ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಟಿಕ್‌ಟಾಕ್ ಸೇರಿದಂತೆ ಎಲ್ಲಾ ರೀತಿಯ ಸೋಶಿಯಲ್ ಮೀಡಿಯಾ ಬಳಕೆಯನ್ನು 16 ವರ್ಷದ ಮಕ್ಕಳಿಗೆ ನಿಷೇಧಿಸಲಾಗುತ್ತಿದೆ. ಈ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ಪ್ರಧಾನಿ ಘೋಷಿಸಿದ್ದಾರೆ.
ಸಿಡ್ನಿ(ನ.07) ಸೋಶಿಯಲ್ ಮೀಡಿಯಾ ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಅನ್ನೋ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾ ಗೀಳಿನಿಂದ ಹಲವರು ಬಲಿಯಾಗಿದ್ದಾರೆ, ಒಂದಷ್ಟು ಮಂದಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾ ಇದೀಗ ಆತಂಕ ಹೆಚ್ಚಿಸಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಇದೀಗ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡುವುದನ್ನು ನಿಷೇಧಿಸಲಾಗುತ್ತಿದೆ. ಈ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಹೇಳಿದ್ದಾರೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಕೆ 16 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಆ್ಯಂಟೋನಿ ಅಲ್ಬನಿಸ್, ಕಳೆದ ಕೆಲ ವರ್ಷಗಳಿಂದ ಸೋಶಿಯಲ್ ಮೀಡಿಯಾ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಈ ಸೋಶಿಯಲ್ ಮೀಡಿಯಾ ಮಕ್ಕಳಿಗೆ ಮಾರಕವಾಗಿದೆ. ಅವರ ಬೆಳವಣಿಗೆ ಕುಂಠಿತ ಮಾಡುತ್ತಿದೆ. ಸಮಸ್ಯೆಗೆ ಸಿಲುಕುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮೋಸ,ವಂಚನೆ ಸೇರಿದಂತೆ ಮಕ್ಕಳು ಹಲವು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಯಿಂದ ದೂರವಿಡುವಂತೆ ಹೊಸ ಕಾನೂನು ತರಲಾಗುತ್ತಿದೆ ಎಂದು ಆ್ಯಂಟೋನಿ ಅಲ್ಬನೀಸ್ ಹೇಳಿದ್ದಾರೆ.
ನಿಮ್ಮ ಫೋನ್ ಈ ಸಿಗ್ನಲ್ ನೀಡಿದರೆ ಯಾರೋ ಸ್ಕ್ರೀನ್ ರೆಕಾರ್ಡಿಂಗ್ ಮಾಡುತ್ತಿದ್ದಾರೆ ಎಂದರ್ಥ!
ಆಸ್ಟ್ರೇಲಿಯಾ ಕ್ಯಾಬಿನೆಟ್ ಈ ಕುರಿತು ಚರ್ಚಿಸಿದೆ. ಈಗಾಗಲೇ ಕರಡು ಕಾಯ್ದೆ ಸಿದ್ದಗೊಂಡಿದೆ. ಅಂತಿಮ ಹಂತದ ತಯಾರಿಗಳ ಬಳಿಕ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಶೀಘ್ರದಲ್ಲೇ ಹೊಸ ಸೋಶಿಯಲ್ ಮೀಡಿಯಾ ಮಸೂದೆ ಮಂಡಣೆಯಾಗಲಿದೆ. ಒಮ್ಮೆ ಮಸೂದೆ ಮಂಡನೆಯಾದ ಬಳಿಕ 12 ತಿಂಗಳಲ್ಲಿ ಕಾನೂನು ಆಗಿ ಜಾರಿಯಾಗಲಿದೆ ಎಂದು ಆ್ಯಂಟೋನಿ ಆಲ್ಬನಿಸ್ ಹೇಳಿದ್ದಾರೆ.
ಈ ಕಾಯ್ದೆಯಲ್ಲಿ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಯಿಂದ ದೂರವಿರುವಂತೆ ಮಾಡಲಿದೆ. ಇನ್ನು ಈ ಕುರಿತು ಪೋಷಕರು ಎಚ್ಚರವಹಿಸಬೇಕು ಎಂದು ಅಲ್ಬನಿಸ್ ಹೇಳಿದ್ದಾರೆ. ಪೋಷಕರ ಅನುಮತಿ ಇಲ್ಲದೆ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವಂತಿಲ್ಲ. ಆಸ್ಟ್ರೇಲಿಯಾ ಈ ಕುರಿತು ಕಠಿಣ ನಿಮಯ ರೂಪಿಸಿದೆ. ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
ಕಳೆದ ವರ್ಷ ಫ್ರಾನ್ಸ್ ಇದೇ ರೀತಿಯ ನಿಯಮ ಜಾರಿಗೆ ಪ್ರಸ್ತಾವನೆ ಇಟ್ಟಿದೆ. 15 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಬ್ಯಾನ್ ಮಾಡಲು ಪ್ರಸ್ತಾವನೆ ಇಟ್ಟಿದೆ. ಸೋಶಿಯಲ್ ಮೀಡಿಯಾದಿಂದ ಫ್ರಾನ್ಸ್ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮ ಕುರಿತು ಅಧ್ಯಯನ ನಡೆಸಿ ಈ ಪ್ರಸ್ತಾವನೆ ಇಟ್ಟಿತ್ತು. ಇನ್ನು ಅಮೆರಿಕದಲ್ಲೂ ಇದೇ ರೀತಿ ನಿಯಮ ಜಾರಿಗೆ ಮುಂದಾಗಿದ್ದಾರೆ. 13 ವರ್ಷದೊಳಗಿನ ಮಕ್ಕಳನ್ನು ಸೋಶಿಯಲ್ ಮೀಡಿಯಾ ಬಳಕೆ ನಿಷೇಧಿಸಲು ಮುಂದಾಗಿದೆ.
ಭಾರತದಲ್ಲೂ ಈ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಮಕ್ಕಳನ್ನು ಸೋಶಿಯಲ್ ಮೀಡಿಯಾ ಬಳಕೆಯಿಂದ ನಿಷೇಧಿಸಬೇಕು ಅನ್ನೋದು ಹಲವರ ಒತ್ತಾಯ. ಹಲವು ವೇದಿಕೆಗಳಲ್ಲಿ ಈ ಕುರಿತು ಚರ್ಚೆಗಳು ನಡೆದಿದೆ. ಭಾರತದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ತುಸು ಹೆಚ್ಚು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅತೀಯಾದ ಬಳಕೆಯಿಂದ ಮಕ್ಕಳು ಮಾತ್ರವಲ್ಲ, ವಯಸ್ಕರು ದಾರಿ ತಪ್ಪುತ್ತಿದ್ದಾರೆ. ಹಲವು ಅವಘಡಗಳು, ದುರಂತಗಳು ಸಂಭವಿಸಿದೆ. ಇತ್ತೀಚಗೆ ರೀಲ್ಸ್ ಪ್ರಭಾವ ಹೆಚ್ಚಾಗುತ್ತಿದೆ. ರೀಲ್ಸ್ ಮಾಡಲು ಹೋಗಿ ಹಲವು ಜೀವ ಕಳೆದುಕೊಂಡಿದ್ದಾರೆ. ವಯಸ್ಕರ ರೀಲ್ಸ್ ಹುಚ್ಚಾಟಕ್ಕೆ ಮಕ್ಕಳು ಬೆಲೆ ತೆತ್ತ ಹಲವು ಘಟನೆಗಳು ನಡೆದಿದೆ. ಹಲವರು ರೀಲ್ಸ್ ವೇಳೆ ಮಾಡಿದ ಅಪಾಯಾಕಾರಿ ಸ್ಟಂಟ್‌ನಿಂದ ಗಂಭೀರವಾಗಿ ಗಾಯಗೊಂಡು ಘಟನೆಗಳು ನಡೆದಿದೆ.
ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಫೀಚರ್, ಫೋಟೋ ಕಳುಹಿಸುವಾಗ ಎಚ್ಚರ!