮಗಳು ಜೆನ್ನಾ ಮತ್ತು ಬಾರ್ಬರಾ ಅವರಿಗೆ ಲಿಂಕನ್ ಅವರ ಕೊಠಡಿಯಿಂದ ಪಿಯಾನೋ ಸಂಗೀತದ ಧ್ವನಿ ಕೇಳಿಸಿದೆ. ಇದನ್ನು ಅವರು ದಿ ಕೆಲ್ಲಿ ಕ್ಲಾರ್ಕ್ಸನ್ ಶೋನಲ್ಲಿ ಬಹಿರಂಗಪಡಿಸಿದ್ದರು.

ಅಮೆರಿಕಕ್ಕೆ 2ನೇ ಬಾರಿ ಅಧ್ಯಕ್ಷರಾಗಿ ಫೀನಿಕ್ಸ್‌ನಂತೆ ಎದ್ದುಬಂದ ಡೊನಾಲ್ಡ್‌ ಟ್ರಂಪ್‌: ಈ ಸಲವೂ ಇಲ್ಲ

ವೈಟ್ ಹೌಸ್ ನಲ್ಲಿ ಇರೋದು ಯಾರ ಆತ್ಮ? : ಯುಎಸ್ಎ ಟುಡೆ  ವೈಟ್ ಹೌಸ್ ನಲ್ಲಿ ಅಬ್ರಹಾಂ ಲಿಂಕನ್ ಆತ್ಮವಿದೆ ಎಂದು ವರದಿ ಮಾಡಿದೆ. ಅಬ್ರಹಾಂ ಲಿಂಕನ್ ಅಮೆರಿಕದ 16 ನೇ ಅಧ್ಯಕ್ಷರಾಗಿದ್ದರು. ಅಬ್ರಹಾಂ ಲಿಂಕನ್ ಅವರನ್ನು 1865 ರಲ್ಲಿ ಹತ್ಯೆ ಮಾಡಲಾಯ್ತು. ಗಮನಾರ್ಹ. ವೈಟ್ ಹೌಸ್ ನ ಹಳದಿ ಓವಲ್ ರೂಮ್ ಮತ್ತು ಲಿಂಕನ್ ಬೆಡ್‌ರೂಮ್‌ನಲ್ಲಿ ಅವರ ಆತ್ಮ ಅಲೆದಾಡುತ್ತಿರುತ್ತದೆ ಎಂದು ಈಗ್ಲೂ ಜನರು ನಂಬುತ್ತಾರೆ. ಜಾರ್ಜ್ ಬುಷ್ ಮಕ್ಕಳಿಗೆ ಪಿಯಾನೋ ಶಬ್ಧ ಕೇಳಿಸಿದ್ದು ಕೂಡ ಇದೇ ಲಿಂಕನ್ ಕೊಠಡಿಯಿಂದ. ಬರೀ ಲಿಂಕನ್ ಆತ್ಮ ಮಾತ್ರವಲ್ಲ, ವೈಟ್ ಹೌಸ್ ನಲ್ಲಿ ಅಮೆರಿಕದ ಎರಡನೇ ಮಹಿಳೆ ಅಬಿಗೈಲ್ ಆಡಮ್ಸ್ ಅವರ ಆತ್ಮವೂ ಇಲ್ಲಿದೆ ಎಂದು ನಂಬುತ್ತಾರೆ. ಅವರ ರೂಮಿನಲ್ಲಿ ಒಳ ಉಡುಪು ಕೂಡ ಸಿಕ್ಕಿದೆ. 
 

click me!